ಸಮಗ್ರ ನ್ಯೂಸ್: ಮದುವೆ ಮಂಟಪವೊಂದರಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಕನಿಷ್ಠ 100 ಮಂದಿ ಮೃತಪಟ್ಟು, 150 ಮಂದಿ ಗಾಯಗೊಂಡ ಘಟನೆ ಉತ್ತರ ಇರಾನ್ ನ ಬಾಗ್ದಾದ್ ನಲ್ಲಿ ಸಂಭವಿಸಿದೆ.
ರಾಜಧಾನಿ ಬಾಗ್ದಾದ್ನ ವಾಯುವ್ಯಕ್ಕೆ ಸುಮಾರು 335 ಕಿಲೋಮೀಟರ್ ದೂರದಲ್ಲಿರುವ ಉತ್ತರ ನಗರ ಮೊಸುಲ್ನ ಹೊರಗೆ ನಡೆದಿರುವ ಘಟನೆಯಾಗಿದೆ.
ಬೆಂಕಿಯ ಕಾರಣದ ಬಗ್ಗೆ ತಕ್ಷಣದ ಮಾಹಿತಿ ತಿಳಿದು ಬಂದಿಲ್ಲ. ಟೆಲಿವಿಷನ್ ದೃಶ್ಯಾವಳಿಗಳು ಮದುವೆ ಮಂಟಪದ ಒಳಗೆ ಸುಟ್ಟುಹೋದ ಅವಶೇಷಗಳನ್ನು ತೋರಿಸಿದ್ದು, ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸೋ ಕಾರ್ಯದಲ್ಲಿ ನಿರತರಾಗಿದ್ದಾರೆ.
ಆರೋಗ್ಯ ಅಧಿಕಾರಿಗಳು ಸರ್ಕಾರಿ ಸ್ವಾಮ್ಯದ ಇರಾಕಿ ಸುದ್ದಿ ಸಂಸ್ಥೆ ಮೂಲಕ ಸಾವಿನ ಅಂಕಿಅಂಶವನ್ನು ನೀಡಿದ್ದಾರೆ.