ಸಮಗ್ರ ನ್ಯೂಸ್: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಹೆಸರಿನಲ್ಲಿ ಮತ್ತೆ ಅವ್ಯಾಹತವಾಗಿ ಖಾಸಗಿ ಸಂಸ್ಥೆಗಳು ಪೂಜೆ ಹಾಗೂ ಇನ್ನಿತರ ಸೇವೆಗಳನ್ನು ನಡೆಸುತ್ತಿದ್ದು, ಈ ಕುರಿತಂತೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದ ವತಿಯಿಂದ ಭಕ್ತಾದಿಗಳಿಗೆ ಮಹತ್ವದ ಸೂಚನೆಯೊಂದು ನೀಡಲಾಗಿದೆ.
ಕಳೆದ ಅನೇಕ ದಿನಗಳಿಂದ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸೇವೆಯ ವಿಚಾರವಾಗಿ ಸಾಮಾಜಿಕ ಜಾಲತಾಣ, ವೆಬ್ ನ್ಯೂಸ್ ನಲ್ಲಿ ಸುದ್ದಿಗಳು ಬರುತ್ತಿದ್ದು,ಈ ಹಿನ್ನೆಲೆಯಲ್ಲಿ ಕೋಟ್ಯಾಂತರ ಭಕ್ತರ ಶ್ರದ್ಧೆ, ಭಾವನೆ ದೃಷ್ಟಿಯಿಂದ ಸ್ಪಷ್ಟನೆ ನೀಡಲಾಗಿದೆ.
ದೇವಾಲಯಕ್ಕೆ ಸಂಬಂಧಪಟ್ಟ ಯಾವುದೇ ಮಠಗಳಿರುವುದಿಲ್ಲ. ದೇವಸ್ಥಾನ ಸಂಪೂರ್ಣವಾಗಿ ರಾಜ್ಯ ಸರಕಾರದ ಮುಜರಾಯಿ ಇಲಾಖೆಯ ಆಡಳಿತಕೊಳಪಟ್ಟ ದೇವಾಲಯವಾಗಿದೆ.
ದೇವಾಲಯಕ್ಕೆ ಸಂಬಂದ ಪಟ್ಟ ಹಿಂದಿನಿಂದಲೂ ಪರಂಪರಾಗತವಾಗಿ ನಡೆಸುವ ಸರ್ಪಸಂಸ್ಕಾರ ಹಾಗೂ ಇನ್ನಿತರ ಪೂಜೆಗಳು ಕೆಲವು ಸಮಯದಿಂದ ಖಾಸಗಿ ಸ್ಥಳಗಳಲ್ಲಿ ನಡೆಯುತ್ತಿದ್ದು, ಇದರ ಬಗ್ಗೆ ಯಾರು ಮೋಸಹೋಗಬಾರದೆಂದು ದೇವಾಲಯದ ಅಂಗಣದಲ್ಲಿ ಮತ್ತು ಅಲ್ಲಲ್ಲಿ ಬರುವ ಭಕ್ತಾದಿಗಳಿಗೆ ಕಾಣುವಂತೆ ಬೋರ್ಡ್ ಗಳನ್ನು ಅಳವಡಿಸಲಾಗಿದೆ ಮತ್ತು ದೇವಾಲಯದ ಪೂಜೆಗಳನ್ನು ನೋಂದಾಯಿಸಲು ಯಾವುದೇ ಖಾಸಗಿ ವೆಬ್ ಸೈಟ್ ಗಳಲ್ಲಿ ಅವಕಾಶಗಳಿಲ್ಲ.
ಸರಕಾರದ http://temples.karnataka.gov.in ನಲ್ಲಿ ಮಾತ್ರ ಸಾಧ್ಯವಿರುತ್ತದೆ ಇದಲ್ಲದೆ ದೇವಾಲಯಕ್ಕೆ ಬೇರೆ ಯಾವುದೇ ವೆಬ್ಸೈಟ್ ಗಳು ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.