ಕಾಡು ಹಂದಿಗಾಗಿ ಇಟ್ಟಿದ ವಿದ್ಯುತ್ ತಂತಿ ಸ್ಪರ್ಶಿಸಿ ಯುವಕರಿಬ್ಬರು ಬಲಿ| ಮೃತದೇಹಗಳನ್ನು ಜಮೀನಿನಲ್ಲೇ ಹೂತ ಮಾಲೀಕ

ಸಮಗ್ರ ನ್ಯೂಸ್: ಕಾಡು ಹಂದಿಗಾಗಿ ಇಟ್ಟಿದ ವಿದ್ಯುತ್ ತಂತಿಯನ್ನು ಸ್ಪರ್ಶಿಸಿ ಯುವಕರಿಬ್ಬರ ದುರ್ಮರಣವನ್ನಪ್ಪಿದ್ದು, ಮೃತ ದೇಹವನ್ನು ಜಮೀನಿನ ಮಾಲಕ ಜಮೀನಿನಲ್ಲೇ ಹೂತು ಹಾಕಿದ ಘಟನೆ ಪಾಲಕ್ಕಾಡ್ ನ ಕೊಡುಂಬುವಿನ ಅಂಬಲಪರಂಬು ಗ್ರಾಮದ ಪಲ್ಲೀರಿ ಕಾಲನಿಯಲ್ಲಿ ನಡೆದಿದೆ.

Ad Widget ... ..

ಇಬ್ಬರು ಯುವಕರ ಮೃತದೇಹ ಜಮೀನೊಂದರಲ್ಲಿ ಪತ್ತೆಯಾಗಿತ್ತು. ಈ ಕುರಿತು ಪರಿಶೀಲನೆ ನಡೆಸಿದಾಗ ಜಮೀನಿನ ಮಾಲಕ ಕಾಡು ಹಂದಿಗೆ ತಾನಿಟ್ಟ ವಿದ್ಯುತ್ ತಂತಿಯಿಂದಲೇ ಮೃತಪಟ್ಟಿದ್ದಾರೆಂದು ತಪೊಪ್ಪಿಕೊಂಡಿದ್ದಾನೆ. ಯುವಕರಿಬ್ಬರ ಮೃತದೇಹ ಕಂಡು ಗಾಬರಿಯಿಂದ ತಾನು ದಫನ ಮಾಡಿದೆ ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ.

Ad Widget

ಜಮೀನಿನ ಮಾಲಕ ಅಂಬಲಪರಂಬು ವೀಟ್ಟಿಲ್ ಅನಂತನ್(52) ಪೊಲೀಸರ ವಶದಲ್ಲಿದ್ದಾನೆ. ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Leave a Comment

Your email address will not be published. Required fields are marked *