ಸಮಗ್ರ ನ್ಯೂಸ್: ಸುಳ್ಯ ತಾಲ್ಲೂಕಿನ ಕೊಲ್ಲಮೊಗ್ರು ಗ್ರಾಮದ ಶಿವಾಲ ಎಂಬಲ್ಲಿ ನೆಲೆಸಿರುವ ಸಚಿತ್ ಶಿವಾಲ ಎಂಬುವವರಿಗೆ ಕಿಡ್ನಿ ವೈಫಲ್ಯನಿಂದ ಬಳಲುತ್ತಿದ್ದು, ಅವರ ಚಿಕಿತ್ಸೆಗಾಗಿ ಕಲ್ಮಕಾರಿನ ಯುವಕರು ಧನ ಸಂಗ್ರಹ ಮಾಡಿ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಸಚಿತ್ ಶಿವಾಲ ಕಳೆದ ಎರಡು ವರ್ಷಗಳಿಂದ ಕಿಡ್ನಿ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದು, ಈಗಾಗಲೇ ಎರಡು ಕಿಡ್ನಿಗಳು ಶೇ 80 ರಷ್ಟು ನಿಷ್ಕ್ರಿಯಗೊಂಡಿದ್ದು, ಅತೀ ಶೀಘ್ರದಲ್ಲೇ ಕಿಡ್ನಿ ಟ್ರಾನ್ಸ್ ಪ್ಲಾಂಟ್ ಮಾಡುವುದು ಅನಿವಾರ್ಯವಾಗಿದೆ. ಇದಕ್ಕಾಗಿ 16 ಲಕ್ಷದಷ್ಟು ಹಣದ ಅವಶ್ಯಕತೆ ಇದೆ.

ಈ ಹಂತದಲ್ಲಿ ಕಲ್ಮಕಾರಿನ ಯುವಕರು ಗುಂಪೊಂದು ಊರೂರು ತಿರುಗಾಡಿ ಒಂದು ಲಕ್ಷಕ್ಕೂ ಮಿಗಿಲಾದ ಮೊತ್ತವನ್ನು ಸಂಗ್ರಹಿಸಿ ಸಂತ್ರಸ್ತನ ಕುಟುಂಬಕ್ಕೆ ಹಸ್ತಾಂತರ ಮಾಡಿದ್ದಾರೆ.
ಸಂತ್ರಸ್ತನಿಗಾಗಿ ಮಿಡಿದ ಈ ಯುವ ಮನಸ್ಸುಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.