Ad Widget .

ಕರ್ನಾಟಕದಲ್ಲಿ ಹೆಚ್ಚಾದ ಮದ್ಯದ ದರ… ಹೊರರಾಜ್ಯದಿಂದ ಬಸ್ ಮೂಲಕ ಅಕ್ರಮ ಮದ್ಯ ಸಾಗಾಟ

ಸಮಗ್ರ ನ್ಯೂಸ್: ಪ್ರತಿಯೊಂದು ಸರ್ಕಾರಗಳು, ಪ್ರತಿವರ್ಷ ತಮ್ಮ ಆಧಾಯದ ಮೂಲವನ್ನು ಹೆಚ್ಚಿಸಲು ಅಬಕಾರಿ ಸುಂಕವನ್ನು ಹೆಚ್ಚಿಸುತ್ತಲೇ ಇವೆ. ಈಗ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಕಾಂಗ್ರೆಸ್ ಸರ್ಕಾರ ಕೂಡಾ ಮದ್ಯದ ಮೇಲಿನ ಟ್ಯಾಕ್ಸ್ ಅನ್ನು ಮತ್ತಷ್ಟು ಹೆಚ್ಚಿಸಿದೆ. ಹೀಗಾಗಿ ನೆರೆಯ ಮಹಾರಾಷ್ಟ್ರ, ತೆಲಂಗಾಣ, ಗೋವಾ ರಾಜ್ಯಗಳಿಗೆ ಹೋಲಿಕೆ ಮಾಡಿದರೆ, ಕರ್ನಾಟಕದಲ್ಲಿಯೇ ಮದ್ಯದ ಬೆಲೆ ಹೆಚ್ಚು ಅನ್ನೋದು ಮದ್ಯಪ್ರಿಯರ ಮಾತು.

Ad Widget . Ad Widget .

ರಾಜ್ಯದಲ್ಲಿ ಮದ್ಯದ ಬೆಲೆ ಹೆಚ್ಚಾಗಿರುವುದರಿಂದ ಕೆಲವರು ನೆರೆಯ ಗೋವಾದಿಂದ ಕಲಬುರಗಿ ಸಾರಿಗೆ ಬಸ್​​ನಲ್ಲಿ ಮದ್ಯ ತಂದು ಮಾರಾಟ ಮಾಡುತ್ತಿದ್ದರು. ಇಂತಹ ಜಾಲವೊಂದನ್ನು ಪತ್ತೆ ಮಾಡುವಲ್ಲಿ ಕಲಬುರಗಿ ಅಬಕಾರಿ ಇಲಾಖೆಯ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

Ad Widget . Ad Widget .

ಇಂದು ಬೆಳ್ಳಂಬೆಳಗ್ಗೆ ನಾಲ್ಕು ಗಂಟೆಗೆ ಕಾರ್ಯಚರಣೆಗೆ ಇಳಿದ ಕಲಬುರಗಿ ಅಬಕಾರಿ ಇಲಾಖೆಯ ಅಧಿಕಾರಿಗಳು, ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ಜಾಲವನ್ನು ಹೆಡೆಮುರಿ ಕಟ್ಟಿದ್ದಾರೆ. ಗೋವಾ ಮತ್ತು ಹೈದ್ರಾಬಾದ್ ನಡುವೆ, ಕಲಬುರಗಿ ಮಾರ್ಗವಾಗಿ ಪ್ರತಿನಿತ್ಯ ಹತ್ತಕ್ಕೂ ಹೆಚ್ಚು ಬಸ್​ಗಳು ಓಡಾಡುತ್ತವೆ. ಸ್ಲೀಪರ್, ಓಲ್ವೋ ಬಸ್​ಗಳು ಕೇವಲ ಪ್ರಯಾಣಿಕರನ್ನು ಕರೆದುಕೊಂಡು ಹೋಗುವುದು, ಕರೆದುಕೊಂಡು ಬರುವುದು ಮಾತ್ರ ಮಾಡಲ್ಲ. ಬದಲಾಗಿ ಗೋವಾದಿಂದ ಬರುವಾಗ ಮದ್ಯದ ಬಾಟಲ್​ಗಳನ್ನು ಕೂಡಾ ಕದ್ದು ಮುಚ್ಚಿ ತರುವ ಕೆಲಸ ಮಾಡುತ್ತವೆ.

ಬೆಳಗಾವಿ ಹೊರವಲಯದಲ್ಲಿ ಅಬಕಾರಿ ಚೆಕಪೋಸ್ಟ್ ಇದ್ದರು ಕೂಡಾ ಬಸ್​ ಒಳಗಡೆ, ಸ್ಪೇರ್ ಪಾರ್ಟ್ಸ್ ಇಡುವ ಜಾಗ ಸೇರಿದಂತೆ ಕೆಲವಡೇ ಯಾರಿಗೂ ಗೊತ್ತಾಗದ ಜಾಗದಲ್ಲಿ ಗೋವಾದಿಂದ ಮದ್ಯದ ಬಾಟಟ್​ಗಳನ್ನು ತಂದು ಅವುಗಳನ್ನು ಕಲಬುರಗಿಯಲ್ಲಿ ಕೆಲವರಿಗೆ ಮಾರಾಟ ಮಾಡಲಾಗುತ್ತಿತ್ತು. ಈ ವಿಷಯವನ್ನು ಗಮನಿಸಿದ ಅಬಕಾರಿ ಇಲಾಖೆ ಇಂದು ಫೀಲ್ಡ್ ಗಿಳಿದು ಬಸ್ ಚಾಲಕ, ನಿರ್ವಾಹಕ ಸೇರಿ ಮೂವರನ್ನು ವಶಕ್ಕೆ ಪಡೆಯಲಾಗಿದೆ.

Leave a Comment

Your email address will not be published. Required fields are marked *