Ad Widget .

2024ರ ಆಸ್ಕರ್ ಪ್ರಶಸ್ತಿಗೆ “2018 ಮಲಯಾಳಂ ಸಿನಿಮಾ” ಅಧಿಕೃತ ಪ್ರವೇಶ

ಸಮಗ್ರ ನ್ಯೂಸ್: 2024ರ ಆಸ್ಕರ್‌ ಪ್ರಶಸ್ತಿಗೆ ದಕ್ಷಿಣ ಭಾರತದ ಮಲಯಾಳಂನ ಬ್ಲಾಕ್‌ಬಸ್ಟರ್‌ “2018 ಸಿನಿಮಾ”ವನ್ನು ಭಾರತದಿಂದ ಆಸ್ಕರ್‌ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

Ad Widget . Ad Widget .

ಇದು ಸರ್ವೈವಲ್‌ ಡ್ರಾಮಾ ಸಿನಿಮಾವಾಗಿದೆ. ಫಿಲ್ಮ್‌-ಫಿಲ್ಮ್‌ ಫೆಡರೇಶನ್‌ ಆಫ್‌ ಇಂಡಿಯಾ ಈ ಸಿನಿಮಾವನ್ನು ಆಸ್ಕರ್‌ಗೆ ಭಾರತದ ಅಧಿಕೃತ ಸಿನಿಮಾವಾಗಿ ಆಯ್ಕೆ ಮಾಡಿದೆ. 2018ರಲ್ಲಿ ಕೇರಳದಲ್ಲಿ ಸಂಭವಿಸಿದ ಮಹಾ ಪ್ರವಾಹವನ್ನು ಆಧರಿಸಿ ಅಧ್ಬುತ ಸಿನಿಮಾ ನಿರ್ಮಿಸಲಾಗಿದೆ.

Ad Widget . Ad Widget .

ಟೊವಿನೋ ಥಾಮಸ್ ಅಭಿನಯದ 2018 ಎವರಿವನ್‌ ಈಸ್‌ ಹೀರೋ ಎಂಬ ಚಿತ್ರವನ್ನು ಜೂಡ್ ಆಂಥನಿ ಜೋಸೆಫ್ ನಿರ್ದೇಶಿಸಿದ್ದಾರೆ. ಮಾಲಿವುಡ್‌ನ ಪ್ರಮುಖ ಚಿತ್ರವೂ ಹೌದು. ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಸಮುದಾಯದ ಪಾತ್ರದ ಮೇಲೂ ಚಿತ್ರ ಬೆಳಕು ಚೆಲ್ಲುತ್ತದೆ. ಮೊದಲು ಈ ಚಿತ್ರ ಮಲಯಾಳಂನಲ್ಲಿ ಬಿಡುಗಡೆಯಾಯಿತು. ಬಳಿಕ, ಕನ್ನಡ, ಹಿಂದಿ, ತಮಿಳು, ತೆಲುಗು ಮುಂತಾದ ಭಾಷೆಗಳಲ್ಲಿ ಬಿಡುಗಡೆಯಾಯಿತು.

ಈ ಸಿನಿಮಾವನ್ನು ಆಸ್ಕರ್‌ಗೆ ಭಾರತದಿಂದ ಆಯ್ಕೆ ಮಾಡಿರುವ ಕುರಿತು ಸೆ. 27 ರಂದು ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ (FFI) ಅಧಿಕೃತವಾಗಿ ಪ್ರಕಟಿಸಿದೆ. ಭಾರತದ ವಿವಿಧ ಚಲನಚಿತ್ರಗಳನ್ನು ಆಸ್ಕರ್‌ ಪ್ರವೇಶಕ್ಕಾಗಿ ಎಫ್‌ಎಫ್‌ಐಯು ಆಗಸ್ಟ್‌ 15ರಿಂದ ಸೆಪ್ಟೆಂಬರ್‌ 10ರವರೆಗೆ ಅರ್ಜಿ ಆಹ್ವಾನಿಸಿತ್ತು. ನೂರಾರು ಸಿನಿಮಾಗಳಲ್ಲಿ ಅಂತಿಮವಾಗಿ 2018 Everyone is Heroe ಎಂಬ ಚಿತ್ರವನ್ನು ಆಸ್ಕರ್‌ ಪ್ರವೇಶಕ್ಕಾಗಿ ಆಯ್ಕೆ ಮಾಡಲಾಗಿದೆ. “ಈ ಸಿನಿಮಾವು ನೈಜ ಭಾರತವನ್ನು ಪ್ರತಿನಿಧಿಸುತ್ತದೆ” ಎಂದು FFI ತನ್ನ ಹೇಳಿಕೆಯಲ್ಲಿ ತಿಳಿಸಿದೆ.

Leave a Comment

Your email address will not be published. Required fields are marked *