ಮಸೀದಿ ಬಳಿ ಆತ್ಮಾಹುತಿ ಬಾಂಬ್ ದಾಳಿ| 52 ಮಂದಿ‌ ಸಾವು

ಸಮಗ್ರ ನ್ಯೂಸ್: ಮಸೀದಿಯೊಂದರ ಬಳಿ ಆತ್ಮಾಹುತಿ ಸ್ಫೋಟಕ ದಾಳಿ ಸಂಭವಿಸಿದ್ದು, ಕನಿಷ್ಠ 52 ಮಂದಿ ಮೃತಪಟ್ಟು 130 ಜನ ಗಾಯಗೊಂಡಿರುವ ಭೀಕರ ಘಟನೆ ಪಾಕಿಸ್ತಾನದ ಬಲುಚಿಸ್ತಾನ ಪ್ರಾಂತ್ಯದಲ್ಲಿ ನಡೆದಿದೆ.

Ad Widget ... ..

ಪಾಕಿಸ್ತಾನದ ಮಸ್ತಂಗ್‌ನ ಮದೀನ ಮಸೀದಿಯಲ್ಲಿ ಪ್ರವಾದಿ ಮಹಮ್ಮದ್‌ ಅವರ ಜನ್ಮದಿನ ಈದ್‌ ಮಿಲಾದ್‌ ಆಚರಿಸಲು ಜನರು ಸೇರಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

Ad Widget

ಘಟನೆಯಲ್ಲಿ ಮೃತಪಟ್ಟವರಲ್ಲಿ ಕರ್ತವ್ಯದಲ್ಲಿದ್ದ ಮಸ್ತಂಗ್‌ನ ಡಿಎಸ್‌ಪಿ ನವಾಜ್ ಗಮ್ಮೋರಿ ಕೂಡಾ ಸೇರಿದ್ದಾರೆ. ಡಿಎಸ್‌ಪಿ ಇದ್ದ ಕಾರಿನ ಪಕ್ಕದಲ್ಲೇ ದಾಳಿಕೋರ ತನ್ನನ್ನು ಸ್ಫೋಟಿಸಿಕೊಂಡಿದ್ದಾನೆ. ಘಟನೆಯಲ್ಲಿ ಗಾಯಗೊಂಡವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ ಅಂತ ಪೊಲೀಸರು ತಿಳಿಸಿದ್ದಾರೆ.

Leave a Comment

Your email address will not be published. Required fields are marked *