Ad Widget .

ಚಿಕ್ಕಮಗಳೂರು: ಅರಣ್ಯ ರಕ್ಷಕ ಮೋಸಿನ್ ಅವರಿಗೆ ಮುಖ್ಯಮಂತ್ರಿ ಪದಕ

ಸಮಗ್ರ ನ್ಯೂಸ್: ಮೂಡಿಗೆರೆ ಅರಣ್ಯ ಇಲಾಖೆ ವ್ಯಾಪ್ತಿಯ ಭಾರತೀಬೈಲ್ ವಲಯದ ಅರಣ್ಯ ರಕ್ಷಕ ಮೋಸಿನ್ ಅವರ ಉತ್ತಮ ಸೇವೆಯನ್ನು ಪರಿಗಣಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಸೆ. 29ರಂದು ಬ್ಯಾಂಕ್ವಿಟ್ ಹಾಲ್ ನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

Ad Widget . Ad Widget .

ಮೊದಲೇ ಈ ಕಾರ್ಯಕ್ರಮ ನಿಗದಿಪಡಿಸಿದ್ದರಿಂದ 2021-22 ಸಾಲಿನಲ್ಲಿ ನೀಡಬೇಕಾಗಿದ್ದ ಮುಖ್ಯಮಂತ್ರಿ ಪದಕವನ್ನು ಈ ವರ್ಷ ವಿವಿಧ ಕ್ಷೇತ್ರಗಳಲ್ಲಿ ಸೇವೆ ನೀಡಿದ ಗಣ್ಯರಿಗೆ ವಿಧಾನ ಸೌದದ ಬ್ಯಾಂಕ್ವಿಟ್ ಹಾಲ್ ನಲ್ಲಿ ಸೆ. 29 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪದಕ ಹಾಗೂ ಪ್ರಶಸ್ತಿ ಪ್ರದಾನ ಮಾಡಿದರು.

Ad Widget . Ad Widget .

ಅರಣ್ಯ ರಕ್ಷಕ ಮೋಸಿನ್ ಅವರು 12 ವರ್ಷಗಳ ಕಾಲ ವನ್ಯ ಸಂರಕ್ಷಣಾ ಕಾರ್ಯದಲ್ಲಿ ಉತ್ತಮ ಸೇವೆ ನೀಡಿದ್ದು ಐದು ವರ್ಷ ಮುತ್ತೋಡಿ ಅರಣ್ಯ ಭಾಗದಲ್ಲಿ ಸೇವೆ ನೀಡಿ ನಂತರ ಅಲ್ಲಿಂದ ವರ್ಗಾವಣೆಯಾಗಿ ಎರಡು ವರ್ಷ ಬಿದರಹಳ್ಳಿ ಭಾಗದಲ್ಲಿ ಸೇವೆ ನೀಡಿದರು. ಈಗ ಪ್ರಸ್ತುತ ಭಾರತೀಬೈಲ್ ಅರಣ್ಯ ಭಾಗದಲ್ಲಿ ಉತ್ತಮ ಅರಣ್ಯ ರಕ್ಷಕರಾಗಿ ಸೇವೆ ನೀಡುತ್ತಿರುವ ಮೋಸಿನ್ ಅವರಿಗೆ ಈ ಗೌರವ ಸಂದಿದೆ.

ಬಿ.ಹೊಸಹಳ್ಳಿ ಅರಣ್ಯ ಭಾಗದಲ್ಲಿ ಅರಣ್ಯ ಉತ್ಪನ್ನ ಕಳ್ಳತನ ಪ್ರಕರಣ, ಅಕ್ರಮ ಮರ ಕಡಿತಲೆ ಪ್ರಕರಣಗಳನ್ನು ಭೇದಿಸಿದ್ದಾರೆ.ಬಾಳೂರು ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಶ್ರೀಗಂಧ, ಜಿಂಕೆ ಕೊಂಬು ಮತ್ತಿತರ ವಸ್ತುಗಳನ್ನು ಕಳ್ಳರಿಂದ ವಶಪಡಿಸಿಕೊಂಡು ಪ್ರಾಮಾಣಿಕತೆಯ ಸೇವೆ ನೀಡಿದ್ದಾರೆ.ಮೂಡಿಗೆರೆ ವ್ಯಾಪ್ತಿಯಲ್ಲಿ ಅಕ್ರಮ ಬೀಟೆ ಮರ ಅಕ್ರಮ ದಾಸ್ತಾನು ಪತ್ತೆ ಹಚ್ಚಿ ಸೇವೆ ನೀಡಿರುವುದು.2021-22 ಸಾಲಿನಲ್ಲಿ ಸ.ನಂ256 ರಲ್ಲಿ 50ಹೆಕ್ಟೇರು ಹಾಗೂ ಸನಂ. 212ರಲ್ಲಿ 50 ಹೆಕ್ಟೇರ್ ಮುಂಗಡ ಕಾಮಗಾರಿಯ ಕೆಲಸ ಕಾರ್ಯಗಳನ್ನು ದಕ್ಷತೆಯಿಂದ ನಿರ್ವಹಣೆ ಮಾಡಿರುತ್ತಾರೆ.

ಅರಣ್ಯ ಇಲಾಖೆಯ ಕ್ರೀಡಾಕೂಟಗಳಲ್ಲಿ ಭಾಗವಹಿಸಿ 7 ಬಾರಿ ರಾಜ್ಯ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಲು ಆಯ್ಕೆಯಾಗಿ 2ಬಾರಿ ಕಂಚಿನ ಪದಕ ಪಡೆದಿದ್ದಾರೆ.ಇವರ ಈ ಸಾಧನೆಯನ್ನು ಗುರುತಿಸಿ ಪ್ರಶಸ್ತಿ ಇವರಿಗೆ ಸಂದಿದೆ. ಈ ಪ್ರಶಸ್ತಿ ನೀಡಲು ಕಾರಣೀಕರ್ತರಾದ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಅರಣ್ಯ ರಕ್ಷಕ ಮೋಸಿನ್ ಅಭಿನಂದನೆ ಸಲ್ಲಿಸಿದ್ದಾರೆ.

Leave a Comment

Your email address will not be published. Required fields are marked *