ಸಮಗ್ರ ನ್ಯೂಸ್: ಪಾಕಿಸ್ತಾನದಲ್ಲಿ ರೈಲು ದುರಂತ ಸಂಭವಿಸುವುದು ಇದೆ ಮೊದಲಲ್ಲ. ಇಲ್ಲಿನ ಇಲಾಖೆಗೆ ಸೂಕ್ತ ತಂತ್ರಜ್ಞಾನ ಸೌಲಭ್ಯ ಇಲ್ಲದೆ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿವೆ. ಹೀಗೆ ಇದೀಗ ಮತ್ತೊಂದು ಅಪಘಾತ ಉಂಟಾಗಿದೆ.
ಈ ದುರ್ಘಟನೆ ನಡೆದಿದ್ದು ಪಾಕಿಸ್ತಾನ ಪಂಜಾಬ್ ಪ್ರಾಂತ್ಯದ ಶೇಖಾಪುರ ಜಿಲ್ಲೆಯ ಕಿಲಾ ಸತ್ತಾರ್ ಶಾ ರೈಲ್ವೆ ನಿಲ್ದಾಣದಲ್ಲಿ. ಈ ಭೀಕರ ದುರಂತದಲ್ಲಿ ಒಟ್ಟು 31 ಪ್ರಯಾಣಿಕರು ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಪಘಾತ ಸಂಭವಿಸಿರುವ ರೈಲು ಮಿಯಾನ್ವಾಲಿ ಪ್ರದೇಶದಿಂದ ಲಾಹೋರ್ ಕಡೆಗೆ ತೆರಳುತ್ತಿತ್ತು. ಆದರೆ ಪ್ರಯಾಣಿಕರ ರೈಲು ನಿಲ್ಲುವ ಹಳಿ ಮೇಲೆ ಸರಕು ಸಾಗಣೆ ರೈಲು ನಿಂತಿದ್ದ ಪರಿಣಾಮ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಹೀಗೆ ಪದೇ ಪದೆ ಪಾಕಿಸ್ತಾನದಲ್ಲಿ ರೈಲು ಅಪಘಾತಗಳು ಸಂಭವಿಸುತ್ತಿದ್ದು ಆಗಸ್ಟ್‌ನಲ್ಲಿ ಕೂಡ ಇದೇ ರೀತಿ ಪಾಕಿಸ್ತಾನದಲ್ಲಿ ಭೀಕರ ರೈಲು ಅಪಘಾತ ಸಂಭವಿಸಿತ್ತು.
ಇನ್ನೂ ಗಾಯಾಳುಗಳ ಪೈಕಿ ಐವರ ಪರಿಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ. ಈ ರೈಲು ಅಪಘಾತ ನಡೆದ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಪಘಾತ ಪರಿಣಾಮ ಹಲವು ರೈಲುಗಳ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು ಆದರೆ ಪರಿಸ್ಥಿತಿ ಸರಿ ಮಾಡಿ, ರೈಲುಗಳ ಸಂಚಾರಕ್ಕೂ ವ್ಯವಸ್ಥೆ ಮಾಡಲಾಗಿದೆ. ಹಾಗೇ ರೈಲು ಚಾಲಕ & ಸಹಾಯಕನನ್ನು ಸಸ್ಪೆಂಡ್ ಮಾಡಲಾಗಿದೆ ಎಂದು ರೈಲ್ವೆ ವಕ್ತಾರರು ತಿಳಿಸಿದ್ದಾರೆ.