ಸಮಗ್ರ ನ್ಯೂಸ್: ಭಾರತ ಸರಕಾರದ ಮಾನ್ಯತೆ ಪಡೆದ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಮತ್ತು ಖಾಸಗಿ ಉದ್ಯೋಗಗಳ ವೃತ್ತಿಪರ ಕೌಶಲ್ಯ ತರಬೇತಿ ಸಂಸ್ಥೆಯಾಗಿರುವ, ಪುತ್ತೂರಿನಲ್ಲಿ ಹೆಸರುವಾಸಿಯಾಗಿರುವ “ವಿದ್ಯಾಮಾತಾ ಅಕಾಡೆಮಿ”ಯ ಶಾಖಾ ಕಛೇರಿ ಇದೇ ಬರುವ ದಿನಾಂಕ 28 ಸೆಪ್ಟೆಂಬರ್ 2023 ರಿಂದ ಸುಳ್ಯದಲ್ಲಿ ಶುಭಾರಂಭಗೊಳ್ಳಲಿದೆ ಎಂದು ಸೆ.23 ರಂದು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸೆ.28 ಗುರುವಾರದಂದು ಬೆಳಿಗ್ಗೆ 10:00ಕ್ಕೆ ಸರಿಯಾಗಿ ಶುಭರಂಭಗೊಳ್ಳಲಿದ್ದು, ವಿದ್ಯಾಮಾತಾ ಅಕಾಡೆಮಿಯ ಮಾತೃ ಸಂಸ್ಥೆಯಾಗಿರುವ ವಿದ್ಯಾಮಾತಾ ಫೌಂಡೇಶನ್ ಈಗಾಗಲೇ ಮೂರು ರಾಜ್ಯಮಟ್ಟದ ಉದ್ಯೋಗ ಮೇಳಗಳು, ಸುಮಾರು 500ಕ್ಕೂ ಹೆಚ್ಚು ನೇರ ಉದ್ಯೋಗ ಸಂದರ್ಶನಗಳ ಮೂಲಕ 5000ಕ್ಕೂ ಮಿಕ್ಕಿದ ವಿದ್ಯಾರ್ಥಿಗಳಿಗೆ ವಿವಿಧ ಕಂಪನಿಗಳಲ್ಲಿ ಉದ್ಯೋಗ ಕೊಡಿಸಿರುವ ಹೆಮ್ಮೆ ಇದೆ. ಹಾಗೆಯೇ ಕರಾವಳಿ ಜಿಲ್ಲೆಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮತ್ತು ತರಬೇತಿ ನೀಡಿ 90ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸರಕಾರಿ ಹಾಗೂ ಸರಕಾರಿ ಸ್ವಾಮ್ಯದ ಇಲಾಖೆಗಳಲ್ಲಿ ಆಯ್ಕೆಯಾಗುವಂತೆ ಮಾಡಿರುವ ಹೆಮ್ಮೆ ವಿದ್ಯಾಮಾತಾ ಅಕಾಡೆಮಿಯದ್ದಾಗಿದೆ.
ಸಂಸ್ಥೆಯ ವೈಶಿಷ್ಟ್ಯತೆಗಳು :
- ಇಪ್ಪತ್ತಕ್ಕೂ ಹೆಚ್ಚಿನ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಆರು ತಿಂಗಳ ಅವಧಿಯಲ್ಲಿ ಏಕಕಾಲದಲ್ಲಿ ತರಬೇತಿ ಪಡೆಯುವ ಅವಕಾಶ
- ಸದ್ಯ ಓದುತ್ತಿರುವ ವಿದ್ಯಾರ್ಥಿಗಳಿಗೆ / ಸದ್ಯ ಉದ್ಯೋಗದಲ್ಲಿರುವವರಿಗೆ ಅನುಕೂಲವಾಗುವಂತೆ ದಿನನಿತ್ಯ ರಾತ್ರಿ 8:00 ರಿಂದ 9:00 ರವರೆಗೆ (ಒಂದು ಗಂಟೆ) ಆನ್ಲೈನ್ ಮುಖಾಂತರ ತರಬೇತಿ ಪಡೆಯುವ ಅವಕಾಶ
- ನೇರ ತರಗತಿಗಳಲ್ಲಿ ಪಾಲ್ಗೊಳ್ಳುವವರಿಗೆ ವಾರದ 5 ದಿನ ಬೆಳಿಗ್ಗೆ 9:30ರಿಂದ ಮಧ್ಯಾಹ್ನ 1:00ರವರೆಗೆ ಆರು ತಿಂಗಳ ತರಬೇತಿ
- ತರಬೇತಿ ಮುಗಿದರೂ ಎರಡು ವರ್ಷಗಳು ನಿರಂತರವಾಗಿ ಅರ್ಜಿ ಸಲ್ಲಿಕೆ, ಪ್ರವೇಶ ಪತ್ರ , ವಿಶೇಷ ತರಗತಿಗಳನ್ನು ಉಚಿತವಾಗಿ ನೀಡುವ ಮುಖಾಂತರ ಸರಕಾರಿ ಹುದ್ದೆಗೆ ಆಯ್ಕೆಯಾಗಲು ಸಂಪೂರ್ಣವಾಗಿ ವಿದ್ಯಾಮಾತಾ ಅಕಾಡೆಮಿಯು ಬೆಂಬಲವಾಗಿ ನಿಲ್ಲುತ್ತದೆ
- ತರಬೇತಿ ಪಡೆಯುವ ಪ್ರತಿ ಅಭ್ಯರ್ಥಿಗೂ ಉಚಿತ ಕಂಪ್ಯೂಟರ್, ಸ್ಪೋಕನ್ ಇಂಗ್ಲೀಷ್, ದೈಹಿಕ ಸದೃಢತೆಯ ಮೈದಾನ ತರಬೇತಿ ನೀಡಲಾಗುವುದು
- ಅಧಿಕಾರಿಗಳು, ನಿವೃತ್ತರು, ದೇಶದ ಬೇರೆ ಬೇರೆ ಭಾಗಗಳ ವಿಶೇಷ ಸಂಪನ್ಮೂಲ ವ್ಯಕ್ತಿಗಳ ಮೂಲಕ ನಿರಂತರ ತರಬೇತಿ ಕಾರ್ಯಾಗಾರಗಳನ್ನು ನಡೆಸಲಾಗುವುದು
- ಪ್ರತಿವಾರ ಅಣಕು ಪರೀಕ್ಷೆಗಳು, ಹಳೆಯ ಪ್ರಶ್ನೆ ಪತ್ರಿಕೆಗಳ ಪುನರ್ ವಿಮರ್ಶೆಯ ಮೂಲಕ ತರಬೇತಿಗೊಳಿಸಲಾಗುತ್ತದೆ
- ದೇಶ – ವಿದೇಶಗಳಲ್ಲಿ ಉತ್ತಮ ಕಂಪನಿಗಳ ಉದ್ಯೋಗಕ್ಕಾಗಿ ಪ್ರಯತ್ನಿಸುವವರಿಗೆ ಡಿಪ್ಲೋಮಾ ಇನ್ ಪ್ರಾಕ್ಟಿಕಲ್ ಅಕೌಂಟಿಂಗ್ ಆಂಡ್ ಟ್ಯಾಕ್ಸೇಶನ್ ಕೋರ್ಸ್ ಗಳನ್ನು ನೀಡಲಾಗುತ್ತದೆ
ಇದೆಲ್ಲಾ ಸೌಲಭ್ಯಗಳನ್ನು ಒಂದೇ ಸೂರಿನಡಿಯಲ್ಲಿ ಪಡೆಯುವ ಅವಕಾಶ . ಸುಳ್ಯ ಕೊಡಗು ಮಡಿಕೇರಿ ಹಾಗೂ ವಿವಿಧ ತಾಲೂಕು ಹಾಗು ಜಿಲ್ಲೆಗಳ ಕರಾವಳಿ ಭಾಗದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸರಕಾರಿ ಹಾಗೂ ಸರಕಾರಿ ಸ್ವಾಮ್ಯದ ವಿವಿಧ ಇಲಾಖೆಗಳಲ್ಲಿ ಉದ್ಯೋಗ ಲಭಿಸುವಂತಾಗಲು ಪ್ರತೀ ವಿದ್ಯಾರ್ಥಿಯನ್ನು ತಯಾರಿ ಮಾಡುವುದು ಹಾಗೂ ಸರಕಾರಿ ಹುದ್ದೆಗೆ ಆಯ್ಕೆಯಾಗದೆ ಇರುವ ವಿದ್ಯಾರ್ಥಿಗಳನ್ನು ಖಾಸಗಿ ವಲಯದಲ್ಲಿ ಉದ್ಯೋಗಕ್ಕೆ ಸಂಬಂಧಿಸಿದಂತೆ ಪ್ರತಿ ವಿದ್ಯಾರ್ಥಿಯನ್ನು ತಯಾರಿ ಮಾಡುವುದು ವಿದ್ಯಾಮಾತಾ ಅಕಾಡೆಮಿಯ ಉದ್ದೇಶವಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ 9620468869 / 9448527606 ನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಆಡಳಿತ ಕಛೇರಿ ಪುತ್ತೂರು : ಹಿಂದೂಸ್ತಾನ್ ಕಾಂಪ್ಲೆಕ್ಸ್, ಒಂದನೇ ಮಹಡಿ, ಎ.ಪಿ.ಯಂ.ಸಿ ರಸ್ತೆ ಪುತ್ತೂರು
ಸುಳ್ಯ ಶಾಖೆ : TAPCMS ಬಿಲ್ಡಿಂಗ್, ಕಾರ್ ಸ್ಟ್ರೀಟ್, ಸುಳ್ಯ, ದ.ಕ 574239..ಫೋನ್- 9620468869.