Ad Widget .

ನೀರಿಗಾಗಿ ಹೋರಾಟದ ಬದಲು ಸೊರಗಿದ ಕಾವೇರಿಗೆ ಮರುಜೀವ ತುಂಬಿ – ಸದ್ಗುರು

ಸಮಗ್ರ ನ್ಯೂಸ್: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಕರ್ನಾಟಕದ ರೈತರು, ಕನ್ನಡಿಗರು ಬಂದ್ ಮೂಲಕ ತಮ್ಮ ಆಕ್ರೋಶವನ್ನು ಹೊರ ಹಾಕುತ್ತಿದ್ದರೆ, ಇಶಾ ಫೌಂಡೇಶನ್‌ನ ಸದ್ಗುರು ಜಗ್ಗಿ ವಾಸುದೇವ ಅವರು, ”ಬರಿದಾಗುತ್ತಿರುವ ನೀರಿನ ವಿಚಾರದಲ್ಲಿ ಹೋರಾಟ ಮಾಡ ಬೇಡಿ,” ಎಂದು ಕರೆ ನೀಡಿದ್ದಾರೆ.

Ad Widget . Ad Widget .

ಈ ಹಿಂದೆ ಸದ್ಗುರು ಜಗ್ಗಿ ವಾಸುದೇವ ಅವರು ‘ಕಾವೇರಿ ಕಾಲಿಂಗ್’ ಚಳವಳಿ ನಡೆಸಿದ್ದರು. ”ಬರಿದಾಗುತ್ತಿರುವ ನೀರಿನ ವಿಚಾರದಲ್ಲಿ ಹೋರಾಟ ಮಾಡುವ ಬದಲು ಕಾವೇರಿ ನದಿಯನ್ನು ಬಲಪಡಿಸಿ, ಬಲಪಡಿಸಬೇಕು. ಕಾವೇರಿ ಮಾತೆ ಯಾವ ರಾಜ್ಯಕ್ಕೆ ಸೇರಿದವಳು ಎಂದು ತಿಳಿದಿಲ್ಲ. ಆದರೆ ಬೇಸಿಗೆಯ ತಿಂಗಳುಗಳಲ್ಲಿ ಅವಳು ಬಸವಳಿಯುತ್ತಿದ್ದಾಳೆ,” ಎಂದು ಜಗ್ಗಿ ವಾಸುದೇವ ಅವರು ಹೇಳಿದ್ದಾರೆ.

Ad Widget . Ad Widget .

ದೊಡ್ಡ ಪ್ರಮಾಣದಲ್ಲಿ ಮರಗಳ ಆಧಾರಿತ ಕೃಷಿಯನ್ನು ಜಾರಿಗೆ ತರುವುದು ಮತ್ತು 83,000 ಚದರ ಕಿಲೋಮೀಟರ್ ಕಾವೇರಿ ಜಲಾನಯನ ಪ್ರದೇಶದಲ್ಲಿ ಗಿಡ ಮರಗಳನ್ನು ಬೆಳೆಸುವುದೊಂದೇ ಕಾವೇರಿ ವರ್ಷಪೂರ್ತಿ ಸಮೃದ್ಧವಾಗಿ ಹರಿಯುವಂತೆ ಮಾಡುವ ಮಾರ್ಗವಾಗಿದೆ ಎಂದು ಸದ್ಗುರು ಜಗ್ಗಿ ವಾಸುದೇವ ಎಕ್ಸ್‌ ವೇದಿಕೆಯಲ್ಲಿ ಬರೆದುಕೊಂಡಿದ್ದಾರೆ. ತಮ್ಮ ಈ ಪೋಸ್ಟ್ ಅನ್ನು ಜಗ್ಗಿ ವಾಸುದೇವ ಅವರು ತಮಿಳು ನಾಡು ಸಿಎಂ ಎಂ ಕೆ ಸ್ಟಾಲಿನ್ ಮತ್ತು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಟ್ಯಾಗ್ ಮಾಡಿದ್ದಾರೆ.

ಬರಿದಾಗಿರುವ ನೀರಿನ ವಿರುದ್ಧ ಹೋರಾಡುವ ಬದಲು ತಾಯಿ ಕಾವೇರಿಯನ್ನು ಬಲಪಡಿಸೋಣ ಮತ್ತು ನೀರು ಹೆಚ್ಚಿಸೋಣ. ಬುದ್ಧಿವಂತಿಕೆ ಮೇಲುಗೈ ಸಾಧಿಸಲಿ ಎಂದು ಸದ್ಗುರು ಜಗ್ಗಿ ವಾಸುದೇವ ಅವರು ಹೇಳಿದ್ದಾರೆ.

Leave a Comment

Your email address will not be published. Required fields are marked *