Ad Widget .

ಮಂಗಳೂರಲ್ಲಿ ಬಲೆಗೆ ಬಿದ್ದ ಬೃಹತ್ ಪಿಲಿತೊರಕೆ| ಕಾರವಾರದಲ್ಲಿ ಪತ್ತೆಯಾಯ್ತು ಭಾರತದಲ್ಲೇ ಅತಿದೊಡ್ಡ ಬಂಗುಡೆ!! ಇಲ್ಲಿದೆ ಡೀಟೈಲ್ಸ್

ಸಮಗ್ರ ನ್ಯೂಸ್: ಮಂಗಳೂರಿನ ಸೋಮೇಶ್ವರ ಉಚ್ಚಿಲ ಸಮುದ್ರ ತಟದ ಸಮೀಪ ನಿನ್ನೆ (ಸೆ. 27) ಸಂಜೆ ವೇಳೆ ಮೀನುಗಾರರು ಬೀಸಿದ ಬಲೆಗೆ 75 ಕೆ.ಜಿ. ತೂಕದ ದೈತ್ಯಗಾತ್ರದ ಪಿಲಿ ತೊರಕೆ ಮೀನೊಂದು ಬಿದ್ದಿದೆ.

Ad Widget . Ad Widget .

ಉಚ್ಚಿಲ ಪೆರಿಬೈಲ್ ನಿವಾಸಿ ನಾಡದೋಣಿ ಮೀನುಗಾರರಾದ ಶೈಲೇಶ್ ಉಚ್ಚಿಲ, ಚಂದ್ರ ಉಚ್ಚಿಲ, ಅಝೀಝ್, ಕಲ್ಪೇಶ್ ಮತ್ತು ಶಂಭು ನ್ಯೂ ಉಚ್ಚಿಲ ಎಂಬುವರು ಸಮುದ್ರ ತೀರದಲ್ಲಿ ಬಲೆ ಹಾಕಿದ್ದರು. ಆಗ ಈ ಪಿಲಿ ತೊರಕೆ ಮೀನು ಈ ವೇಳೆ ಬಲೆಗೆ ಬಿದ್ದಿದೆ. ಈ ಬಾರಿ ತಮ್ಮ ಮೀನುಗಾರಿಕೆಯಲ್ಲಿ ದೊರೆತ ಅತಿದೊಡ್ಡ ಮೀನು ಇದಾಗಿದೆ ಎಂದು ಮೀನುಗಾರರು ಹೇಳಿದ್ದಾರೆ.

Ad Widget . Ad Widget .

ಪ್ರತಿವರ್ಷದಂತೆ ಈ ಬಾರಿಯೂ ಸಮುದ್ರದಲ್ಲಿ ಕೆಸರಿನಂತಹ ಅಲೆಗಳು ಬರುತ್ತಿದೆ. ಈ ನೀರಿಗೆ ಮೀನುಗಾರಿಕೆಯಲ್ಲಿ ಅತ್ಯಂತ ಪಾವಿತ್ರ್ಯತೆ ಇದೆ. ಅದರಲ್ಲಿ ಹಲವು ಬಗೆಯ ಮೀನುಗಳು ಬರುವ ಐತಿಹ್ಯವಿದೆ. ಆದರೆ ಈ ಬಾರಿ ದೊಡ್ಡ ಗಾತ್ರದ ಪಿಲಿತೊರಕೆ ಬಂದಿರುವುದು ಮೀನುಗಾರರಲ್ಲಿ ಉತ್ಸಾಹ ಮೂಡಿಸಿದೆ. ವ್ಯಾಪಾರ ಮಾಡುತ್ತಿದ್ದರೆ ಕೆ.ಜಿ.ಗೆ 200 ರೂಪಾಯಿಯಷ್ಟು ಮೌಲ್ಯವಿರುವ ಮೀನು ಇದಾಗಿದೆ. ಆದರೆ ಈದ್ ಮಿಲಾದ್ ಹಬ್ಬ ಇರುವುದರಿಂದ ಈ ಮೀನನ್ನು ವ್ಯಾಪಾರ ಮಾಡದೇ, ಮೀನುಗಾರರು ತಮ್ಮೊಳಗೆ ಹಂಚಿಕೊಂಡಿದ್ದಾರೆ.

ಕಾರವಾರದಲ್ಲಿ ಬಲೆಗೆ ಬಿದ್ದ ಬೃಹತ್ ಬಂಗುಡೆ:
ಇತ್ತೀಚೆಗಷ್ಟೆ 48 ಸೆ.ಮೀಟರ್‌ ಉದ್ದದ ಬೃಹತ್ ಬಂಗುಡೆ ಮೀನೊಂದು ಕಾರವಾರದ ಮೀನುಗಾರರಿಗೆ ಸಿಕ್ಕಿದ್ದು, ದೇಶದಲ್ಲಿಯೇ ಈವರೆಗೆ ಸಿಕ್ಕಿರುವ ಬಂಗುಡೆ ಮೀನುಗಳ ಪೈಕಿ ಇದು ಅತೀ ದೊಡ್ಡ ಮೀನಾಗಿದೆ.

ಭಾರತದಲ್ಲಿ ಇದುವರೆಗೆ ಪತ್ತೆಯಾದ ಬಂಗಡೆಗಳಲ್ಲೇ ಅತೀ ದೊಡ್ಡದಾದ ಹಾಗೂ ಉದ್ದವಾದ ಬಂಗಡೆ ಇದಾಗಿದೆ. ಕಾರವಾರದ ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಆನಂದು ರಾಮಾ ಹರಿಕಂತ್ರ ಅವರಿಗೆ ಸಂಬಂಧಪಟ್ಟ, ಎಂ.ಐ. ಇಂಜೀನ ಹೊಂದಿದ ಪಾತಿ ದೋಣಿಯ ಬೀಡು ಬಲೆಗೆ ಬಿದ್ದ ಮೀನುಗಳಲ್ಲಿ ಒಂದು ದೊಡ್ಡ ಗಾತ್ರದ ಬಂಗುಡೆ ಮೀನು ದೊರೆತಿತ್ತು.

ಇನ್ನು ಭಾರತದಲ್ಲಿ ದೊರೆತ ಬಂಗಡೆ ಮೀನುಗಳಲ್ಲಿ ಅತ್ಯಂತ ದೊಡ್ಡದಾದ ಬಂಗುಡೆ ಮೀನು ಎಂಬ ಹೆಗ್ಗಳಿಕೆಗೆ ಪಾತ್ರವಾದ ಈ ಬಂಗಡೆ ಮೀನನ್ನು ಮಾರಾಟ ಮಾಡದೇ ವಿದ್ಯಾರ್ಥಿಗಳ ಅಧ್ಯಯನಕ್ಕೆ ಅನುಕೂಲವಾಗುವಂತೆ ಜಿಲ್ಲಾ ವಿಜ್ಞಾನ ಕೇಂದ್ರಕ್ಕೆ ನೀಡುವ ಶ್ಲಾಘನೀಯ ನಿರ್ಧಾರವನ್ನು ಮೀನುಗಾರರು ತೆಗೆದುಕೊಂಡಿದ್ದಾರೆ. ಈ ಬಂಗಡೆ ಮೀನನ್ನು ಕೋಲ್ಡ್ ಸ್ಟೋರೆಜ್‌ನಲ್ಲಿ ಇರಿಸಲಾಗಿತ್ತು. ಸೋಮವಾರ ಮರೈನ್ ಬಯೋಲಜಿ ವಿಭಾಗದ ಪ್ರಾಧ್ಯಾಪಕ ಶಿವಕುಮಾರ್‌ ಹರಗಿ ನೇತೃತ್ವದಲ್ಲಿ ವಿದ್ಯಾರ್ಥಿಗಳ ತಂಡ ಬೈತಖೋಲಕ್ಕೆ ಭೇಟಿ ನೀಡಿ ಮೀನನ್ನು ಪರಿಶೀಲಿಸಿ ಮಾಹಿತಿ ಪಡೆದುಕೊಂಡಿತ್ತು.

Leave a Comment

Your email address will not be published. Required fields are marked *