Ad Widget .

ಮದುವೆಯಾಗಿ ಏಳೇ ತಿಂಗಳಿಗೆ ಮಗು ಹಡೆದ ಸ್ವರಾ ಭಾಸ್ಕರ್

ಸಮಗ್ರ ನ್ಯೂಸ್: ನಟಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಸ್ವರಾ ಭಾಸ್ಕರ್ ಅವರು ಸೆಪ್ಟೆಂಬರ್ 23ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಸಮಾಜವಾದಿ ಪಕ್ಷದ ನಾಯಕ ಫಹಾದ್ ಅಹ್ಮದ್ ಅವರು ಸ್ವರಾ ಅವರ ಪತಿಯಾಗಿದ್ದಾರೆ. ತಮಗೆ ಹೆಣ್ಣು ಮಗು ಜನಿಸಿದ ಮಾಹಿತಿಯನ್ನು ದಂಪತಿಯು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Ad Widget . Ad Widget .

ಸೋಷಿಯಲ್ ಮೀಡಿಯಾದಲ್ಲಿ ಜಂಟಿಯಾಗಿ ಪೋಸ್ಟ್ ಮಾಡಿರುವ ಸ್ವರಾ ಮತ್ತು ಫಹಾದ್ ಅವರು, ನಮ್ಮ ಪ್ರಾರ್ಥನೆ ಫಲಿಸಿತು. ಆಶೀರ್ವಾದ ಲಭಿಸಿತು. ಹಾಡು ಪಿಸುಗುಟ್ಟಿದೆ… ಅದು ಅತೀಂದ್ರಿಯ ಸತ್ಯ…. ಸೆಪ್ಟೆಂಬರ್ 23ರಂದು ನಮಗೆ ಹೆಣ್ಣು ಮಗು ಜನಿಸಿದೆ. ಕೃತಜ್ಞತೆಯ ಮತ್ತು ಸಂತೋಷದ ಹೃದಯಗಳೊಂದಿಗೆ, ನಿಮ್ಮ ಪ್ರೀತಿಗೆ ಧನ್ಯವಾದಗಳು! ಇದು ಸಂಪೂರ್ಣ ಹೊಸ ಜಗತ್ತು ಎಂದು ಬರೆದುಕೊಂಡಿದ್ದಾರೆ.

Ad Widget . Ad Widget .

ಇದೇ ವರ್ಷದ ಫೆಬ್ರವರಿಯಲ್ಲಿ ಸ್ವರಾ ಭಾಸ್ಕರ್ ಮ್ತತು ಫಹಾದ್ ಅಹ್ಮದ್ ಅವರು ಕೋರ್ಟ್‌ನಲ್ಲಿ ವಿವಾಹವಾಗಿದ್ದರು. ಬಳಿಕ ಮಾರ್ಚ್ ತಿಂಗಳಲ್ಲಿ ಹಳದಿ, ಸಂಗೀತ, ವೆಡ್ಡಿಂಗ್ ರಿಸೆಪ್ಷನ್ ಸೇರಿದಂತೆ ಅನೇಕ ಮದುವೆಯ ಕಾರ್ಯಕ್ರಮಗಳನ್ನು ನಡೆಸಿದ್ದರು. ಜೂನ್ ತಿಂಗಳಲ್ಲಿ ತಾವು ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಸ್ವರಾ ಭಾಸ್ಕರ್ ಹಾಗೂ ಫಹಾದ್ ಅಹ್ಮದ್ ಅವರು ಘೋಷಿಸಿದ್ದರು. ಈಗ ಮುದ್ದಾದ ಹೆಣ್ಣುಮಗಳ ತಂದೆತಾಯಿಯಾಗಿದ್ದಾರೆ.

Leave a Comment

Your email address will not be published. Required fields are marked *