Ad Widget .

ಬಾಳುಗೋಡು: ಬಿಟ್ಟುಮಕ್ಕಿ-ಪುಣೇರಿ ವರೆಗೆ ಕೆಎಸ್ಆರ್ ಟಿಸಿ ವಿಸ್ತ್ರತ ಬಸ್ ರೂಟ್ ಗೆ ಚಾಲನೆ

ಸಮಗ್ರ ನ್ಯೂಸ್: ಪುತ್ತೂರಿನಿಂದ ಬಾಳುಗೋಡು ಮಾರ್ಗವಾಗಿ ಸಂಚರಿಸುವ ಎಲ್ಲಾ ಬಸ್ಸುಗಳು ಇನ್ನು ಮುಂದೆ ಬಾಳುಗೋಡಿನಿಂದ ಒಂದು ಕಿಮೀ ಮುಂದುವರೆದು ಬೆಟ್ಟುಮಕ್ಕಿ- ಪುಣೇರಿ ಎಸ್.ಸಿ ಕಾಲನಿಯವರೆಗೆ ಸಂಚರಿಸಲಿದ್ದು, ಬಾಳುಗೋಡು ಗ್ರಾಮದ ಬೆಟ್ಟುಮಕ್ಕಿಯಲ್ಲಿ ಇಂದು (ಸೆ. 28ರಂದು) ಚಾಲನೆ ನೀಡಲಾಯಿತು.

Ad Widget . Ad Widget .

ಬಾಳುಗೋಡು ಗ್ರಾಮದ ಹಿರಿಯ ಕಾಂಗ್ರೆಸ್ ಮುಖಂಡ ದಯಾನಂದ ಕಟ್ಟೆಮನೆ ರಿಬ್ಬನ್ ಕತ್ತರಿಸುವ ಮೂಲಕ ಸ್ವಾಗತಿಸಿದರು. ಸುಳ್ಯದ ಕಾಂಗ್ರೆಸ್ ಹಿರಿಯ ಮುಖಂಡ ಬೆಟ್ಟ ಜಯರಾಮ್ ಭಟ್ ನೇತೃತ್ವದಲ್ಲಿ ಬಸ್ ಮಾರ್ಗ ಮುಂದುವರೆಸುವಂತೆ ಸತತವಾಗಿ ಪ್ರಯತ್ನಿಸಿದ್ದ ಬಾಳುಗೋಡು ಗ್ರಾಮ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರವಿ ಕುಮಾರ್ ಕಿರಿಭಾಗ ಮತ್ತು ಹಿರಿಯರಾದ ಹೊನ್ನಪ್ಪ ಗೌಡ ಕುಡುಮುಂಡೂರು ಹಸಿರು ನಿಶಾನೆ ತೋರುವ ಮೂಲಕ ಬಸ್ ಗೆ ಚಾಲನೆ ನೀಡಿದರು.

Ad Widget . Ad Widget .

ಈ ಸಂದರ್ಭದಲ್ಲಿ ರವಿಕುಮಾರ್ ಕಿರಿಬಾಗ ಅವರು ಮಾತನಾಡಿದ ಬಾಳುಗೋಡಿಗೆ ಹಲವು ದಶಕಗಳಿಂದ ಪುತ್ತೂರಿನಿಂದ ಸರಕಾರಿ ಬಸ್ ಸೌಲಭ್ಯ ಇದ್ದರೂ ಸಹ ಸುಳ್ಯ ಡಿಪೋ ದಿಂದ ಬಸ್ ಸೌಲಭ್ಯ ಇಲ್ಲ. ಈ ಬಗ್ಗೆಯೂ ನಾವು ನಮ್ಮ ನಾಯಕರಾದ ಬೆಟ್ಟ ಜಯರಾಮ್ ಭಟ್ ನೇತೃತ್ವದಲ್ಲಿ ಪುತ್ತೂರು ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸಿದ್ದೇವೆ. ಅದೇ ರೀತಿ ಬಾಳುಗೋಡಿನಿಂದ ಬಿಟ್ಟುಮಕ್ಕಿ-ಪುಣೆರಿ ಕಾಲೋನಿವರೆಗೆ ವಿಸ್ತರಿಸುವಂತೆಯೂ ಆಯುಕ್ತರಿಗೆ ಮನವಿ ಮಾಡಿದ್ದೆವು, ನಮ್ಮ ಮನವಿಗೆ ಸ್ಪಂದಿಸಿ ಇಂದು ಬಸ್ ರೂಟ್ ನ್ನು ವಿಸ್ತರಿಸಿ ಈ ಭಾಗದ ನಾಗರಿಕರಿಗೆ, ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಮಾಡಿರುವ ಪ್ರಾದೇಶಿಕ ಆಯುಕ್ತರಿಗೆ, ಸಿಬ್ಬಂದಿಗಳಿಗೆ ಮತ್ತು ಈ ವ್ಯವಸ್ಥೆಯನ್ನು ಶೀಘ್ರದಲ್ಲಿ ಮಾಡಿಸಿದ ಬೆಟ್ಟ ಜಯರಾಮ್ ಭಟ್ ರವರಿಗೆ ಅಭಿನಂದನೆಯನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಮುಖಂಡರುಗಳಾದ ಶೈಲೇಶ್ ಕಟ್ಟೆಮನೆ, ಗಿರೀಶ್ ಕಟ್ಟೆಮನೆ, ಚೇತನ್ ಕಜೆಗದ್ದೆ, ಅನಂತಾರಾಮ ಆಲ್ಕಬೆ, ಪ್ರಧಾನ್ ಕಟ್ಟೆಮನೆ, ಪ್ರಮೋದ್ ಕಟ್ಟೆಮನೆ, ಜಯಂತ್ ಶಿವಾಲ, ಸುಂದರ ಗೌಡ ಕಿರಿಭಾಗ, ಪ್ರಭಾಕರ ಬಾಳುಗೋಡು, ಯಶ್ವಿತಾ ಬಾಳುಗೋಡು, ವಸಂತ ಗೌಡ ಮುಚ್ಚಾರ, ಧರ್ಮಪಾಲ್ ಮುಚ್ಚಾರ, ಶಶಿಧರ ಮುಚ್ಚಾರ, ಕರುಣಾಕರ ಪೊಯ್ಯೆಗದ್ದೆ, ನೇಮಿರಾಜ ಅಂತಿಬೆಟ್ಟು, ದಶರಥ ಶಿವಾಲ, ಸುಖೇಶ್ ಚೈಪೆ, ರಾಜೇಶ್ ಕಿರಿಭಾಗ, ಅರುಣ್ ಕಟ್ಟೆಮನೆ, ಹೊನ್ನಪ್ಪ ಗೌಡ ಪೊಯ್ಯೆಗದ್ದೆ, ಸುರೇಶ್ ಕಿರಿಭಾಗ, ರಮೇಶ್ ಚೈಪೆ, ಜಯರಾಮ ಮುಂಡೋಕಜೆ, ಆನಂದ ಬೆದ್ರುಪಣೆ ಜಯಂತ ಪೊಯ್ಯೆಗದ್ದೆ, ಬಾಲಕೃಷ್ಣ ಶಿವಾಲ, ವಸಂತ ಶಿವಾಲ, ಕುಶಾಲಪ್ಪ ಕಾಂತುಕುಮೇರಿ ಮತ್ತಿತರರು ಉಪಸ್ಥಿತರಿದ್ದರು. ಬಾಳುಗೋಡು ಗ್ರಾಮದ ಪದಕ ಎಂಬಲ್ಲಿಂದ ಪುಣೇರಿ ಎಸ್.ಸಿ ಕಾಲನಿಯವರೆಗೆ ಬಸ್ ಮುಂದುವರೆಸಬೇಕೆಂಬುದು ಸ್ಥಳೀಯರ ಬಹುಕಾಲದ ಬೇಡಿಕೆಯಾಗಿತ್ತು ಈ ನಿಟ್ಟಿನಲ್ಲಿ ಇಂದಿನಿಂದ ಬಸ್ ಚಾಲನೆಗೊಂಡಿರುವುದರಿಂದ ಸ್ಥಳೀಯರು ಸಂಭ್ರಮಪಟ್ಟರು.

Leave a Comment

Your email address will not be published. Required fields are marked *