Ad Widget .

ಕುಕ್ಕೆ ಸುಬ್ರಹ್ಮಣ್ಯನ ಹುಂಡಿಗೆ ಹಾಕಿದ ಹಣ ಏನಾಗುತ್ತೆ ಗೊತ್ತಾ? ಸೋಶಿಯಲ್ ಮೀಡಿಯಾದಲ್ಲಿ ತಪ್ಪುಸಂದೇಶ ಬೆನ್ನಲ್ಲೇ ಸ್ಪಷ್ಟನೆ ನೀಡಿದ ಕುಕ್ಕೆ ಪೇಸ್ ಬುಕ್ ಪೇಜ್

ಸಮಗ್ರ ನ್ಯೂಸ್: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಅದರ ಆದಾಯ ಕುರಿತಾದ ಸುದ್ದಿಗಳು ಆಗಾಗ್ಗೆ ವೈರಲ್ ಆಗ್ತಾ ಇರುತ್ತವೆ. ಅದರಲ್ಲೂ ಕೆಲವೊಂದು ವ್ಯಕ್ತಿಗಳು ಕ್ಷೇತ್ರದ ಕುರಿತಂತೆ ತಪ್ಪು ಸಂದೇಶಗಳನ್ನು ಹರಡುತ್ತಿದ್ದಾರೆ. ಈ ಬೆನ್ನಲ್ಲೇ ಎಚ್ಚೆತ್ತುಕೊಂಡ ದೇವಸ್ಥಾನದ ಆಡಳಿತ ತನ್ನ ಸೋಶಿಯಲ್ ಪೇಜ್ ನಲ್ಲಿ ಕುಕ್ಕೆ ದೇಗುಲದ ಆದಾಯ ಮತ್ತು ಅದರ ನಿರ್ವಹಣೆ ಬಗ್ಗೆ ಭಕ್ತರಿಗೆ ಸ್ಪಷ್ಟವಾದ ಮಾಹಿತಿ ನೀಡಿದೆ.

Ad Widget . Ad Widget .

ಹಾಗಾದರೆ ದೇವಳದ ಮೀಡಿಯಾ ಪೇಜ್ ನಲ್ಲಿ ಏನಿದೆ?

Ad Widget . Ad Widget .

‘ಅನೇಕ ದಿನಗಳಿಂದ ಭಕ್ತರು ಮತ್ತು ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯ ವ್ಯಕ್ತವಾಗುತ್ತಿದೆ,ಆ ಬಗ್ಗೆ ಸ್ಪಷ್ಟನೆ ನೀಡಲು ಬಯಸುತ್ತಿದ್ದೇವೆ. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಭಕ್ತರಲ್ಲಿ ದೇವಾಲಯದ ಹುಂಡಿಗೆ ಹಣ ಹಾಕ್ಬೇಡಿ ಅದು ಸಮಾಜಕ್ಕೆ ಉಪಯೋಗವಾಗೋದಿಲ್ಲ ಅನ್ನುವವರಿಗೆ ಸ್ಪಷ್ಟನೆ.

ದೇವಾಲಯಕ್ಕೆ ಸೇರಿದ ಹಣದಲ್ಲಿ (ಹುಂಡಿ, ಪೂಜೆ,ಬಾಡಿಗೆ ಅಥವಾ ಇನ್ನಿತರ ಎಲ್ಲಾ) ದೇವಾಲಯದ ಎಲ್ಲಾ ಖರ್ಚು ಕಳೆದು ಉಳಿದ ಹಣದ 10% ಮಾತ್ರ ದೇವಾಲಯ ಸರಕಾರಕ್ಕೆ (ಮುಜರಾಯಿ ಇಲಾಖೆಗೆ) ಕೊಡಬೇಕಾಗಿರುತ್ತದೆ ಮಿಕ್ಕುಳಿದ ಹಣದಲ್ಲಿ ಅನ್ನದಾನ ರೂಪದಲ್ಲಿ ಬಂದ ದೇಣಿಗೆಯನ್ನು ಅನ್ನದಾನಕ್ಕೆ ಉಪಯೋಗಿಸಿಕೊಳ್ಳತಕ್ಕದ್ದು. ಅದನ್ನು ನಿರಖು ಠೇವಣಿ ಮಾಡಲಾಗುತ್ತದೆ. ಉಳಿದದ್ದನ್ನು ಅಭಿವೃದ್ಧಿಗೆ ಉಪಯೋಗಿಸಬಹುದು. ಈ ಹಣವನ್ನು ಅಭಿವೃದ್ಧಿಗೆ ಉಪಯೋಗಿಸಲು ಸರಕಾರದ ಅನುಮೋದನೆ ಪಡೆಯಬೇಕಾಗುತ್ತದೆ.

ದೇವಾಲಯದ ಆಡಳಿತ ಮಂಡಳಿಯ ನಿರ್ಣಯದ ನಂತರ 5 ಲಕ್ಷದವರೆಗೆ ದೇವಾಲಯದ ಕಾರ್ಯನಿರ್ವಹಣಾಧಿಕಾರಿಗೆ, 25 ಲಕ್ಷದವರೆಗೆ ಜಿಲ್ಲಾಧಿಕಾರಿಗಳಿಗೆ, 2 ಕೋಟಿವರೆಗೆ ಮುಜರಾಯಿ ಇಲಾಖೆ ಕಮಿಶನರ್ ಮತ್ತು 10 ಕೋಟಿವರೆಗೆ ಮುಜರಾಯಿ ಮಂತ್ರಿಗಳಿಗೆ ಅವಕಾಶವಿದ್ದು ಮತ್ತು ಅದಕ್ಕೂ ಹೆಚ್ಚಿನ ಅನುಮೋದನೆಗೆ ಸರಕಾರದ ಕ್ಯಾಬಿನೇಟ್ ಗೆ ಕಳುಹಿಸಿ ಅನುಮೋದನೆ ಪಡೆದುಕೊಳ್ಳಬೇಕಾಗುತ್ತದೆ. ಇದರೊಂದಿಗೆ ದೇವಾಲಯದ ಹಣವನ್ನು ಖರ್ಚು ಮಾಡುವಾಗ ಟೆಂಡರ್ ಮೂಲಕವೇ ಮಾಡತಕ್ಕದ್ದು ಅಥವಾ ನಿರ್ಮಿತಿ ಕೇಂದ್ರ ಅಥವಾ ಇನ್ನಿತರ ಸರಕಾರದ ಸಂಸ್ಥೆಗಳಾದ 4ಜಿ ಎಕ್ಸಾಮ್ಷನ್ ಇರುವ ಸಂಸ್ಥೆಗಳ ಮೂಲಕ ಅಭಿವೃದ್ಧಿ ಕಾರ್ಯ ಮಾಡಬೇಕಾಗುತ್ತದೆ.

ಅದಲ್ಲದೆ ಹಣವನ್ನು ಏಕಾಏಕಿ ಖರ್ಚು ಮಾಡಲು ಸಾಧ್ಯವಿಲ್ಲ. ಇನ್ನು ಮುಜರಾಯಿ ಇಲಾಖೆಗೆ ಸೇರಿದ 10% ಹಣವನ್ನು ಇನ್ನಿತರ ಸಣ್ಣ ಪುಟ್ಟ ದೇವಾಲಯದ ಅಭಿವೃದ್ಧಿ, ತಸ್ತಿಕ್ ಅಥವಾ ಇನ್ನಿತರ ಕಾರ್ಯಗಳಿಗೆ ಖರ್ಚು ಮಾಡುತ್ತಾರೆ.
ಪ್ರಸ್ತುತ ಸುಬ್ರಹ್ಮಣ್ಯದಲ್ಲಿ ದೇವಾಲಯದವತಿಯಿಂದ ಇಡೀ ಸುಬ್ರಹ್ಮಣ್ಯ ಗ್ರಾಮಕ್ಕೆ ಕುಡಿಯುವ ನೀರಿನ ಯೋಜನೆಯನ್ನು ಉಚಿತವಾಗಿ ನೀಡುತ್ತದೆ. UGD ವ್ಯವಸ್ಥೆಯನ್ನು ದೇವಾಲಯದ ವತಿಯಿಂದ ನಡೆಸಲಾಗಿದೆ, ಮುಖ್ಯ ರಸ್ತೆ ಹಾಗು ಅನೇಕ ಒಳ ರಸ್ತೆಗಳನ್ನು ಕಾಂಕ್ರಿಟೀಕರಣ ಮಾಡಲಾಗಿದೆ, ಬೀದಿ ದೀಪಗಳನ್ನು ಅಳವಡಿಸಲಾಗಿದೆ ಮತ್ತು ಇದರ ತಿಂಗಳ ವೆಚ್ಚವನ್ನು ಬರಿಸಲಾಗುತ್ತಿದೆ. ಸ್ಥಳೀಯ ಕಡಬ ಮತ್ತು ಸುಳ್ಯದಂತಹ ಸರಕಾರಿ ಆಸ್ಪತ್ರೆಗಳಿಗೆ ಆಂಬುಲೆನ್ಸ್, ಡಯಾಲಿಸಿಸ್ ಹಾಗು ಇನ್ನಿತರ ಉಪಕರಣಗಳನ್ನು ನೀಡಲಾಗಿದೆ. ಸ್ಥಳೀಯ ದೇವಾಲಯಗಳಿಗೆ ಮತ್ತು ಸ್ಥಳೀಯ ಸಂಘ ಸಂಸ್ಥೆಗಳಿಗೆ ಅನ್ನದಾನದ ವ್ಯವಸ್ಥೆಯನ್ನು ಪ್ರತಿ ವರ್ಷ ಮಾಡಿಕೊಡಲಾಗುತ್ತದೆ.’

ಈ ರೀತಿಯಾಗಿ ತನ್ನ ಸೋಶಿಯಲ್ ಮೀಡಿಯಾ ಪೇಜ್ ನಲ್ಲಿ ದೇವಸ್ಥಾನದ ಆದಾಯದ ಹಂಚಿಕೆಯ ಬಗ್ಗೆ ಬರೆದುಕೊಳ್ಳಲಾಗಿದ್ದು, ಅನ್ಯಧರ್ಮದವರಿಗೆ, ಅಥವಾ ಇನ್ನಿತರ ಕಾರ್ಯಗಳಿಗೆ ಆದಾಯ ಬಳಕೆಯಾಗುತ್ತಿಲ್ಲ ಎಂದು ಸ್ಪಷ್ಟನೆ ನೀಡಲಾಗಿದೆ.

Leave a Comment

Your email address will not be published. Required fields are marked *