Ad Widget .

ಸೆಕ್ಸ್ ಗೆ ಒಲ್ಲೆನೆಂದ 15ರ ಬಾಲೆ| ಒಬ್ಬಂಟಿಯಾಗಿದ್ದ ಆಕೆಯನ್ನು ಪ್ರಿಯಕರ ಹಾಗೂ‌ ಮತ್ತಿಬ್ಬರು ಸೇರಿ ಮಾಡಿದ್ದೇನು ಗೊತ್ತಾ? ಬೆಚ್ಚಿಬೀಳಿಸುವ ವಿಕೃತ ಸ್ಟೋರಿ

ಸಮಗ್ರ ನ್ಯೂಸ್: ಸೆಕ್ಸ್ ನಡೆಸಲು ಒಪ್ಪದ 15 ವರ್ಷದ ಯುವತಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಆನಂತರ ಆಕೆಯ ಶವದ ಜೊತೆ ಸಂಭೋಗ ನಡೆಸಿದ ಆರೋಪದಲ್ಲಿ ರೈಲ್ವೆ ಸಿಬ್ಬಂದಿ ಸೇರಿದಂತೆ ಮೂವರನ್ನು ಅಸ್ಸಾಂನ ಕರೀಂಗಂಜ್ ಜಿಲ್ಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.

Ad Widget . Ad Widget .

ಸೆಪ್ಟೆಂಬರ್ 9ರಂದು ಈ ಘಟನೆ ನಡೆದಿದ್ದು, ಹತ್ಯೆ ನಡೆದ ದಿನವೇ ಅಪ್ರಾಪ್ತ ವಯಸ್ಸಿನ ಯುವತಿಯ ಮೃತದೇಹ ಕರೀಂಗಂಜ್ ಪಟ್ಟಣದ ಬೈಪಾಸ್ ನಲ್ಲಿ ಪತ್ತೆಯಾಗಿತ್ತು.

Ad Widget . Ad Widget .

ಈ ಬಗ್ಗೆ ಮಾಹಿತಿ ನೀಡಿದ ಕರೀಂಗಂಜ್ ಎಸ್ಪಿ ಪಾರ್ಥ ಪ್ರತೀಂ ದಾಸ್, ”ಶವಸಂಭೋಗ (ನೆರ್ಕೊಫಿಲಿಯಾ) ನಡೆದಿರುವುದು ಮರಣೋತ್ತರ ಪರೀಕ್ಷೆಯಿಂದ ದೃಢಪಟ್ಟಿದ್ದು, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ) ಕಾಯ್ದೆಯ ವಿವಿಧ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ” ಎಂದು ತಿಳಿಸಿದ್ದಾರೆ.

ಯುವತಿಯ ಡೈರಿಯಲ್ಲಿ ಪತ್ತೆಯಾದ ಫೋನ್ ನಂಬರ್ ಆಧಾರದಲ್ಲಿ ತನಿಖೆ ಮುಂದುವರಿಸಿದ ಪೊಲೀಸರು ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಘಟನೆ ನಡೆದದ್ದು ಹೀಗೆ…
ಸೆ. 9ರಂದು ಯುವತಿ ಮನೆಯಲ್ಲಿ ಒಬ್ಬಂಟಿಯಾಗಿದ್ದಾಗ ಆಕೆಯ ಪ್ರಿಯಕರ ತನ್ನ ಇಬ್ಬರು ಸ್ನೇಹಿತರ ಜತೆ ಅತ್ಯಾಚಾರಕ್ಕೆ ಯತ್ನಿಸಿದ್ದ. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಯುವತಿಯನ್ನು ಉಸಿರುಗಟ್ಟಿಸಿ ಸಾಯಿಸಿ ಒಬ್ಬರ ಮೇಲೆ ಒಬ್ಬರಂತೆ ಶವದ ಜತೆ ಲೈಂಗಿಕ ಚಟುವಟಿಕೆ ನಡೆಸಿದರು ಎಂದು ಹೇಳಿದ್ದಾರೆ. ಆರೋಪಿಗಳು ಮೃತದೇಹವನ್ನು ಹೆದ್ದಾರಿ ಬದಿ ಬಿಸಾಕಿ ಹೋಗಿದ್ದು, ಪತ್ತೆಯಾದ ಶವವನ್ನು ಯುವತಿಯ ಪೋಷಕರು ಗುರುತಿಸಿದ್ದರು.

Leave a Comment

Your email address will not be published. Required fields are marked *