Ad Widget .

ಛಾಯಾಗ್ರಾಹಕರ ಸಂಘದ ಅಧ್ಯಕ್ಷ, ಪದಾಧಿಕಾರಿಗಳ ಆಯ್ಕೆ

ಸಮಗ್ರ ನ್ಯೂಸ್: ಸೌತ್ ಕೆನರಾ ಫೋಟೋಗ್ರಾಪರ್ಸ್ ಅಸೊಸಿಯೇಷನ್ ದ.ಕ. ಮತ್ತು ಉಡುಪಿ ಜಿಲ್ಲೆ ಇದರ ಜಂಟಿ ಕಾರ್ಯಕಾರಿ ಸಭೆ ಮಂಗಳೂರಿನ ಸೈಂಟ್ ಸೆಬಾಸ್ಟಿಯನ್ ಹಾಲ್ ನಲ್ಲಿ ಸೆ. 26ರಂದು ನಡೆಯಿತು.

Ad Widget . Ad Widget .

ಜಿಲ್ಲಾಧ್ಯಕ್ಷ ಆನಂದ ಎನ್. ಬಂಟ್ವಾಳ್ ಹಾಗೂ ಎಲ್ಲಾ ಜಿಲ್ಲಾ ಪದಾಧಿಕಾರಿಗಳ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ 2024-25 ನೇ ಸಾಲಿನ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು. ಸುಳ್ಯ ವಲಯದ ನಿಕಟ ಪೂರ್ವ ಅಧ್ಯಕ್ಷ ಹರೀಶ್ ಪಿ. ರಾವ್ ಇವರನ್ನು ಜಿಲ್ಲಾ ಛಾಯಾ ಗ್ರಾಹಕ ಮಾಧ್ಯಮ ಪ್ರತಿನಿಧಿಯಾಗಿ ಆಯ್ಕೆ ಮಾಡಲಾಯಿತು.

Ad Widget . Ad Widget .

ಈ ಸಭೆಯಲ್ಲಿ ಸುಳ್ಯ ವಲಯದ ಸ್ಥಾಪಕಧ್ಯಕ್ಷ ಗೋಪಾಲ್ ಸುಳ್ಯ, ಜಿಲ್ಲಾ ಉಪಾಧ್ಯಕ್ಷ ಲೋಕೇಶ್ ಸುಬ್ರಹ್ಮಣ್ಯ ಮತ್ತು ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *