ಸಮಗ್ರ ನ್ಯೂಸ್: ರಾಜ್ಯ ಸಾರಿಗೆ ನೌಕರರಿಗೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಸಿಹಿಸುದ್ದಿ ನೀಡಿದ್ದು, ಅಪಘಾತ ರಹಿತ ಚಾಲನೆಗಾಗಿ ನೀಡುವ ಮಾಸಿಕ ಭತ್ಯೆಯನ್ನು 10 ಪಟ್ಟು ಹೆಚ್ಚಳ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಸಚಿವರು, ಚಿನ್ನದ ಪದಕ ವಿಜೇತರಿಗೆ ಮಾಸಿಕ ಭತ್ಯೆ ಪರಿಷ್ಕರಣೆ ಮಾಡಲಾಗಿದ್ದು ಐದು ವರ್ಷಗಳ ಅಪಘಾತ ರಹಿತ ಚಾಲನೆಗಾಗಿ ಬೆಳ್ಳಿ ಪದಕ ವಿಜೇತರಿಗೆ ನೀಡುವ ಮಾಸಿಕ ಭತ್ಯೆ ರೂ. 50ನ್ನು ಹತ್ತು ಪಟ್ಟು ಹೆಚ್ಚಿಸಿ ರೂ.500 ಮಾಸಿಕ ಭತ್ಯೆ ಪಾವತಿಗೆ ಅವಕಾಶ ಮಾಡಲಾಗುವುದು. ಹಾಗೆಯೇ 15 ವರ್ಷಗಳ ಅಪಘಾತ ರಹಿತ ಚಾಲನೆಗಾಗಿ ಮುಖ್ಯ ಮಂತ್ರಿಗಳ ಬಂಗಾರದ ಪದಕ ವಿಜೇತರಿಗೆ ಪ್ರಸ್ತುತ ಇರುವ ರೂ. 100 ಮಾಸಿಕ ಭತ್ಯೆಯನ್ನು ಹತ್ತು ಪಟ್ಟು ಹೆಚ್ಚಿಸಿ ರೂ. 1000ಕ್ಕೆ ಹೆಚ್ಚಿಸಲಾಗುವುದು. ಪ್ರಸ್ತುತ ಬೆಳ್ಳಿ ಪದಕ ಮತ್ತು ಚಿನ್ನದ ಪದಕ ವಿಜೇತರಾಗಿ ಸೇವೆ ಸಲ್ಲಿಸುತ್ತಿರುವ ಎಲ್ಲ ಚಾಲಕ ಹಾಗೂ ಚಾಲಕ ಜೊತೆಗೆ ನಿರ್ವಾಹಕರಿಗೆ ಪರಿಷೃತ ಪ್ರಶಸ್ತಿ ಭತ್ಯೆ ಅನ್ವಯಿಸಿ ಪಾವತಿಗೆ ಅವಕಾಶ ಮಾಡಲಾಗುವುದು ಎಂದರು.