Ad Widget .

ಕೋಲ್ಹಾರ:ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕೆನರಾ ಬ್ಯಾಂಕ್ ಮ್ಯಾನೇಜರ್ ಗೆ ಮನವಿ

ಸಮಗ್ರನ್ಯೂಸ್:ಕೋಲ್ಹಾರ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ರೋಣಿಹಾಳ ಗ್ರಾಮದ ಕೆನರಾ ಬ್ಯಾಂಕ್ ಮ್ಯಾನೇಜರ್ ಮತ್ತು ಸಿಬ್ಬಂದಿಗಳನ್ನು ಕನ್ನಡ ಭಾಷೆ ಮಾತನಾಡಲು ಬರುವಂತವರನ್ನು ಆಯ್ಕೆ ಮಾಡಬೇಕು.

Ad Widget . Ad Widget .

ಬ್ಯಾಂಕುಗಳಲ್ಲಿ ಪಾಸ್ ಬುಕ್ ಎಂಟ್ರಿ ಮಾಡುವ ಪ್ರಿಂಟಿಂಗ್ ಮಿಷನ್ ವನ್ನು ಹೆಚ್ಚುವರಿಯಾಗಿ ಅಳವಡಿಸಬೇಕು ಹಾಗೂ ಕಾಂಗ್ರೆಸ್ ಸರ್ಕಾರದ ಯೋಜನೆಗಳು ಜಾರಿಗೆ ಆಗಿದ್ದರಿಂದ ಬ್ಯಾಂಕಿನ ಕ್ಯಾಶ್ ಕೌಂಟರ್ ಗಳಲ್ಲಿ ದಿನವಿಡಿ ಸಾರ್ವಜನಿಕರ ಗದ್ದಲ ಇರುವುದರಿಂದ ಇನ್ನೊಂದು ಕ್ಯಾಶ್ ಕೌಂಟರ್ ಮತ್ತು ಹೊಸದಾಗಿ ಸಿಬ್ಬಂದಿಗಳನ್ನು ಭರ್ತಿ ಮಾಡಿಕೊಳ್ಳಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಬ್ಬು ಬೆಳೆಗಾರರ ಒಕ್ಕೂಟದ ಸಂಘಟನೆಯ ವತಿಯಿಂದ ಸೋಮವಾರ ಬೇಡಿಕೆಗೆ ಆಗ್ರಹಿಸಿದರು.

Ad Widget . Ad Widget .

ಈ ಸಂಧರ್ಭದಲ್ಲಿ ಬ್ಯಾಂಕ್ ಮ್ಯಾನೇಜರ್ ಮುಖೇಶ್ ರೋಷನ್ ಅವರಿಗೆ ಮನವಿ ನೀಡಲಾಯಿತು.ಈ ವೇಳೆಯಲ್ಲಿ ಅಧ್ಯಕ್ಷ ಸೋಮು ಬಿರಾದಾರ ಶ್ರೀಶೈಲ್ ಬಾಡಗಿ ರಮೇಶ್ ಗೋಳಗೊಂಡ ಕುಮಾರ್ ಮೇತ್ರಿ ಅಮಿತ್ ಜಾಗಿದಾರ್ ಕಲ್ಲು ಬಾಡಿಗಿ ರವಿ ಕದಂಬ ವಿದ್ಯಾಸಾಗರ ಪಾಟೀಲ್ ಪರಶುರಾಮ್ ನ್ಯಾಮಗೊಂಡ ಸಿದ್ದಲಿಂಗ ಶಂಕ್ರಪ್ಪ ಚಲವಾದಿ ಮತ್ತು ಗ್ರಾಹಕರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *