Ad Widget .

ಸೆಕ್ಸ್ ಗೆ ಒಪ್ಪದ ಪ್ರಿಯಕರನ ಮರ್ಮಾಂಗಕ್ಕೆ ಕಚ್ಚಿದ ಯುವತಿ| ಪ್ರಿಯತಮೆಯ ಡಬಲ್ ಆಫರ್ ತಿರಸ್ಕರಿಸಿದಾತನಿಗೆ ಅದೆಂತಾ ಶಿಕ್ಷೆ!!

ಸಮಗ್ರ ನ್ಯೂಸ್: ತನ್ನ ಸ್ನೇಹಿತೆಯೊಂದಿಗೆ ದೈಹಿಕ ಸಂಪರ್ಕ ಸಾಧಿಸಲಿಲ್ಲ ಎಂದು ಕೋಪಗೊಂಡ ಗೆಳತಿ, ಪ್ರಿಯಕರನ ಗುಪ್ತಾಂಗಕ್ಕೆ ಕಚ್ಚಿದ ಆಘಾತಕಾರಿ ಮತ್ತು ವಿಚಿತ್ರ ಘಟನೆ ಕಾನ್ಪುರದಲ್ಲಿ ನಡೆದಿದೆ. ತೀವ್ರ ಗಾಯಗೊಂಡಿರುವ ಯುವಕ ಆಸ್ಪತ್ರೆ ಪಾಲಾಗಿದ್ದಾನೆ. ಈ ಬಗ್ಗೆ ದೂರು ಕೂಡ ದಾಖಲಾಗಿದೆ.

Ad Widget . Ad Widget .

ನಡೆದಿದ್ದು ಇಷ್ಟು: ಕಾನ್ಪುರದ ಚೌಬೇಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮದ ವ್ಯಕ್ತಿಯೊಬ್ಬರು ಕೆಲ ವರ್ಷಗಳ ಹಿಂದೆ ವಿವಾಹವಾಗಿದ್ದರು. ಆದರೆ, ಅದೇ ಗ್ರಾಮದ ಮತ್ತೊಬ್ಬ ಮಹಿಳೆಯೊಂದಿಗೆ ಆತ ವಿವಾಹೇತರ ಸಂಬಂಧ ಹೊಂದಿದ್ದ. ಹೀಗಿದ್ದಾಗ ಸೋಮವಾರ ಮಧ್ಯರಾತ್ರಿ ಗೆಳತಿಯು ತನ್ನ ಪ್ರಿಯಕರನಿಗೆ ಕರೆ ಮಾಡಿ ಮನೆಗೆ ಆಹ್ವಾನಿಸಿದ್ದಾಳೆ. ಅಲ್ಲದೇ, ತನ್ನ ಇನ್ನೊಬ್ಬ ಗೆಳತಿಯನ್ನೂ ಆಕೆ ಕರೆಯಿಸಿಕೊಂಡಿದ್ದಳು. ಪ್ರಿಯಕರ ಮನೆಗೆ ಬಂದ ಬಳಿಕ ವಿಚಿತ್ರ ಬೇಡಿಕೆಯೊಂದನ್ನು ಆಕೆ ಇಟ್ಟಿದ್ದು, ತನ್ನ ಇನ್ನೊಬ್ಬ ಸ್ನೇಹಿತೆಯ ಜೊತೆಗೂ ದೈಹಿಕ ಸಂಪರ್ಕ ಹೊಂದಲು ಸ್ವತಃ ಗೆಳತಿಯೇ ಆಫರ್​ ನೀಡಿದ್ದಾಳೆ.

Ad Widget . Ad Widget .

ಇದನ್ನು ನಿರಾಕರಿಸಿದ ಆತನ ಮೇಲೆ ಆಕೆ ತೀವ್ರ ಒತ್ತಡ ಹೇರಿದ್ದಾಳೆ. ಇಷ್ಟಾದರೂ ಬಗ್ಗದ ಆತ ಇನ್ನೊಬ್ಬ ಮಹಿಳೆ ಜೊತೆ ದೈಹಿಕವಾಗಿ ಬೇರೆಯಲ್ಲ ಎಂದಿದ್ದಾನೆ. ಇದು ಗೆಳತಿಯ ಪಿತ್ತ ನೆತ್ತಿಗೇರಿಸಿದೆ. ಕೋಪದಲ್ಲಿ ಗೆಳತಿ ಆಕೆಯ ಗೆಳೆಯನ ಗುಪ್ತಾಂಗವನ್ನು ಬಾಯಿಯಿಂದ ಕಚ್ಚಿದ್ದಾಳೆ.

ಘಟನೆಯಲ್ಲಿ ಆ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು, ಜೊತೆಗೆ ಪೇಚಿಗೆ ಸಿಲುಕಿದ್ದಾನೆ. ಘಟನೆಯಿಂದ ತೀವ್ರ ಮುಜುಗರಕ್ಕೀಡಾಗ ಯುವಕ ಅಲ್ಲಿಂದ ಓಡಿ ಹೋಗಿದ್ದಾನೆ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಯುವಕ ಈ ವಿಷಯವನ್ನು ಪತ್ನಿಗೆ ತಿಳಿಸಿದ್ದಾನೆ. ಈ ವಿಷಯ ಹೊರಗೆ ಗೊತ್ತಾದರೆ, ಮರ್ಯಾದೆ ಹಾಳಾಗುತ್ತದೆ. ಪೊಲೀಸರಿಗೂ ಹೇಳಬೇಡ ಎಂದು ಪತ್ನಿಯಲ್ಲಿ ಕೋರಿಕೊಂಡಿದ್ದಾನೆ.

ಗಂಡನ ಸ್ಥಿತಿ ಕಂಡು ಹೆದರಿದ ಪತ್ನಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಪೊಲೀಸರು ಸ್ಥಳಕ್ಕಾಗಮಿಸಿ ನೋವಿನಿಂದ ಒದ್ದಾಡುತ್ತಿದ್ದ ಯುವಕನನ್ನು ಚೌಬೇಪುರ ಪ್ರಾಥಮಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗುಪ್ತಾಂಗಕ್ಕೆ ತೀವ್ರ ಗಾಯವಾಗಿದ್ದರಿಂದ ಆತನ ಸ್ಥಿತಿ ಗಂಭೀರವಾಗಿದೆ ಎಂದು ಕಾನ್ಪುರದ ಜಿಲ್ಲಾ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Comment

Your email address will not be published. Required fields are marked *