ಸೌಜನ್ಯ ಪ್ರಕರಣ ಪರ ದನಿ ಎತ್ತದ ತುಳು ಚಿತ್ರನಟರ ವಿರುದ್ಧ ಪೋಸ್ಟರ್ ಅಭಿಯಾನ

ಸಮಗ್ರ ನ್ಯೂಸ್: ಹನ್ನೆರಡು ವರ್ಷಗಳ ಹಿಂದೆ ಅತ್ಯಾಚಾರಕ್ಕೆ ಒಳಗಾಗಿ‌ ಕೊಲೆಯಾಗಿ‌ ಹೋದ ಧರ್ಮಸ್ಥಳ ಸಮೀಪದ ಪಾಂಗಾಳ ನಿವಾಸಿ ಕುಮಾರಿ ಸೌಜನ್ಯ ಪ್ರಕರಣದ ಕುರಿತಂತೆ ಮೌನಕ್ಕೆ ಶರಣಾಗಿರುವ ತುಳು ಚಿತ್ರರಂಗದ ನಟರ ವಿರುದ್ದ ಪೋಸ್ಟರ್ ಅಭಿಯಾನ ಆರಂಭಿಸಲಾಗಿದೆ.

Ad Widget ... ..

ಕರಾವಳಿ ಸೇರಿದಂತೆ ರಾಜ್ಯಾದ್ಯಂತ ಸೌಜನ್ಯ ಪರ ಪ್ರತಿಭಟನೆಗಳು ನಡೆಯುತ್ತಿದ್ದು, ಕನ್ನಡ ಚಿತ್ರರಂಗದ ಹಲವಾರು ನಟರು ಸೌಜನ್ಯಳ ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಾರೆ. ಆದರೆ ಕರಾವಳಿಯಲ್ಲೇ ನಡೆದ ಈ ಹೇಯ ಕೃತ್ಯಕ್ಕೆ ಸಂಬಂಧಿಸಿದಂತೆ ತುಳು ಚಿತ್ರರಂಗದ ದಿಗ್ಗಜರು ಮೌನಕ್ಕೆ ಶರಣಾಗಿದ್ದಾರೆ.

Ad Widget

ಇದೀಗ ಈ ನಟರ ಪೋಟೋಗಳನ್ನು ಪೋಸ್ಟರ್ ಮಾಡಲಾಗಿದ್ದು, ಬ್ಯಾನ್ ಅಭಿಯಾನ ಆರಂಭಿಸಲಾಗಿದೆ. ಜಾಲತಾಣಗಳಲ್ಲಿ ಈ ಮುಖೇನ ಪೋಸ್ಟರ್ ಹರಿಬಿಡಲಾಗಿದೆ.

Leave a Comment

Your email address will not be published. Required fields are marked *