ಸಮಗ್ರ ನ್ಯೂಸ್: ಮನೆಯಲ್ಲೇ ಸಿಂಪಲ್ ಆಗಿ ಮಶ್ರೂಮ್ ಪ್ರೈಡ್ ರೈಸ್ ಹೇಗ್ ಮಾಡೋದು ಯಾವೆಲ್ಲ ಪದಾರ್ಥಗಳು ಬೇಕು ನೋಡೋಣ
ಬೇಕಾಗುವ ಪದಾರ್ಥಗಳು:- ಅನ್ನ – 1 ಬಟ್ಟಲು, ಅಣಬೆ – 150 ಗ್ರಾಂ (ತೊಳೆದು ಹೆಚ್ಚಿಟ್ಟುಕೊಂಡದ್ದು), ಬೆಳ್ಳುಳ್ಳಿ – ಸ್ವಲ್ಪ (ಸಣ್ಣಗೆ ಹೆಚ್ಚಿದ್ದು), ಈರುಳ್ಳಿ – ಅರ್ಧ ಬಟ್ಟಲು (ಸಣ್ಣಗೆ ಹೆಚ್ಚಿದ್ದು), ಕೊತ್ತಂಬರಿ ಸೊಪ್ಪು – ಸ್ವಲ್ಪ, ಆಲಿವ್ ಆಯಿಲ್- 2 ಚಮಚ, ಕಾಳುಮೆಣಸಿನ ಪುಡಿ – ಕಾಲು ಚಮಚ, ಉಪ್ಪು – ಅಗತ್ಯಕ್ಕೆ ತಕ್ಕಷ್ಟು.
ಮಾಡುವ ವಿಧಾನ:- ಮೊದಲಿಗೆ ಒಂದು ಬಾಣಾಲೆಯಲ್ಲಿ ಆಲಿವ್ ಆಯಿಲ್ ಹಾಕಿಕೊಂಡು ಕಾದ ನಂತರ ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ಹಾಕಿಕೊಂಡು 2 ನಿಮಿಷಗಳ ಕಾಲ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಬಳಿಕ ಇದಕ್ಕೆ ಹೆಚ್ಚಿದ ಅಣಬೆಗಳನ್ನು ಹಾಕಿಕೊಂಡು ಕಂದು ಬಣ್ಣ ಬರುವವರೆಗೆ ಚನ್ನಾಗಿ ಹುರಿದುಕೊಳ್ಳಿ. ಇದರ ನೀರಿನಾಂಶ ಸಂಪೂರ್ಣವಾಗಿ ಬಿಡುವುದರಿಂದ ಫ್ರೈಡ್‌ರೈಸ್ ಇನ್ನಷ್ಟು ರುಚಿಯನ್ನು ನೀಡುತ್ತದೆ. ನಂತರ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಿಕೊಂಡು ಸ್ವಲ್ಪ ಫ್ರೈ ಮಾಡಿ. ನಂತರ ಅದಕ್ಕೆ ಕಾಳುಮೆಣಸಿನ ಪುಡಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ. ಬಳಿಕ ಈ ಮಿಶ್ರಣಕ್ಕೆ ಅನ್ನವನ್ನು ಹಾಕಿ 5ರಿಂದ 6 ನಿಮಿಷಗಳ ಕಾಲ ಚೆನ್ನಾಗಿ ಮಿಶ್ರಣ ಮಾಡಿ. ಈಗ ಮಶ್ರೂಮ್ ಫ್ರೈಡ್‌ರೈಸ್ ಸವಿಯಲು ಸಿದ್ಧ.