Ad Widget .

ಬೆಂಗಳೂರು: ಪೊಲೀಸರಿಗೆ ತಂದ ಊಟದಲ್ಲಿ ಇಲಿ ಪತ್ತೆ

ಸಮಗ್ರ ನ್ಯೂಸ್: ಬೆಂಗಳೂರಿನಲ್ಲಿ ಕಾವೇರಿ ನೀರಿಗಾಗಿ ಪ್ರತಿಭಟನೆ ಜೋರಾಗಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ಆದರೆ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರಿಗೆ ನೀಡಲಾದ ಊಟದ ಪ್ಯಾಕೇಟ್‌ನಲ್ಲಿ ಇಲಿ ಪತ್ತೆಯಾದ ಘಟನೆ ಸೆ.26 ರಂದು ನಡೆದಿದೆ.

Ad Widget . Ad Widget .

ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವುದನ್ನು ವಿರೋಧಿಸಿ ರೈತ ಸಂಘಟನೆಗಳು ಸೇರಿದಂತೆ ಕೆಲ ಸಂಘಸಂಸ್ಥೆಗಳು ಸೇರಿ ಇಂದು ಬೆಂಗಳೂರು ಬಂದ್‌ ಮಾಡಿ ಪ್ರತಿಭಟನೆ ನಡೆಸುತ್ತೇವೆ ಎಂದಿದ್ದರು. ಇದರಿಂದ ರಾಜ್ಯ ರಾಜಧಾನಿಯಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಇನ್ನು ಪ್ರತಿಭಟನೆಯ ಭದ್ರತೆಗೆ ನಿಯೋಜನೆ ಮಾಡಿದ ಪೊಲೀಸರಿಗೆ ಹೋಟೆಲ್‌ನಿಂದ ಉಪಹಾರ ಸರಬರಾಜು ಮಾಡಲಾಗಿದ್ದು, ಯಶವಂತಪುರ ಟ್ರಾಫಿಕ್ ಪೊಲೀಸರಿಗೆ ತಂದಿದ್ದ ಉಪಾಹಾರದಲ್ಲಿ (ರೈಸ್‌ ಬಾತ್) ನಲ್ಲಿ ಸತ್ತ ಇಲಿ ಪತ್ತೆಯಾಗಿದೆ. ಪೊಲೀಸ್ ಇಲಾಖೆಯಿಂದ ಸರಬರಾಜು ಮಾಡಿದ ಊಟದ ಪ್ಯಾಕೆಟ್ ತೆರೆದಾಗ ಅದರಲ್ಲಿ ಇಲಿ ಕಂಡುಬಂದಿದೆ. ಇದನ್ನು ಕಂಡು ಪೊಲೀಸರು ಶಾಕ್ ಆಗಿದ್ದಾರೆ.

Ad Widget . Ad Widget .

ಪೊಲೀಸ್ ಕಮಿಷನ‌ರ್ ವಿರುದ್ಧ ಆಕ್ರೋಶ: ಇನ್ನು ಖಾಸಗಿ ಹೋಟೆಲ್ ನಿಂದ ಕಳಪೆ ಮಟ್ಟದ ಊಟ ಪೂರೈಕೆ ಮಾಡಲಾಗಿದೆ ఎంబ ಆರೋಪ ಕೇಳಿಬಂದಿದೆ. ಪೊಲೀಸ್‌ ಆಯುಕ್ತರೇ ನೋಡಿ ನಿಮ್ಮ ಸಿಬ್ಬಂದಿ ತಿನ್ನುವ ಊಟವನ್ನು ಈ ರೀತಿ ನೀಡಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಹೆಸರೇಳಲಿಚ್ಛಿಸದ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ. ಜೊತೆಗೆ, ನೀವು ಇದೇ ಊಟ ಕೊಟ್ರೆ ತಿಂತೀರಾ ಎಂದು ಆಕ್ರೋಶವನ್ನೂ ಹೊರ ಹಾಕಿದ್ದಾರೆ. ಇಂತಹ ಊಟ ತಿಂದು ಹೆಚ್ಚುಕಡಿಮೆಯಾದ್ರೆ ನಮ್ಮ ಕುಟುಂಬಕ್ಕೆ ಹಾಗೂ ಆರೋಗ್ಯಕ್ಕೆ ಯಾರು ಹೊಣೆ ಎಂದು ಪೊಲೀಸರು ಕಮಿಷನರ್ ಮೇಲೆ ಕಿಡಿಕಾರಿದ್ದಾರೆ.

Leave a Comment

Your email address will not be published. Required fields are marked *