Ad Widget .

ಸುಧಾ ಮೂರ್ತಿ ಹೆಸರಲ್ಲಿ ವಂಚನೆ| ಇಬ್ಬರ ಬಂಧನ

ಸಮಗ್ರ ನ್ಯೂಸ್: ಇನ್ಫೋಸಿಸ್ (Infosys) ಸಂಸ್ಥಾಪಕ ಎನ್.ಆರ್ ನಾರಾಯಣ್ ಮೂರ್ತಿ ಅವರ ಪತ್ನಿ ಡಾ.ಸುಧಾ ಮೂರ್ತಿ (Sudha Murthy) ಅವರ ಹೆಸರು ಬಳಸಿ ವಂಚನೆ ಮಾಡಿರುವ ಬಗ್ಗೆ ಬೆಂಗಳೂರಿನ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ad Widget . Ad Widget .

ಸುಧಾ ಮೂರ್ತಿಯವರ ಪರ್ಸನಲ್ ಅಸಿಸ್ಟೆಂಟ್ ಮಮತ ಸಂಜಯ್ ಎಂಬುವರಿಂದ ದೂರು ದಾಖಲಾಗಿದೆ. ಶೃತಿ ಹಾಗೂ ಲಾವಣ್ಯ ಎಂಬುವರ ವಿರುದ್ದ ವಂಚನೆ ಆರೋಪ ಕೇಳಿ ಬಂದಿದೆ.

Ad Widget . Ad Widget .

KKNC (Kannada koota of northen California) ಯಿಂದ 50ನೇ ವರ್ಷದ ಕಾರ್ಯಕ್ರಮಕ್ಕೆ ಸುಧಾಮೂರ್ತಿ ಅವರಿಗೆ ಆಹ್ವಾನ ನೀಡಲಾಗಿತ್ತು, ಆದರೆ ಇ-ಮೇಲ್ ಮೂಲಕ ಕಾರ್ಯಕ್ರಮಕ್ಕೆ ಬರಲು ಆಗುವುದಿಲ್ಲವೆಂದು ಸುಧಾ ಮೂರ್ತಿ ಅವರು ಸಂದೇಶ‌ ಕಳಿಸಿದ್ದರು. ಆದರೆ ಈ ಮಧ್ಯೆ ಸುಧಾ ಮೂರ್ತಿಯವರ ಫೋಟೋಗಳನ್ನು ಬಳಸಿ ಜಾಹೀರಾತು ನೀಡಿರುವುದು ಕಂಡು ಕಂಪನಿಯಲ್ಲಿ ಪ್ರಶ್ನಿಸಿದಾಗ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಮೂರ್ತಿ ಟ್ರಸ್ಟ್ ನ ಕಚೇರಿ ಎಂದು ಹೆಸರು ಸೃಷ್ಠಿಸಿ ಸುಧಾ ಮೂರ್ತಿಯವರ ಅಸಿಸ್ಟಂಟ್ ಎಂದು ವಂಚಿಸಿರುವ ಆರೋಪ ಕೇಳಿ ಬಂದಿದೆ.

ಅಮೆರಿಕಾದಲ್ಲಿ meet and greet with ಡಾ ಸುಧಾಮೂರ್ತಿ ಹೆಸರಿನಲ್ಲಿ ಕಾರ್ಯಕ್ರಮ ಆಯೋಜಿಸಿರುವುದಾಗಿ ಟಿಕೆಟ್ ಮಾರಾಟ ಮಾಡಲಾಗಿದೆ. ಲಾವಣ್ಯ ಎಂಬುವರು ಕಾರ್ಯಕ್ರಮಕ್ಕೆ ಸುಧಾ ಮೂರ್ತಿ ಅವರು ಬರುದಾಗಿ ಹೇಳಿ ವಂಚಿಸಿರುವುದು ಬೆಳಕಿಗೆ ಬಂದಿದೆ.

Leave a Comment

Your email address will not be published. Required fields are marked *