Ad Widget .

ನೆರೆಯ ಗ್ರಾಮದ ಯುವಕನ ಚಿಕಿತ್ಸೆಗಾಗಿ ಮಿಡಿದ ಯುವಕರ ತಂಡಕ್ಕೆ ಕೈ ಜೋಡಿಸಿದ ಮಡಪ್ಪಾಡಿ ಗ್ರಾಮಸ್ಥರು

ಸಮಗ್ರ ನ್ಯೂಸ್:‌ ಕೊಲ್ಲಮೊಗ್ರ ಗ್ರಾಮದ ಸಚಿತ್ ಶಿವಾಲ‌ ಎಂಬ ಯುವಕ‌ ಕಳೆದ ಎರಡು ವರುಷಗಳಿಂದ IGA Nephropathy ಎಂಬ Chronic Kidney Disease ಎಂಬ ಖಾಯಿಲೆಯಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

Ad Widget . Ad Widget .

ಕೆಲ ದಿನಗಳ ಹಿಂದೆ ಖಾಯಿಲೆ ಉಲ್ಬಣಗೊಂಡು ಸುಮಾರು 80% ಕಿಡ್ನಿ ನಿಷ್ಕ್ರಿಯಗೊಂಡಿತ್ತು, ತನ್ನ‌ ತಂದೆಯ ಕಿಡ್ನಿ ಕಸಿ ಮಾಡಲು ಸುಮಾರು 15 ಲಕ್ಷಗಳಷ್ಟು ಹಣದ ಅವಶ್ಯಕತೆ ಇರುವುದನ್ನು ಗಮನಿಸಿದ ಚೈತನ್ಯ ಗೆಳೆಯರ ಬಳಗ ತಂಡದ ಸದಸ್ಯರು ಬದುಕು ನಾಲ್ಕು ದಿನ ಅದರ ಮದ್ಯದಲ್ಲಿ ಇನ್ನೊಬ್ಬರ ಜೀವನದಲ್ಲೂ ಬೆಳಕಾಗೋಣ” ಎನ್ನುವ ಉದ್ದೇಶದಿಂದ ತಮ್ಮ ಮಡಪ್ಪಾಡಿ ಗ್ರಾಮದಲ್ಲಿ ಪ್ರತಿ ಮನೆ ಮನೆಗೆ ತೆರಳಿ‌ ಎರಡು ದಿನಗಳಲ್ಲಿ ಸುಮಾರು 65307 ರೂಪಾಯಿಗಳನ್ನು ಸಂಗ್ರಹಿಸಿದೆ. ಈ ಸಮಾಜಮುಖಿ ಕಾರ್ಯಕ್ಕೆ ಊರವರಿಂದ ಮೆಚ್ಚುಗೆಗೂ ಪಾತ್ರರಾಗಿದ್ದಾರೆ. ಊರಿನ ಜನರ ಉತ್ತಮ ಸ್ಪಂದನೆ ಹಾಗೂ ಸಹಕಾರದಿಂದ ಇಷ್ಟು ಮೊತ್ತ ಸಂಗ್ರಹವಾಗಿದೆ. ನಮ್ಮ‌ ಈ ಕಾರ್ಯಕ್ಕೆ ಕೈಜೋಡಿಸಿದ ಗ್ರಾಮದ ಪ್ರತಿಯೊಬ್ಬರಿಗೂ ತುಂಬು ಹೃದಯದ ಧನ್ಯವಾದಗಳು ಎಂದು ಚೈತನ್ಯ ಗೆಳೆಯರ ಬಳಗದ ಯುವಕರು ತಿಳಿಸಿದ್ದಾರೆ.

Ad Widget . Ad Widget .

Leave a Comment

Your email address will not be published. Required fields are marked *