ಅದಿತಿ ಪ್ರಭುದೇವ ನಟನೆಯ ‘ಅಲೆಕ್ಸಾ’ ಚಿತ್ರ ನವೆಂಬರ್ 3 ಕ್ಕೆ ರಿಲೀಸ್

ಸಮಗ್ರ ನ್ಯೂಸ್:‌ ಪವನ್ ತೇಜ್ ಹಾಗೂ ಅದಿತಿ ಪ್ರಭುದೇವ ನಟಿಸಿರುವ ‘ಅಲೆಕ್ಸಾ’ ಚಿತ್ರ ನವೆಂಬರ್ 3 ರಂದು ಬಿಡುಗಡೆಯಾಗಲಿದೆ.

Ad Widget ... ..

ಜೀವ ನಿರ್ದೇಶಿಸಿರುವ ಈ ಚಿತ್ರದ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ಟೀಸರ್ ನೋಡಿ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೀಗ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಇದೊಂದು ಮರ್ಡರ್ ಮಿಸ್ಟರಿ ಚಿತ್ರ. ತನಿಖಾಧಿಕಾರಿ ಪಾತ್ರದಲ್ಲಿ ಅದಿತಿ ಪ್ರಭುದೇವ ನಟಿಸಿದ್ದಾರೆ. ಪವನ್ ತೇಜ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಫಾರ್ಮಾಸುಟಿಕಲ್‌ ಮಾಫಿಯಾ ಬಗ್ಗೆ ಕಥಾಹಂದರವಿದೆ. ಅಷ್ಟೆ ಅಲ್ಲ ಈ ಚಿತ್ರದ ಎರಡನೇ ಭಾಗವನ್ನು ತೆರೆಗೆ ತರುವ ಆಲೋಚನೆ ಇದೆ ಎಂದು ಜೀವ ಅವರು ಹೇಳಿದ್ದಾರೆ.
ಅದಿತಿ. ವಿ.ಚಂದ್ರು ಈ ಸಿನಿಮಾ ನಿರ್ಮಾಣ ಮಾಡಿದ್ದು, ಚಿತ್ರದಲ್ಲಿ ಪವನ್ ತೇಜ್, ಅದಿತಿ ಪ್ರಭುದೇವ, ನಾಗಾರ್ಜುನ್, ಮೇಘಶ್ರೀ, ಮಿಮಿಕ್ರಿ ಗೋಪಿ, ಚಂದ್ರಕಲಾ ಮೋಹನ್ ಮುಂತಾದವರು ನಟಿಸಿದ್ದಾರೆ. ರವಿವರ್ಮ ಹಾಗೂ ಮಾಸ್ ಮಾದ ಅವರು ಸಾಹಸ ಸಂಯೋಜನೆಯಲ್ಲಿ ಮಾಡಿದ್ದು, ಸತೀಶ್ ಬಿ ಛಾಯಾಗ್ರಹಣ ಹಾಗೂ ಉಮೇಶ್ ಆರ್. ಬಿ ಸಂಕಲನ ಅಲೆಕ್ಸಾ ಚಿತ್ರಕ್ಕಿದೆ.

Ad Widget

Leave a Comment

Your email address will not be published. Required fields are marked *