Ad Widget .

ಸಿಲ್ಕ್ ಸ್ಮಿತಾ ಶವದೊಂದಿಗೆ ಸೆಕ್ಸ್ ನಡೆಸಲಾಗಿತ್ತಾ? ಸ್ಪೋಟಕ ಹೇಳಿಕೆ ನೀಡಿದ ಹಿರಿಯ ನಟ

ಸಮಗ್ರ ನ್ಯೂಸ್: ಒಂದು ಕಾಲದಲ್ಲಿ ಭಾರತೀಯ ಚಿತ್ರರಂಗವನ್ನು ಆಳಿದ್ದ ಜನಪ್ರಿಯ ಮಾದಕ ನಟಿ ಸಿಲ್ಕ್ ಸ್ಮಿತಾ ಸತ್ತಾಗ ಆಕೆಯ ಶವದೊಂದಿಗೆ ಸೆಕ್ಸ್ ಮಾಡಿರಬಹುದು ಎಂದು ತಮಿಳಿನ ಹಿರಿಯ ನಟ ಹಾಗೂ ಸಿನಿ ಪತ್ರಕರ್ತ ಬೈಲ್ವಾನ್ ರಂಗನಾಥ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.

Ad Widget . Ad Widget .

ಸೆಪ್ಟೆಂಬರ್​ 23 ನಟಿ ಸಿಲ್ಕ್​ ಸ್ಮಿತಾ ಅವರ ಪುಣ್ಯತಿಥಿಯಾಗಿದ್ದು, ನಟಿಯ ಪುಣ್ಯತಿಥಿಯ ದಿನದಂದು ಕಾಲಿವುಡ್​ ನಟ ಹಾಗೂ ಪತ್ರಕರ್ತ ಬೈಲ್ವಾನ್ ರಂಗನಾಥನ್ ಅವರು ಕೆಲ ವರ್ಷಗಳ ಹಿಂದೆ ಸಂದರ್ಶನವೊಂದರಲ್ಲಿ ನೀಡಿದ್ದ ಹೇಳಿಕೆ ಈಗ ವ್ಯಾಪಕ ವೈರಲ್ ಆಗುತ್ತಿದೆ. ಈ ಹಳೆಯ ಸಂದರ್ಶನದಲ್ಲಿ ಸಿಲ್ಕ್​ ಸ್ಮಿತಾ ಅವರು ಮೃತಪಟ್ಟ ಬಳಿಕ ಅವರ ಶವದೊಂದಿಗೆ ಅತ್ಯಾಚಾರ ಮಾಡಲಾಗಿತ್ತು ಎನ್ನುವ ಶಾಕಿಂಗ್​ ಸತ್ಯವನ್ನು ಬೈಲ್ವಾನ್​ ರಂಗನಾಥನ್​ ತಿಳಿಸಿದ್ದಾರೆ.

Ad Widget . Ad Widget .

“ಸಾಮಾನ್ಯವಾಗಿ ಶವಾಗಾರದಲ್ಲಿರುವ ನೌಕರರು ಮದ್ಯ ಸೇವಿಸಿ ಕೆಲಸ ಮಾಡುತ್ತಾರೆ. ಹೀಗಾಗಿ ಶವಾಗಾರದಲ್ಲಿ ನಿಲ್ಲಲು ಆಗುವುದಿಲ್ಲ.‌ ಇಂದಿನಂತೆ ಅಂದು ಯಾವ ಶವಾಗಾರಗಳು ಸ್ವಚ್ಛವಾಗಿರಲಿಲ್ಲ. ಆಸ್ಪತ್ರೆಯಲ್ಲಿ ಅದೇ ಹೆಚ್ಚು ದುರ್ವಾಸನೆ ಬೀರುವ ಸ್ಥಳವೂ ಹೌದು. ಇನ್ನು ಅಲ್ಲಿ ಕೆಲಸ ಮಾಡುವವರಿಗೆ ಮೈಮೇಲೆ ಅರಿವೆ ಇರುವುದಿಲ್ಲ.. ಕೆಲಸ ಪ್ರಾರಂಭವಾಗುತ್ತಲೇ ಕುಡಿದ ಅಮಲಿನಲ್ಲಿ ತೇಲಾಡುತ್ತಿರುತ್ತಾರೆ.

ಹೀಗಿರುವಾಗ ಸಿಲ್ಕ್ ಸ್ಮಿತಾಳ ಕಣ್ಮನ ಸೆಳೆಯುವ ಸೌಂದರ್ಯ ಕಂಡು ಕುಡಿದು ಪ್ರಜ್ಞಾಹೀನರಾಗಿರುವ ನೌಕರರು ಹೇಗೆ ತಾನೇ ಸುಮ್ಮನಿರುತ್ತಾರೆ? ಅವರು ತಮ್ಮನ್ನೇ ತಾವು ಮರೆತು ಆಕೆಯ ಶವದೊಂದಿಗೆ ಲೈಂಗಿಕ ಕ್ರಿಯೆ ನಡೆಸಿರಬಹುದು ಅಥವಾ ಆ ಅವಕಾಶಗಳು ಹೆಚ್ಚಿವೆ. ಪತ್ರಕರ್ತನಾಗಿ ಕೆಲಸ ಮಾಡುತ್ತಿರುವಾಗ ಸ್ವತಃ ನಾನೇ ಶವ ಪರೀಕ್ಷೆ ನಡೆದ ಸ್ಥಳಕ್ಕೆ ಹೋಗಿ ನೋಡಿದ್ದೆ. ಅಲ್ಲಿ ನನಗೆ ಐದು ಸೆಕೆಂಡುಗಳಿಗಿಂತ ಹೆಚ್ಚು ಹೊತ್ತು ನಿಂತುಕೊಳ್ಳಲಾಗಲಿಲ್ಲ” ಎಂದು ಹೇಳಿದ್ದಾರೆ.

ಇದೀಗ ಬೈಲ್ವಾನ್​ ರಂಗನಾಥನ್​ ಆಡಿರುವ ಮಾತುಗಳು ಕಾಲಿವುಡ್ ನಲ್ಲಿ ಭಾರೀ ಸಂಚಲನವನ್ನೇ ಸೃಷ್ಟಿಸಿದೆ.

Leave a Comment

Your email address will not be published. Required fields are marked *