Ad Widget .

ಗರ್ಭಿಣಿಯರು ಹೀಗೆ ಮಾಡಿದ್ರೆ ನಿಮ್ಮ ಮಗು ಸ್ಮಾರ್ಟ್ ಆಗಿರುತ್ತೆ..!

ಸಮಗ್ರ ನ್ಯೂಸ್: ಗುವನ್ನು ಗರ್ಭದಲ್ಲಿಟ್ಟುಕೊಂಡು ಪಾಲನೆ ಮಾಡುವುದು ಮಾತ್ರ ಗರ್ಭಿಣಿಯ ಕೆಲಸವಲ್ಲ. ಇದೊಂದು ದೊಡ್ಡ ಜವಾಬ್ದಾರಿ. ಗರ್ಭಿಣಿ ಏನು ಮಾಡಿದ್ರೂ ಅದು ಗರ್ಭದಲ್ಲಿರುವ ಮಗುವಿನ ಮೇಲೆ ಪರಿಣಾಮ ಬೀರುತ್ತದೆ.

Ad Widget . Ad Widget .

ಹಾಗಾಗಿಯೇ ಅತ್ಯುತ್ತಮ ಆಹಾರ ಸೇವನೆ ಮಾಡುವಂತೆ, ಸಂತೋಷವಾಗಿರುವಂತೆ, ಆರೋಗ್ಯಕರವಾಗಿರುವಂತೆ ಸಲಹೆ ನೀಡ್ತಾರೆ. ಗರ್ಭದಲ್ಲಿರುವ ಶಿಶುವಿನ ಮಾನಸಿಕ ಅಭಿವೃದ್ಧಿ ಜೀನ್ಸ್ ಮೇಲೆ ಅವಲಂಬಿಸಿರುತ್ತದೆ. ಆದ್ರೆ ಈ ಜೀನ್ಸ್ ಮೇಲೆ ತಾಯಿಯ ಪ್ರಭಾವವಿರುತ್ತದೆ.

Ad Widget . Ad Widget .

ಕೆಲವು ವಿಶೇಷ ಹವ್ಯಾಸ, ಗರ್ಭದಲ್ಲಿರುವ ಶಿಶುವನ್ನು ಸುಂದರ ಹಾಗೂ ಆಯಕ್ಟೀವ್ ಮಾಡುತ್ತದೆ. ನೀವು ಮನಸ್ಸು ಮಾಡಿದ್ರೆ ಈ ಹವ್ಯಾಸವನ್ನು ಡಿಲೆವರಿ ನಂತರವೂ ಮುಂದುವರೆಸಬಹುದು.

ತಾಯಿ ಸ್ಪರ್ಶ:
ನೀವು ಒಬ್ಬರೆ ಕುಳಿತಿದ್ದಾಗ ಹೊಟ್ಟೆಯನ್ನು ಸವರುತ್ತಿರಿ. ನೀವು ಹಾಗೂ ನಿಮ್ಮ ಮಗುವಿನ ನಡುವೆ ಇರುವ ಗೋಡೆ ನಿಮ್ಮ ಹೊಟ್ಟೆ. ನೀವು ಹೊಟ್ಟೆ ಮುಟ್ಟುತ್ತಿದ್ದರೆ, ನಿಮ್ಮ ಹಾಗೂ ಹೊರ ಪ್ರಪಂಚದ ಜೊತೆ ಸಂಪರ್ಕ ಹೊಂದಲು ಮಗು ಪ್ರಯತ್ನಿಸುತ್ತದೆ. ಇದರಿಂದ ಮಗುವಿನ ಅಭಿವೃದ್ಧಿಯಾಗುತ್ತದೆ.

ಸಂಗೀತ ಆಲಿಕೆ:
ಸಂಗೀತ ಕೇಳುವುದು ಒಂದು ಥೆರಪಿ. ಇದು ಆಯಾಸವನ್ನು ಕಡಿಮೆ ಮಾಡುತ್ತದೆ. ಗರ್ಭಿಣಿಯಾದಾಗ ವಿಶ್ರಾಂತಿ ಬಹಳ ಮುಖ್ಯವಾಗುತ್ತದೆ. ಹಾಗಾಗಿ ಸಂಗೀತ ಕೇಳುವುದು ಗರ್ಭಿಣಿ ಹಾಗೂ ಮಗು ಇಬ್ಬರಿಗೂ ಒಳ್ಳೆಯದು.

ಧನಾತ್ಮಕ ವಾತಾವರಣ:
ಗರ್ಭಿಣಿಯ ಸುತ್ತಮುತ್ತ ಧನಾತ್ಮಕ ವಾತಾವರಣವಿರುವುದು ಅತಿ ಮುಖ್ಯ. ಇದು ಮಗುವಿನ ಮೇಲೂ ಸಕಾರಾತ್ಮಕ ಪರಿಣಾಮ ಬೀರುತ್ತದೆ.

ಸೂರ್ಯನ ಶಾಖ:
ಬೆಳಗ್ಗೆ 20 ನಿಮಿಷ ತಾಜಾ ಗಾಳಿ ಹಾಗೂ ಸೂರ್ಯನ ಕಿರಣ ಮೈಗೆ ಸೋಕಿದರೆ ಕಾಯಿಲೆಗಳಿಂದ ದೂರ ಇರಬಹುದು. ಹಾಗೆ ಗರ್ಭದಲ್ಲಿರುವ ಮಗು ಕೂಡ ಸ್ಮಾರ್ಟ್ ಹಾಗೂ ಆರೋಗ್ಯಕರವಾಗಿ ಬೆಳೆಯುತ್ತದೆ.

ಉತ್ತಮ ಆಹಾರ:
ತಾಯಿ ಎಷ್ಟು ಉತ್ತಮ ಆಹಾರ ಸೇವಿಸ್ತಾಳೋ ಅಷ್ಟು ಮಗುವಿಗೆ ಪೌಷ್ಠಿಕಾಂಶ ಸಿಗುತ್ತದೆ. ಪೋಷಕಾಂಶ ಜಾಸ್ತಿ ಇರುವ ಆಹಾರ ಸೇವನೆ ಅತಿ ಮುಖ್ಯ.

ವಿ.ಸೂ: ಇಲ್ಲಿರುವ ಮಾಹಿತಿಗಳು ತಜ್ಞರ ಪ್ರಕಾರ ನೀಡಲಾಗಿದೆ. ಅದಾಗ್ಯೂ ನಿಮ್ಮ ಆರೋಗ್ಯ ಸಲಹೆಗಾರರ ಬಳಿ ಸಲಹೆ ಕೇಳುವುದು ಉತ್ತಮ – ಸಂ.

Leave a Comment

Your email address will not be published. Required fields are marked *