Ad Widget .

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ, ‘ಯಕ್ಷತರಂಗ’ ಯಕ್ಷಗಾನ ತರಬೇತಿ ಕಾರ್ಯಕ್ರಮ ಉದ್ಘಾಟನೆ

ಸಮಗ್ರ ನ್ಯೂಸ್:‌ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ “ಯಕ್ಷತರಂಗ” ಹಾಗೂ ಆಂತರಿಕ ಗುಣಮಟ್ಟ ಭರವಸಾ ಕೋಶದ ಆಶ್ರಯದಲ್ಲಿ ಸೆ.29 ರಂದು ಯಕ್ಷಗಾನ ತಂಡದ ಉದ್ಘಾಟನೆಯನ್ನು ದೀಪ ಬೆಳಗುವುದರ ಮೂಲಕ ಯಕ್ಷಗಾನ ಗುರುಗಳಾದ ರಾಧಾಕೃಷ್ಣ ಗೌಡ ಅಗೋಳಿಕಜೆ ನೆರವೇರಿಸಿದರು.

Ad Widget . Ad Widget .

ಈ ಸಮಯದಲ್ಲಿ ರಚನಾರವರು ಗಣಪತಿ ದೇವರನ್ನು ಸ್ತುತಿಸಿದರು.ಐಕ್ಯೂಎಸಿ ಸಂಯೋಜಕರಾದ ಪ್ರೊ. ಲತಾ ಬಿ. ಟಿ.ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿದ್ದರು. ಯಕ್ಷತರಂಗದ ಸಂಯೋಜಕರಾದ ಪ್ರೊ.ಮನೋಹರ.ಕೆ. ಪ್ರಾಸ್ತವಿಕ ನುಡಿಗಳನ್ನಾಡಿದರು. ಕಲ್ಪನಾರವರು ಕಾರ್ಯಕ್ರಮವನ್ನು ನಿರೂಪಿಸಿದರು. ಒಂಪ್ರಕಾಶ್ ಸ್ವಾಗತಿದರು. ಯಕ್ಷತರಂಗದ ವಿದ್ಯಾರ್ಥಿ ನಾಯಕನಾದ ಉದಯ್ ಕುಮಾರ್ ಅವರು ವಂದಿಸಿದರು.ಈ ಕಾರ್ಯಕ್ರಮದಲ್ಲಿ ಯಕ್ಷತರಂಗದ ಎಲ್ಲ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Ad Widget . Ad Widget .

Leave a Comment

Your email address will not be published. Required fields are marked *