Ad Widget .

ಸುಳ್ಯ: ಮಹಾತ್ಮ ಗಾಂಧೀಜಿ ಪ್ರತಿಮೆ ಸ್ಥಾಪನೆ ಮಾಡಲು ನಗರ ಪಂಚಾಯತ್ ಗೆ ಮನವಿ

ಸಮಗ್ರ ನ್ಯೂಸ್: ಸುಳ್ಯ ನಗರ ಪಂಚಾಯತ್ ನ ನಗರೋತ್ಥಾನ ಯೋಜನೆಯಲ್ಲಿ ಸುಳ್ಯದ ಬೀರಮಂಗಲದಲ್ಲಿ ನಿರ್ಮಾಣವಾಗುತ್ತಿರುವ ಉದ್ಯಾನವನದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಪುತ್ಥಳಿಯನ್ನು ನಿರ್ಮಾಣ ಮಾಡುವಂತೆ ಸುಳ್ಯದ ಮಹಾತ್ಮ ಗಾಂಧಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಗರ ಪಂಚಾಯತ್ ಮುಖ್ಯಧಿಕಾರಿಗೆ ಮನವಿ ನೀಡಿಲಾಯಿತು.

Ad Widget . Ad Widget .

ಸುಳ್ಯದಲ್ಲಿ ಮಹಾತ್ಮ ಗಾಂಧೀಜಿಯವರು ಸ್ವಾತಂತ್ರ್ಯ ಹೋರಾಟದ ಸಂದರ್ಭ ಸುಳ್ಯದಲ್ಲಿ ಒಂದು ದಿನ ತಂಗಿದ್ದು, ಹಳೆಗೇಟಿನಲ್ಲಿ ಸಾರ್ವಜನಿಕ ಸಭೆಯನ್ನು ನಡೆಸಿರುವ ಇತಿಹಾಸ ಸುಳ್ಯಕ್ಕಿರುವುದರಿಂದ, ಮಹಾತ್ಮ ಗಾಂಧೀಜಿಯವರು ಸುಳ್ಯದಲ್ಲಿ ಓಡಾಡಿದ ಮತ್ತು ಸುಳ್ಯದವರನ್ನು ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಳ್ಳಲು ಕಾರಣಕರ್ತರಾದ ಐತಿಹಾಸಿಕ ಸ್ವಾತಂತ್ರ್ಯ ಸಂಗ್ರಾಮದ ಸ್ಮಾರಕವಾಗಿ ಸುಳ್ಯದ ಮುಂದಿನ ಪೀಳಿಗೆಗೆ ಇತಿಹಾಸವನ್ನು ತಿಳಿಯಪಡಿಸುವ ಉದ್ದೇಶದಿಂದ ಮಹಾತ್ಮ ಗಾಂಧಿಜಿಯವರ ಪುತ್ಥಳಿಯನ್ನು ಬೀರಮಂಗಲದಲ್ಲಿ ನಿರ್ಮಾಣ ವಾಗುತ್ತಿರುವ ಉದ್ಯಾನವನದಲ್ಲಿ ಸ್ಥಾಪಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

Ad Widget . Ad Widget .

ಮಹಾತ್ಮ ಗಾಂಧಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಎನ್ ಜಯಪ್ರಕಾಶ್ ರೈ, ಕಾರ್ಯಧ್ಯಕ್ಷ ಕೆ ಗೋಕುಲ್ ದಾಸ್, ಕಾರ್ಯದರ್ಶಿ ಭವಾನಿಶಂಕರ್ ಕಲ್ಮಡ್ಕ, ಉಪಾಧ್ಯಕ್ಷ ಶಶಿಧರ್ ಎಂ ಜೆ, ಕೋಶಾಧಿಕಾರಿ ಚೇತನ್ ಕಜೆಗದ್ದೆ, ನಿರ್ದೇಶಕರುಗಳಾದ ನಗರ ಪಂಚಾಯತ್ ಸದಸ್ಯರಾದ ಬಾಲಕೃಷ್ಣ ಭಟ್ ಕೊಡೆಂಕಿರಿ, ಧೀರಾ ಕ್ರಾಸ್ತ, ನಗರ ಪಂಚಾಯತ್ ಸದಸ್ಯ ಬುದ್ಧ ನಾಯ್ಕ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *