Ad Widget .

ತಿರುಪತಿಗೆ ತೆರಳುವ ಭಕ್ತರಿಗೆ ಗುಡ್ ನ್ಯೂಸ್

ಸಮಗ್ರ ನ್ಯೂಸ್: ತಿಮ್ಮಪ್ಪನ ದರ್ಶನ ಪಡೆಯಲು ಪ್ರತಿದಿನ ದೂರದ ಊರುಗಳಿಂದ ಭಕ್ತರು ಹೋಗುತ್ತಾರೆ. ಅದೇ ರೀತಿ ನಮ್ಮ ರಾಜ್ಯದಿಂದಲೂ ತೆರಳುವ ಭಕ್ತರ ಸಂಖ್ಯೆಯೂ ಹೆಚ್ಚು, ಆದರೆ ಇದೀಗ ಆಂಧ್ರ ಪ್ರದೇಶದಲ್ಲಿರುವ ಪುಣ್ಯಕ್ಷೇತ್ರ ತಿರುಮಲಕ್ಕೆ ತೆರಳುವ ಕರ್ನಾಟಕದ ಭಕ್ತರಿಗೆ ರಾಜ್ಯದ ಮುಜರಾಯಿ ಇಲಾಖೆ ಸಂತಸದ ಸುದ್ದಿ ನೀಡಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ತಿರುಪತಿಗೆ ತೆರಳುವ ಭಕ್ತರ ಸಂಖ್ಯೆ ಹೆಚ್ಚಿರುವ ಹಿನ್ನೆಲೆ ಅಲ್ಲಿ ಉಳಿದುಕೊಳ್ಳಲು ಕೆಲವೊಮ್ಮೆ ಅತಿಥಿಗೃಹಗಳೇ ಸಿಗಲ್ಲ. ಅತಿಥಿಗೃಹ ಸೇರಿದಂತೆ ಅನೇಕ ಸಮಸ್ಯೆಗಳನ್ನು ಭಕ್ತರು ಎದುರಿಸುತ್ತಾರೆ. ಈ ಸಮಸ್ಯೆಗಳನ್ನು ಗಮನಿಸಿದ ಕರ್ನಾಟಕ ಸರ್ಕಾರ ತಿರುಪತಿಯಲ್ಲಿ ರಾಜ್ಯದ ಭಕ್ತರಿಗಾಗಿಯೇ ನೂರಾರು ಕೋಟಿ ರೂಪಾಯಿ ವೆಚ್ಚದಲ್ಲಿ ಅತಿಥಿಗೃಹ ನಿರ್ಮಾಣ ಮಾಡುತ್ತಿರೋ ವಿಷಯ ಎಲ್ಲರಿಗೂ ಗೊತ್ತಿರುವಂತದು. ಈ ಅತಿಥಿಗೃಹಕ್ಕೆ ಕನಕ ಭವನ ಎಂದು ಹೆಸರಿಡಲಾಗಿದೆ.

Ad Widget . Ad Widget . Ad Widget .

ಇದೇ ವಿಚಾರಕ್ಕೆ ಸಂಬಂದಿಸಿದಂತೆ ಸಚಿವರಾದ ರಾಮಲಿಂಗಾರೆಡ್ಡಿ ಅವರು ಕನಕ ಭವನ ನಿರ್ಮಾಣದ ಕಾಮಗಾರಿ ಶೇ.70ರಷ್ಟು ಪೂರ್ಣಗೊಂಡಿದೆ. ಮುಂದಿನ ವರ್ಷ ಅಂದ್ರೆ 2024ರ ಜನವರಿ ವೇಳೆಗೆ ಕನಕ ಭವನ ಸಾರ್ವಜನಿಕರ ಬಳಕೆಗೆ ಮುಕ್ತವಾಗಲಿದೆ ಎಂದು ಸಚಿವವರು ಹೇಳಿದ್ದಾರೆ.
ತಿರುಪತಿಗೆ ತೆರಳುವ ಭಕ್ತರಿಗೆ ಇದೊಂದು ರೀತಿಯಲ್ಲಿ ಸಂತಸದ ಸುದ್ದಿ ನೀಡಿದ್ದಾರೆ.

Leave a Comment

Your email address will not be published. Required fields are marked *