Ad Widget .

ಜಲವಿವಾದಗಳ ಪರಿಹಾರಕ್ಕಾಗಿ 122.76 ಕೋಟಿ ವಕೀಲರ ಶುಲ್ಕ/ ಮಾಹಿತಿ ಹಕ್ಕಿನಲ್ಲಿ ಬಹಿರಂಗ

ಸಮಗ್ರ ನ್ಯೂಸ್: ಕರ್ನಾಟಕದ ಕೃಷ್ಣಾ, ಕಾವೇರಿ ಮತ್ತು ಮಹದಾಯಿ ನದಿಗಳ ವಿಚಾರದಲ್ಲಿ ಹೊರ ರಾಜ್ಯಗಳೊಂದಿಗೆ ಇರುವ ವಿವಾದವನ್ನು ಬಗೆಹರಿಸಲು ವಕೀಲರ ಶುಲ್ಕವಾಗಿ 122.76 ಕೋಟಿ ಹಣವನ್ನು ಖರ್ಚು ಮಾಡಿದೆ ಎಂದು ಮಾಹಿತಿ ಹಕ್ಕಿನಲ್ಲಿ ತಿಳಿದುಬಂದಿದೆ. ಕಾವೇರಿ, ಕೃಷ್ಣಾ ಮತ್ತು ಮಹದಾಯಿ ಜಲವಿವಾದ ನ್ಯಾಯಮಂಡಳಿಗಳಲ್ಲಿ ರಾಜ್ಯದ ಪರವಾಗಿ ವಾದ ಮಂಡಿಸಲು ಇಷ್ಟು ಮೊತ್ತವನ್ನು ವಕೀಲರ ಶುಲ್ಕವಾಗಿ ಪಾವತಿ ಮಾಡಲಾಗಿದೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಬೆಳಗಾವಿಯಲ್ಲಿ ಹೇಳಿದರು.

Ad Widget . Ad Widget .

ಕಾವೇರಿ ಜಲವಿವಾದಕ್ಕಾಗಿ ಅತ್ಯಧಿಕ 54.13 ಕೋಟಿ ವ್ಯಯಿಸಲಾಗಿದ್ದು, ಕೃಷ್ಣಾ ಜಲವಿವಾದ ನ್ಯಾಯಮಂಡಳಿಯಲ್ಲಿ ರಾಜ್ಯದ ಪರವಾಗಿ ವಾದಿಸಲು 43.24 ಕೋಟಿ ವಕೀಲರ ಶುಲ್ಕ ನೀಡಲಾಗಿದೆ. ಮಹದಾಯಿ ನ್ಯಾಯಮಂಡಳಿಯಲ್ಲಿ ವಾದ ಮಂಡಿಸಲು 25.38 ಕೋಟಿ ಹಣವನ್ನು ವ್ಯಯ ಮಾಡಲಾಗಿದೆ. ಈ ಮೂರು ನ್ಯಾಯಮಂಡಳಿಗಳಲ್ಲಿ 41 ವಕೀಲರು ಕರ್ನಾಟಕದ ಪರವಾಗಿ ವಾದ ಮಂಡಿಸಿದ್ದು, ಇವರಲ್ಲಿ ಹೆಚ್ಚಿನವರು ಹೊರ ರಾಜ್ಯದವರು ಎಂದು ಮಾಹಿತಿ ಹಕ್ಕಿನಲ್ಲಿ ತಿಳಿದುಬಂದಿದೆ.

Ad Widget . Ad Widget .

Leave a Comment

Your email address will not be published. Required fields are marked *