ಸಮಗ್ರ ನ್ಯೂಸ್: ಕಾವೇರಿ ನೀರಿನ ಅನ್ಯಾಯ ಖಂಡಿಸಿ ಶುಕ್ರವಾರ (ಸೆ.29) ಘೋಷಿಸಲಾಗಿರುವ ಕರ್ನಾಟಕ ಬಂದ್‌ಗೆ ಹಲವು ಸಂಘಟನೆಗಳ ಬೆಂಬಲ ವ್ಯಕ್ತವಾಗಿದೆ. ಈ ಮಧ್ಯೆ, ಪೊಲೀಸರು ಬಿಗಿ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಇಂದು(ಸೆ.28) ಮಧ್ಯರಾತ್ರಿಯಿಂದಲೇ ಸೆಕ್ಷನ್ 144 (Section 144) ಜಾರಿ ಮಾಡಲು ನಿರ್ಧರಿಸಲಾಗಿದೆ.
ಯಾವುದೇ ರೀತಿಯ ಪ್ರತಿಭಟನಾ ರ‍್ಯಾಲಿಗೆ ಅವಕಾಶ ಸಿಗುವುದು ಬಹುತೇಕ ಅನುಮಾನವೆನಿಸಿದೆ. ನ್ಯಾಯಾಲಯದ ಅದೇಶ ಇರುವುದರಿಂದ ಪ್ರತಿಭಟನಾ ರ‍್ಯಾಲಿಗೆ ಅವಕಾಶ ಸಿಗುವುದು ಅನುಮಾನ. ಜೊತೆಗೆ ಸೆಕ್ಷನ್ 144 ಜಾರಿಯಾದರೆ 5ಕ್ಕಿಂತ ಹೆಚ್ಚು ಜನ ಒಟ್ಟುಗೂಡಲು ಅವಕಾಶವಿಲ್ಲ.
ಶುಕ್ರವಾರ ನಡೆಯಲಿರುವ ಕರ್ನಾಟಕ ಬಂದ್‌ಗೆ ಸುಮಾರು 1 ಸಾವಿರಕ್ಕೂ ಹೆಚ್ಚು ಸಂಘಟನೆಗಳು ಸಾಥ್ ನೀಡಲಿವೆ ಎಂದು ಹೇಳಲಾಗಿದ್ದು, ರಾಜ್ಯ- ರಾಜಧಾನಿಯಲ್ಲಿ ಕೆಲ ಸೇವೆಗಳು ವ್ಯತ್ಯಯವಾಗಲಿವೆ.
ಏನೆಲ್ಲ ಸೇವೆ ಇರುತ್ತದೆ?: ಆಸ್ಪತ್ರೆ, ಮೆಡಿಕಲ್, ಆಂಬುಲೆನ್ಸ್, ಬೆಂಬಲ ನೀಡದ ಒಕ್ಕೂಟದ ಆಟೋ, ಟ್ಯಾಕ್ಸಿ ಇರುತ್ತವೆ.
ಏನೆಲ್ಲ ಸೇವೆಗಳು ಇರುವುದಿಲ್ಲ?: ಹೋಟೆಲ್, ಸಿನಿಮಾ ಹಾಲ್, ಮಾಲ್, ಆಟೋ, ಕ್ಯಾಬ್, ಬೇಕರಿ, ಓಲಾ, ಊಬರ್ ಇರುವುದಿಲ್ಲ.
ಯಾವ ಕಾರಣಕ್ಕೂ ಸೆಪ್ಟೆಂಬರ್ 29ರ ಬಂದ್ ವೇಳೆ ಸೆಕ್ಷನ್ 144 ಜಾರಿ ಮೂಲಕ ಪ್ರತಿಭಟನೆ ಹತ್ತಿಕ್ಕಬಾರದು ಎಂದು ಆಗ್ರಹಿಸಿರುವ ವಾಟಾಳ್ ನಾಗರಾಜ್ ಅವರು ಶುಕ್ರವಾರ ಬೆಂಗಳೂರಿನ ಟೌನ್ ಹಾಲ್‌ನಿಂದ ಫ್ರೀಡಂ ಪಾರ್ಕ್ ವರೆಗೆ ರ‍್ಯಾಲಿ ನಡೆಸಲು ಪ್ಲ್ಯಾನ್ ಮಾಡಿದ್ದಾರೆ. ರಾಜ್ಯದ ವಿವಿಧೆಡೆ ಟೋಲ್, ಏರ್ ಪೋರ್ಟ್ ಬಂದ್ ಮಾಡುವುದಕ್ಕೂ ಕರೆ ನೀಡಿದ್ದಾರೆ.