Ad Widget .

ಚಿಕ್ಕಮಗಳೂರು: ಕೊಟ್ಟಿಗೆಹಾರ ಸುತ್ತಮುತ್ತ ಧಾರಾಕಾರ ಮಳೆ| ಹೈರಾಣಾದ ರೈತರು

ಸಮಗ್ರ ನ್ಯೂಸ್: ಬಣಕಲ್, ಕೊಟ್ಟಿಗೆಹಾರ ,ಚಾರ್ಮಾಡಿ ಘಾಟ್ ಸೇರಿದಂತೆ ಹಲವೆಡೆ ಸೆ.28 ರಿಂದ ಧಾರಾಕಾರ ಹಾಗೂ ಬಿರುಸಿನ ಗಾಳಿಯಿಂದ ಕೂಡಿದ ಮಳೆಯಾಗುತ್ತಿದೆ. ಇನ್ನು ಕಾಫಿನಾಡಿನಲ್ಲಿ ಚಳಿಯ ವಾತಾವರಣ ನಿರ್ಮಾಣಗೊಂಡಿದೆ.

Ad Widget . Ad Widget .

ಕೊಟ್ಟಿಗೆಹಾರದಲ್ಲಿ ಗುರುವಾರ ಬೆಳಿಗ್ಗೆಯಿಂದ ಶನಿವಾರದವರೆಗೆ ಬೆಳಿಗ್ಗೆ ವರೆಗೆ 164.2ಮಿ.ಮೀ (16ಸೆ.ಮೀ)ಮಳೆ ದಾಖಲಾಗಿದೆ. ಶನಿವಾರವೂ ಮಳೆ ಮುಂದುವರೆದಿದ್ದು ರೈತರ ಕೃಷಿ ಚಟುವಟಿಕೆ ಸ್ಥಗಿತಗೊಂಡಿದ್ದು ರೈತರು ಮಳೆಯಿಂದ ಹೈರಾಣಾದ್ದಾರೆ.ಕಾಫಿ ನಾಡಿನಲ್ಲಿ ಈಗ ಅರೆಬಿಕಾ ಕಾಫಿ ಕೆಲವು ಕಡೆ ಹಣ್ಣಾಗುತ್ತಿದ್ದು ಮಳೆಯಿಂದ ತೊಂದರೆ ಅನುಭವಿಸುವಂತಾಗಿದೆ. ತೀರಾ ಮಳೆಯಿಂದ ರೊಬಸ್ಟ ಕಾಫಿ ಕೂಡ ಉದುರುತ್ತಿದೆ. ಇನ್ನು ಅತಿಯಾದ ಮಳೆಯ ಹಿನ್ನಲೆಯಲ್ಲಿ ಅಡಿಕೆ ಕೂಡ ಶೀತ ಬಾಧೆಯಿಂದ ಮರದಿಂದ ಉದುರುತ್ತಿದೆ.

Ad Widget . Ad Widget .

ಮಳೆಗಾಲದ ಸಕಾಲ ಮಳೆಗಳು ಬಾರದೇ ಈಗ ಸೆಪ್ಟೆಂಬರ್ ಕೊನೆಯ ವಾರದಲ್ಲಿ ಮಳೆ ಬರುತ್ತಿರುವುದರಿಂದ ಹವಾಮಾನ ಬದಲಾವಣೆಗೊಂಡು ಕಾರ್ಮಿಕರು ಕೆಲಸಕ್ಕೆ ತೆರಳಲು ಅನಾನುಕೂಲವಾಗಿದೆ. .ಮಳೆಯಿಂದ ಕೊಟ್ಟಿಗೆಹಾರ, ಅತ್ತಿಗೆರೆ, ಸುತ್ತಮುತ್ತ ಸೇರಿದಂತೆ ವಿದ್ಯುತ್ ಕಣ್ಮುಚ್ಟಾಲೆಯಾಡುತ್ತಿದೆ. ಧಾರಾಕಾರ ಮಳೆಯಿಂದ ಜನರು ಹೈರಾಣಾಗುವಂತಾಗಿದೆ. ಮಳೆಯ ನಡುವೆ ಕಾಫಿನಾಡಿಗೆ ಬರುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗುತ್ತಿದೆ.

Leave a Comment

Your email address will not be published. Required fields are marked *