ಸಮಗ್ರ ನ್ಯೂಸ್: ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾಗಿ ಹೋದ ಉಜಿರೆ ಎಸ್.ಡಿ.ಎಂ ಕಾಲೇಜಿನ ವಿದ್ಯಾರ್ಥಿನಿ, ಧರ್ಮಸ್ಥಳ ಸಮೀಪದ ಪಾಂಗಾಳ ನಿವಾಸಿ ಕು. ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸತೊಂದು ಅಧ್ಯಾಯ ಶುರುವಾಗಿದೆ.
‘ಕ್ಷಮಿಸು ಸೌಜನ್ಯ’ ಹೆಸರಿನಲ್ಲಿ ಈ ಕುರಿತಂತೆ ಸರಣಿ ಕಾರ್ಯಕ್ರಮಗಳನ್ನು ಬಿತ್ತರಿಸಿದ ಖಾಸಗಿ ವಾಹಿನಿ ‘ಪವರ್ ಟಿವಿ’ ಸೆ.26ರಂದು ಪ್ರೋಮೋ ಒಂದರಲ್ಲಿ ‘ಕ್ಷಮಿಸು ಸೌಜನ್ಯ- ಭಾಗ4’ ನ್ನು ಸೆ.27ರ ಬೆಳಿಗ್ಗೆ 9 ಗಂಟೆಗೆ ಪ್ರಸಾರ ಮಾಡುವುದಾಗಿ ಘೋಷಿಸಿತ್ತು.
ಆದರೆ ವಾಹಿನಿಯು ಇಂದು ಕಾರ್ಯಕ್ರಮ ಬಿತ್ತರಿಸದೇ ಇರುವುದನ್ನು ಪ್ರಶ್ನಿಸಲು ಸೌಜನ್ಯ ತಾಯಿ ಕುಸುಮಾವತಿಯವರು ಚಾನೆಲ್ ಎಂ.ಡಿ ರಾಕೇಶ್ ಶೆಟ್ಟಿಗೆ ಕರೆ ಮಾಡಿದ್ದಾರೆ. ಈ ವೇಳೆ ರಾಕೇಶ್ ಶೆಟ್ಟಿ ಕರೆ ಮಾಡಿದ ವ್ಯಕ್ತಿ ಕುಸುಮಾವತಿ ಎಂಬುದನ್ನು ತಿಳಿದ ಬಳಿಕ ‘ರಾಂಗ್ ನಂಬರ್’ ಎಂದು ಕರೆ ಕಡಿತಗೊಳಿಸಿದ್ದಾರೆ.
ವಾಹಿನಿ ತನ್ನ ಪ್ರೋಮೋದಲ್ಲಿ ಹೇಳಿಕೊಂಡಂತೆ ಓರ್ವ ವಿಶೇಷ ವ್ಯಕ್ತಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿತ್ತು. ಇದರಿಂದ ಸೌಜನ್ಯಳ ಪ್ರಕರಣಕ್ಕೆ ತಿರುವು ನೀಡುತ್ತೆ ಎಂದು ವಾಹಿನಿ ಹೇಳಿಕೊಂಡಿತ್ತು. ಆದರೆ ಕಾರ್ಯಕ್ರಮ ಪ್ರಸಾರವಾಗದೇ ಇರುವುದು ಸೂಟ್ ಕೇಸ್ ಅನುಮಾನ ಎಂದು ಜನರಾಡಿಕೊಳ್ಳುತ್ತಿದ್ದಾರೆ.
ರಾಕೇಶ್ ಶೆಟ್ಟಿಯ ಈ ವರ್ತನೆ ಇದೀಗ ಹಲವು ಅನುಮಾನಗಳಿಗೆ ಕಾರಣವಾಗಿದೆ. ಪ್ರಸಾರವಾಗಬೇಕಿದ್ದ ಕಾರ್ಯಕ್ರಮವನ್ನು ರದ್ದುಗೊಳಿಸಿರುವುದು, ಹಾಗೂ ಕರೆ ಮಾಡಿರುವ ಕುಸುಮಾವತಿಯವರ ಜೊತೆ ಮಾತಾನಾಡದೇ ಇರುವುದು ರಾಕೇಶ್ ಶೆಟ್ಟಿ ಸೌಜನ್ಯ ಹೆಸರಲ್ಲಿ ಹಣ ಮಾಡಲು ಹೊರಟಿದ್ದಾರಾ? ಎಂಬ ಅನುಮಾನ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ಈಗಾಗಲೇ ತನ್ನ ಮೂರೂ ಸಂಚಿಕೆಯಲ್ಲಿ ಪವರ್ ಟಿವಿ ಸೌಜನ್ಯ ಪ್ರಕರಣದ ಹೋರಾಟದ ಹಾದಿಯನ್ನು ದಾರಿ ತಪ್ಪಿಸಲು ಪ್ರಯತ್ನಿಸಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.