Ad Widget .

ಕಡಬ: ಬಿಳಿನೆಲೆ ಪ್ರಾ.ಕೃ.ಪ ಸಂಘದಲ್ಲಿ ಸಿಇಒ‌ ಅಕ್ರಮ ನೇಮಕಾತಿಯಲ್ಲಿ ಭ್ರಷ್ಟಾಚಾರ ಆರೋಪ| ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷರಿಗೆ ಧಿಕ್ಕಾರ ಕೂಗಿದ ಸದಸ್ಯರು

ಸಮಗ್ರ ನ್ಯೂಸ್:‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಕಾತಿಯಲ್ಲಿ‌ ಅಕ್ರಮ ನಡೆಸಲಾಗಿದೆ ಎಂದು ಆರೋಪಿಸಿ ಅಧ್ಯಕ್ಷರ‌ ವಿರುದ್ಧ ಸದಸ್ಯರು ಧಿಕ್ಕಾರ ಕೂಗಿದ ಘಟನೆ ಕಡಬ ತಾಲೂಕಿನ ಬಿಳಿನೆಲೆಯಲ್ಲಿ‌ ಸೆ.26ರಂದು ನಡೆದಿದೆ.

Ad Widget . Ad Widget .

ಇಲ್ಲಿನ ಬಿಳಿನೆಲೆಯ ಪ್ರಾ.ಕೃ.ಪ ಸಂಘದ ವಾರ್ಷಿಕ ಮಹಾಸಭೆಯು ಅಧ್ಯಕ್ಷ ದಾಮೋದರ ಗುಂಡ್ಯರವರ ಅಧ್ಯಕ್ಷತೆಯಲ್ಲಿ ಪ್ರಾರಂಭವಾಗಿತ್ತು. ಆದರೆ ಸಭೆಯಲ್ಲಿ ಪ್ರಶ್ನಾವಳಿಗಳು ಮತ್ತು ಮುಂದಿನ ನಿರ್ಣಯಗಳು ಮಂಡನೆಯಾಗಬೇಕಾದ ಬದಲು ಆಲ್ಲಿ ನಡೆದದ್ದು ಪ್ರತಿಭಟನೆ. ಒಂದು ಕಡೆಯಿಂದ ಭ್ರಷ್ಟಾಚಾರದ ಕೂಗು ಕೇಳಿದರೆ ಇನ್ನೊಂದು ಕಡೆಯಿಂದ ಮುಖ್ಯಕಾರ್ಯನಿರ್ವಹಣಾಧಿಕರಿ ಆಯ್ಕೆಯಲ್ಲಿ ತಮ್ಮೂರಿನವರನ್ನು ಬಿಟ್ಟು ಪರ ಊರಿನವರಿಗೆ ಅವಕಾಶ ಕೊಡಬಾರದೆಂಬ ಪ್ರತಿಭಟನೆ.

Ad Widget . Ad Widget .

ಬಿಳಿನೆಲೆ‌ ಸಹಕಾರ ಸಂಘ ಕೊಂಬಾರು, ಬಿಳಿನೆಲೆ, ಸಿರಿಬಾಗಿಲು ಗ್ರಾಮಗಳ ವ್ಯಾಪ್ತಿ‌ ಹೊಂದಿದ್ದು, ಈ ಸೊಸೈಟಿಗೆ ಮುಖ್ಯ‌ ಕಾರ್ಯನಿರ್ವಹಣಾಧಿಕಾರಿಯಾಗಿ ಸುಳ್ಯ ತಾಲೂಕಿನ ಕೊಲ್ಲಮೊಗ್ರದ ಅಭ್ಯರ್ಥಿಯನ್ನು ನೇಮಕ ಮಾಡಲಾಗಿತ್ತು. ತಮ್ಮ‌ ಸೊಸೈಟಿ ವ್ಯಾಪ್ತಿಯಲ್ಲಿ ಸೂಕ್ತ‌ ಅಭ್ಯರ್ಥಿಗಳಿದ್ದರೂ ಪರ ಊರಿನ ಅಭ್ಯರ್ಥಿಯ ನೇಮಕಾತಿಯನ್ನು ನಾಗರಿಕರು ಪ್ರಶ್ನೆ ಮಾಡಿದ್ದರು. ಅದಲ್ಲದೆ ಇಲ್ಲಿ ಅಧ್ಯಕ್ಷರು ಹಣ ತೆಗೆದುಕೊಂಡು ಆ ವ್ಯಕ್ತಿಯನ್ನು ಆಯ್ಕೆ ಮಾಡಿದ್ದಾರೆ ಎನ್ನುವ ಕೂಗೂ ಕೇಳಿ ಬರುತ್ತಿದಂತೆ ಅಧ್ಯಕ್ಷರು ಸಭೆ ಮಧ್ಯದಿಂದ ಹೊರನಡೆದಿದ್ದಾರೆ ಎನ್ನಲಾಗಿದೆ.

ಈ ವೇಳೆ ದುಡ್ಡು ತೆಗೆದುಕೊಂಡ ಭ್ರಷ್ಟ ಅಧ್ಯಕ್ಷನಿಗೆ ಧಿಕ್ಕಾರ… ಧಿಕ್ಕಾರ…ಎನ್ನುವ ಕೂಗೂ ಜೋರಾಗಿತ್ತು. ಪುನಃ ಅಧ್ಯಕ್ಷರನ್ನು ಸಭೆಗೆ ಕರೆತಂದು ಮಾತುಕತೆ ನಡೆಸಿದರೂ ಧಿಕ್ಕಾರದ ಗೂಗು ಜೋರಾಗಿಯೇ ಇತ್ತು. ಹಾಗಾಗಿ ಪ್ರಶ್ನಾವಳಿಗೆ ಮತ್ತು ಮುಂದಿನ ನಿರ್ಣಯಗಳ ಬಗ್ಗೆ ಮಾಡಿದ ಸಭೆ ಪ್ರತಿಭಟನೆಯಲ್ಲಿ ಪ್ರಾರಂಭವಾಗಿ ಪ್ರತಿಭಟನೆಯಲ್ಲೇ ಮುಕ್ತಾಯಗೊಂಡಿದೆ.

ಈ ಕುರಿತಂತೆ‌ ‘ಸಮಗ್ರ ಸಮಾಚಾರ’ಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ದಾಮೋದರ ಗುಂಡ್ಯ, ನೇಮಕಾತಿಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಸಹಕಾರಿ ಸಂಘದ ಅಧಿನಿಯಮಗಳ ಅಡಿಯಲ್ಲಿ ಸಿಇಒ‌ ನೇಮಕಾತಿ ಆಗಿದೆ. ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ‌ಹಾಗೂ ಮೌಖಿಕ ‌ಸಂದರ್ಶನ ನಡೆಸಿ ಅದರಲ್ಲಿ ಉತ್ತೀರ್ಣರಾದ ಅಭ್ಯರ್ಥಿಯನ್ನು ನೇಮಕ ಮಾಡಲಾಗಿದೆ. ಸದಸ್ಯರ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ’ ಎಂದು ತಿಳಿಸಿದ್ದಾರೆ.

ಅದಲ್ಲದೆ, ಯಾರೋ ನನಗೆ ಸಂಘದವರು ಸುಧೀರ್‌ ಎಂದು ಕರೆ ಮಾಡಿದ್ದರು. ಆದರೆ ಆಲ್ಲಿ ನಾನು ಮಾತನಾಡಿದ್ದು ತುಂಬಾ ಇದೆ. ಆದರೆ ಅವರು ಅದನ್ನು ಅರ್ಧದಿಂದ ಹಾಕಿದ್ದಾರೆ. ಅದಲ್ಲದೆ ಮುಖ್ಯಕಾರ್ಯನಿರ್ವಹಣಾಧಿಕಾರಿ ಮೇಲೆ ಏನಾದರು ಹಗರಣಗಳು ಇದ್ದರೆ ನನಗೆ ದಾಖಲೆ ತಂದು ಕೊಡಿ. ದಾಖಲೆ ಇಲ್ಲದೆ, ಅಥವಾ ಊರಿನವರು ಹೇಳಿದ ಕಾರಣಕ್ಕೆ ನನಗೆ ಆತನನ್ನು ವಜಾ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಗೊಂದಲದ ನಡುವೆಯೂ ಅಧ್ಯಕ್ಷ ದಾಮೋದರ ಗುಂಡ್ಯ ಶೇ.9 ಡಿವಿಡೆಂಡ್ ಘೋಷಣೆ ಮಾಡಿದ್ದು, ಬಳಿಕ ಸಭೆ ಮುಕ್ತಾಯಗೊಂಡಿತು.

Leave a Comment

Your email address will not be published. Required fields are marked *