Ad Widget .

ದಸರಾ ಗಜಪಡೆಗೆ ಮತ್ತೆ 5 ಆನೆ ಎಂಟ್ರಿ

ಸಮಗ್ರ ನ್ಯೂಸ್: ಮೈಸೂರು ದಸರಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಅರಮನೆ ಆವರಣದಲ್ಲಿ ದಸರಾ ಸಂಭ್ರಮ ಕಳೆಗಟ್ಟಿದೆ. ಈಗಾಗಲೇ ದಸರಾ ಆನೆಗಳ ಒಂದು ತಂಡ ಅರಮನೆಯಲ್ಲಿದ್ದು, ಇನ್ನೊಂದು ತಂಡ ಜೊತೆಯಾಗಿದೆ. ದಸರಾ ಉತ್ಸವದವ ತಯಾರಿಯಲ್ಲಿ ಮತ್ತೆ 5 ಆನೆಗಳು ದಸರಾ ಗಜಪಡೆಯನ್ನ ಸೇರಿಕೊಂಡಿದೆ. ಈಗ 14 ಆನೆಗಳು ಅರಮನೆ ಆವರಣ ತಲುಪಿದ್ದು ಮುಂದಿನ ದಿನಗಳಲ್ಲಿ ಭರ್ಜರಿ ತಾಲೀಮಿನ ಜೊತೆಗೆ ದಸರಾ ಉತ್ಸವಕ್ಕೆ ಆನೆಗಳು ಸಿದ್ಧವಾಗಲಿದೆ

Ad Widget . Ad Widget .

ಮೈಸೂರು ದಸರಾದ ಅಂಬಾರಿ ಹೊಣೆ ಹೊತ್ತ ಕ್ಯಾಪ್ಟನ್ ಅಭಿಮನ್ಯು ಆಂಡ್ ಟೀಂ ಜೊತೆಗೆ ಈಗ ಈ 5 ಆನೆಗಳು ಸೇರಿಕೊಂಡಿವೆ. ಸೆಪ್ಟೆಂಬರ್ 1 ರಂದು ಹುಣಸೂರಿನ ವೀರಹೊಸನಹಳ್ಳಿಯಿಂದ 9 ಆನೆಗಳ ಮೊದಲನೇ ತಂಡ ಅರಮನೆ ಅವರಣಕ್ಕೆ ಅಗಮಿಸಿತ್ತು. ಇದೀಗ 2 ನೇ ಹಂತದಲ್ಲಿ ಮತ್ತೆ 5 ಆನೆಗಳು ಅಭಿಮನ್ಯು ಟೀಂ ಸೇರಿಕೊಂಡಿದೆ.

Ad Widget . Ad Widget .

ಈ 5 ಆನೆಗಳನ್ನು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ರಾಮಪುರ ಆನೆ ಶಿಬಿರದಿಂದ 21 ವರ್ಷದ ರೋಹಿತ, 46 ವರ್ಷದ ಹಿರಣ್ಯ, ದುಬಾರೆ ಆನೆ ಶಿಬಿರದ 50 ವರ್ಷದ ಪ್ರಶಾಂತ, 41 ವರ್ಷದ ಸುಗ್ರೀವ ಹಾಗೂ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ದೊಡ್ಡ ಹರವೆ ಆನೆ ಶಿಬಿರದ 52 ವರ್ಷದ ಲಕ್ಷ್ಮಿ ಎರಡನೇ ಹಂತದಲ್ಲಿ ಗಜಪಡೆಯನ್ನ ಸೇರಿಕೊಂಡಿವೆ.

ವಿವಿಧ ಶಿಬಿರಗಳಿಂದ ಲಾರಿಗಳ ಮೂಲಕ ಈ ಐದು ಆನೆಗಳನ್ನ ತರಲಾಯಿತು. ಬಳಿಕ ಅವುಗಳಿಗೆ ಸ್ನಾನ ಮಾಡಿಸಿದ ನಂತರ ಜಯ ಮಾರ್ತಾಂಡ ದ್ವಾರದ ಬಳಿ ಪೂಜೆ ಸಲ್ಲಿಸಿ ಬರಮಾಡಿಕೊಳ್ಳಲಾಯಿತು. ಕಬ್ಬು, ಬೆಲ್ಲ, ಕಡಲೆ ಪುರಿಗಳನ್ನು ತಿನ್ನಿಸಲಾಯಿತು. ಈ ರೀತಿಯಲ್ಲಿ ಸಾಂಪ್ರದಾಯಿಕವಾಗಿ ಬರಮಾಡಿಕೊಂಡರು.

Leave a Comment

Your email address will not be published. Required fields are marked *