Ad Widget .

ಬೆಂಗಳೂರು ಬಂದ್ ಹಿನ್ನೆಲೆ 13 ಫ್ಲೈಟ್ ರದ್ದು

ಸಮಗ್ರ ನ್ಯೂಸ್: ಬೆಂಗಳೂರು ಬಂದ್​ ಹಿನ್ನೆಲೆ ಎಲ್ಲೆಡೆ ಪ್ರತಿಭಟನೆಗಳು ನಡೆಯುತ್ತಿದ್ದು ಇದರಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಖಾಲಿಖಾಲಿಯಾಗಿದೆ.
ಬಂದ್ ಬಿಸಿಯಿಂದ ಜನ ವಿಮಾನ ನಿಲ್ದಾಣದತ್ತ ಮುಖ ಮಾಡಿಲ್ಲ. ಹೆಚ್ಚಿನ ಪ್ರಯಾಣಿಕರಿಲ್ಲದ ಕಾರಣ ಕೊಚ್ಚಿ, ದೆಹಲಿ, ಮುಂಬೈ ಮತ್ತು ಮಂಗಳೂರು ವಿಮಾನಗಳನ್ನು ರದ್ದು ಮಾಡಲಾಗಿದೆ. ಏರ್ಲೈನ್ಸ್ ಸಿಬ್ಬಂದಿ ಕೊನೆ ಕ್ಷಣದಲ್ಲಿ 13 ಪ್ಲೈಟ್​ಗಳನ್ನ ರದ್ದು ಮಾಡಿದ್ದಾರೆ.

Ad Widget . Ad Widget .

ಏರ್ ಪೋರ್ಟಿನಲ್ಲಿ ಪ್ರಯಾಣಿಕರಿಗಾಗಿ ಕಾಯುತ್ತಿದ್ದ ಕ್ಯಾಬ್ ಚಾಲಕರು ಅಳಲು ತೋಡಿಕೊಂಡಿದ್ದಾರೆ. ರಾತ್ರಿ ಒಂದು ಗಂಟೆಯಿಂದ ಪ್ರಯಾಣಿಕರಿಗಾಗಿ ಕಾಯುತ್ತಿದ್ದೇನೆ. ಬೆಳಗ್ಗೆಯಿಂದ ಒಂದೇ ಒಂದು ಡ್ರಾಪ್‌ ಮಾತ್ರ ಸಿಕ್ಕಿದೆ. ಬಂದ್‌ ಹಿನ್ನೆಲೆ ಪ್ರಯಾಣಿಕರು ಬರ್ತಿಲ್ಲ. ಪ್ಲೈಟ್‌ಗಳು ಇವೆ ಆದರೆ ಜನರು ಬರ್ತಿಲ್ಲ ಎಂದು ಹೇಳುತ್ತಿದ್ದಾರೆ.

Ad Widget . Ad Widget .

Leave a Comment

Your email address will not be published. Required fields are marked *