ಸಮಗ್ರ ನ್ಯೂಸ್: ಭಾರತ ಸರಕಾರದ ಮಾನ್ಯತೆ ಪಡೆದ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಮತ್ತು ಖಾಸಗಿ ಉದ್ಯೋಗಗಳ ವೃತ್ತಿಪರ ಕೌಶಲ್ಯ ತರಬೇತಿ ಸಂಸ್ಥೆಯಾಗಿರುವ, ಪುತ್ತೂರಿನಲ್ಲಿ ಹೆಸರುವಾಸಿಯಾಗಿರುವ “ವಿದ್ಯಾಮಾತಾ ಅಕಾಡೆಮಿ”ಯ ಶಾಖಾ ಕಛೇರಿ ಸುಳ್ಯದ ರಥಬೀದಿಯ ಟಿಎಪಿಸಿಎಂಎಸ್ ನಲ್ಲಿ ಸೆ.28 ರಂದು ಶುಭಾರಂಭಗೊಂಡಿದೆ.

ಪುತ್ತೂರಿನ ಮಾಜಿ ಶಾಸಕಿ ಶಕುಂತಲಾ. ಟಿ . ಶೆಟ್ಟಿ ಮತ್ತು ಇತರ ಅತಿಥಿಗಳು ಉದ್ಘಾಟಿಸಿದರು. ಹಾಗೆಯೇ ಆನೇಕ ಅತಿಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಭಾಗ್ಯೇಶ್ ರವರು ಮಾತನಾಡಿ ಪುತ್ತೂರಿನಲ್ಲಿ ಉದ್ಯೋಗ ಮೇಳ ಮಾಡಿದ ನಂತರ ಸುಳ್ಯದಲ್ಲಿ ಉದ್ಯೋಗದ ಅಭಾವ ಇದೆ ಎಂಬ ಕಾರಣಕ್ಕೆ ವಿದ್ಯಾಮಾತಾ ಅಕಾಡೆಮಿಯ ಮಾತೃ ಸಂಸ್ಥೆಯಾಗಿರುವ ವಿದ್ಯಾಮಾತಾ ಫೌಂಡೇಶನ್ ಸುಳ್ಯದಲ್ಲಿ ತನ್ನ ಇನ್ನೊಂದು ಶಾಖೆಯನ್ನು ಶುರುಮಾಡಿದೆ.
ಹಾಗೆಯೇ ಈ ಸಂದರ್ಭದಲ್ಲಿ ನಾನು ಮುತ್ತಪ್ಪ ರೈ ಅಣ್ಣನನ್ನು ನೆನಪಿಸಿಕೊಳ್ಳುತ್ತೇನೆ. ನಾನು ಈ ವಿದ್ಯಾಮಾತ ಫೌಂಡೇಷನ್ ನಲ್ಲಿ ಇಷ್ಟು ಎತ್ತರ ಬೆಳೆಯಲು ಅವರೇ ಕಾರಣ, ಇನ್ನೂ ಅವರಿಂದ ನಾನು ನಾಯಕತ್ವ ಗುಣ ಬೆಳೆಸಿಕೊಂಡೆ ಮತ್ತು ಒಂದು ಕಾರ್ಯಕ್ರಮವನ್ನು ಆಯೋಜನೆ ಮಾಡುವ ಶಕ್ತಿ ಈಗ ನನ್ನಲ್ಲಿದೆ ಎಂದರು.

ಪುತ್ತೂರಿನ ಮಾಜಿ ಶಾಸಕಿ ಶಕುಂತಲಾ. ಟಿ .ಶೆಟ್ಟಿ ಮಾತನಾಡಿ ನನಗೆ ಭಾಗೇಶ್ ನ ಬಗ್ಗೆ ತುಂಬಾ ಹೆಮ್ಮೆ ಎನಿಸುತ್ತದೆ ಯಾಕೆಂದರೆ ದೇಶ ಕಾಯುವ ಯೋಧನಿಗು ಅವಕಾಶ ಮಾಡಿಕೊಟ್ಟ, ದೇಶದಲ್ಲಿನ ಆರಕ್ಷಕರಿಗು ಅವಕಾಶ ಮಾಡಿಕೊಟ್ಟ, ದೇಶದಲ್ಲಿ ಉತ್ತಮ ಪ್ರಜೆಯನ್ನು ನಿರ್ಮಾಣ ಮಾಡುವ ಶಿಕ್ಷಕರನ್ನು ಸಮಾಜಕ್ಕೆ ನೀಡುವ ಉತ್ತಮ ಕೆಲಸ ಮಾಡಿದ್ದಾನೆ ಎಂದು ಶುಭಹಾರೈಸಿದರು.
ಇನ್ನು ಈ ಕಾರ್ಯಕ್ರಮದಲ್ಲಿ ವಿದ್ಯಾಮಾತ ಅಕಾಡಮಿಯಿಂದ ಅಗ್ನಿಪಥ್ ಗೆ ಆಯ್ಕೆಯಾದ ವಿಧ್ಯಾರ್ಥಿಗಳಿಗೆ ಸನ್ಮಾನ ಮಾಡಿದರು. ಮತ್ತು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅನೇಕ ಸಾಧಕರಿಗೆ ಸನ್ಮಾನ ಮಾಡಿ ಅಭಿನಂದಿಸಿದರು.
ಈ ಕಾರ್ಯಕ್ರಮದಲ್ಲಿ ಪುತ್ತೂರು ಮಾಜಿ ಶಾಸಕಿ ಶಕುಂತಳಾ ಟಿ ಶೆಟ್ಟಿ, ಟಿಎಪಿಸಿಎಂಎಸ್ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ವಿಧಾನ ಪರಿಷತ್ ಮಾಜಿ ಸದಸ್ಯ ಅಣ್ಣಾ ವಿನಯಚಂದ್ರ, ಪುತ್ತೂರು ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ಸುಳ್ಯದ ವೆಂಕಟ್ರಮಣ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯ ಅಧ್ಯಕ್ಷ ಪಿ.ಸಿ.ಜಯರಾಮ, ಸಿಎ ಬ್ಯಾಂಕ್ ಮಾಜಿ ಅಧ್ಯಕ್ಷ ಎನ್.ಜಯಪ್ರಕಾಶ್ ರೈ, ಕೆ.ಎಂ.ಎಫ್ ಉಪಾಧ್ಯಕ್ಷ ಎಸ್.ಬಿ.ಜಯರಾಮ ರೈ, ಟಿಎಪಿಸಿಎಂಎಸ್ ಉಪಾಧ್ಯಕ್ಷ ಪಿ.ಎಸ್.ಗಂಗಾಧರ, ಕಾರ್ಯನಿರ್ವಹಣಾಧಿಕಾರಿ ಜಯರಾಮ ದೇರಪ್ಪಜ್ಜನಮನೆ, ಪ್ರೊ.ಎಂ.ಬಾಲಚಂದ್ರ ಗೌಡ, ಎ.ಕೆ.ಜಯರಾಮ ರೈ, ಶಿಕ್ಷಕ ಅರವಿಂದ ಚೊಕ್ಕಾಡಿ, ಪೂವಪ್ಪ ಕಣಿಯೂರು ಮೊದಲಾದವರು ಭಾಗವಹಿಸಿದರು. ಕೊನೆಗೆ ರಮ್ಯ ಇವರು ವಂದಿಸಿದರು.