Ad Widget .

ಅರವಿಂದ್, ದಿವ್ಯಾಗೆ ಬಿಗ್ ಬಾಸ್ ಸ್ಪರ್ಧಿಗಳಿಂದ ಶುಭಹಾರೈಕೆ

ಸಮಗ್ರ ನ್ಯೂಸ್: ಬಿಗ್ ಬಾಸ್ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ.. ಇದೆ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕೆ. ಪಿ ಅರವಿಂದ್ ಹಾಗೂ ದಿವ್ಯಾ ಉರುಡುಗ ಸ್ಪರ್ಧಿಸಿದ್ದರು. ‘ಬಿಗ್ ಬಾಸ್’ ಮನೆಯಲ್ಲಿದ್ದಾಗ ಇಬ್ಬರ ಮಧ್ಯೆ ಆತ್ಮೀಯತೆ ಬೆಳೆಯಿತು. ‘ಬಿಗ್ ಬಾಸ್’ ಮನೆಯಿಂದ ಹೊರಗೆ ಬಂದ್ಮೇಲೂ ಇಬ್ಬರ ನಡುವಿನ ಅನುಬಂಧ ಮುಂದುವರೆದಿದೆ. ಕೆ ಪಿ ಅರವಿಂದ್ ಹಾಗೂ ದಿವ್ಯಾ ಉರುಡುಗ ಪರಸ್ಪರ ಪ್ರೀತಿಸುತ್ತಿದ್ದಾರಾ? ಈ ಬಗ್ಗೆ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಆದರೆ, ಇಬ್ಬರೂ ‘ಅರ್ಧಂಬರ್ಧ ಪ್ರೇಮಕಥೆ’ ಚಿತ್ರದಲ್ಲಿ ತೆರೆಹಂಚಿಕೊಂಡಿದ್ದಾರೆ. ಈಗ ಕೆ ಪಿ ಅರವಿಂದ್ ಹಾಗೂ ದಿವ್ಯಾ ಉರುಡುಗ ಸೇರಿ ಹೊಸ ಉದ್ಯಮ ಆರಂಭಿಸಿದ್ದಾರೆ.

Ad Widget . Ad Widget .

ಕೆ .ಪಿ ಅರವಿಂದ್ ಹಾಗೂ ದಿವ್ಯಾ ಉರುಡುಗ ಬೆಂಗಳೂರಿನಲ್ಲಿ ನೇಲ್ ಆರ್ಟ್ ಸ್ಟುಡಿಯೋ ಆರಂಭಿಸಿದ್ದಾರೆ. ನೇಲ್ ಆರ್ಟ್ ಸ್ಟುಡಿಯೋದ ಉದ್ಘಾಟನೆ ಸಮಾರಂಭ ಗ್ರ್ಯಾಂಡ್ ಆಗಿ ನೆರವೇರಿದ್ದು, ಲಾಂಚ್‌ ಕಾರ್ಯಕ್ರಮಕ್ಕೆ ‘ಬಿಗ್ ಬಾಸ್’ ಸ್ಪರ್ಧಿಗಳು ಆಗಮಿಸಿದ್ದರು. ಸಾನ್ಯ ಅಯ್ಯರ್‌, ಮಯೂರಿ, ನೇಹಾ ಗೌಡ, ಭವ್ಯಾ ಗೌಡ ಮುಂತಾದವರು ಆಗಮಿಸಿ ದಿವ್ಯಾ ಉರುಡುಗ ಹಾಗೂ ಅರವಿಂದ್ ಗೆ ಶುಭ ಹಾರೈಸಿದರು

Ad Widget . Ad Widget .

Leave a Comment

Your email address will not be published. Required fields are marked *