ಸಮಗ್ರ ನ್ಯೂಸ್: ಲೋಕಸಭಾ ಚುನಾವಣಾ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕಾಂಗ್ರೆಸ್ , ಬಿಜೆಪಿ ನಡುವೆ ಕದನ ಕುತೂಹಲ ಮೂಡಿಸುತ್ತಿದೆ. ದ.ಕನ್ನಡ ಕ್ಷೇತ್ರಕ್ಕೆ ಬಿಜೆಪಿಯಿಂದ ಮತ್ತೆ ನಳಿನ್ ಕುಮಾರ್ ಗೆ ಟಿಕೆಟ್ ನೀಡುವ ಸಾಧ್ಯತೆ ಇದ್ದು, ಕಾಂಗ್ರೆಸ್ ಅಭ್ಯರ್ಥಿ ಯಾರು ಎಂಬ ಗೊಂದಲ ಇನ್ನು ಬಗೆಹರಿದಿಲ್ಲ.
ಈ ನಡುವೆ ಕಾಂಗ್ರೆಸ್ ನ ಒಂದು ಮೂಲಗಳ ಪ್ರಕಾರ ಸುಳ್ಯ ಮೂಲದ ಶೈಕ್ಷಣಿಕ, ಸಾಮಾಜಿಕ ಹಿನ್ನೆಲೆ ಇರುವ ಪ್ರಬಲವಾಗಿರುವ ಒಕ್ಕಲಿಗ ಯುವ ಅಭ್ಯರ್ಥಿಯನ್ನು ಪಕ್ಷದಿಂದ ಅಭ್ಯರ್ಥಿಯಾಗಲು ಕಾಂಗ್ರೆಸ್ ರಣತಂತ್ರ ರೂಪಿಸಲು ಮಾತುಕತೆ ನಡೆದಿದೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಪಕ್ಷದ ಉನ್ನತ ವಲಯದಲ್ಲಿ ರಣತಂತ್ರ ರೂಪಿಸುವ ಜವಾಬ್ದಾರಿಯ ಭಾಗವಾಗಿ ಚುನಾವಣಾ ತಜ್ಞರೊಂದಿಗೆ ಗಂಭೀರ ಮಾತುಕತೆಗಳು ನಡೆದಿದೆ ಎಂದು ವರದಿಯಾಗಿದೆ. ಯುವ ಅಭ್ಯರ್ಥಿ ಒಬ್ಬರ ಉಮೇದುಗಾರಿಕೆಯ ಬಗ್ಗೆ ರಣತಂತ್ರದ ಮಾತುಕತೆ ಜಾರಿಯಲ್ಲಿದೆ ಎಂದು ತಿಳಿದುಬಂದಿದೆ.
ಈ ನಡುವೆ ಜಿಲ್ಲೆಯ ವೀಕ್ಷಕರಾಗಿ ಸಚಿವ ಮಧು ಬಂಗಾರಪ್ಪ ರವರನ್ನು ನೇಮಕಗೊಳಿಸಲಾಗಿದೆ. ಅವರಿಗೆ ಸೂಕ್ತ ಅಭ್ಯರ್ಥಿ ಯಾರಾಗಬಹುದು ಎಂಬ ಮಾಹಿತಿಯನ್ನು ಕಲೆ ಹಾಕಲು ಕೆಪಿಸಿಸಿ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.
ಪ್ರಮುಖವಾಗಿ ಸುಳ್ಯ ಮೂಲದ ಮಂಗಳೂರಿನಲ್ಲಿ ಒಕ್ಕಲಿಗ ಸಂಘದಲ್ಲಿ ಸಕ್ರಿಯವಾಗಿರುವ ಕಿರಣ್ ಬುಡ್ಲೆಗುತ್ತು ಇವರಿಗೆ ಕಾಂಗ್ರೆಸ್ ಮಣೆ ಹಾಕುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಒಕ್ಕಲಿಗ ಸಮುದಾಯಕ್ಕೆ ಈ ಬಾರಿ ಕಾಂಗ್ರೆಸ್ ಮಣೆ ಹಾಕಲು ನಿರ್ಧರಿಸಿದ್ದು, ಯಾರಿಗೆ ಟಿಕೆಟ್ ಲಭಿಸುತ್ತದೆ ಅನ್ನೋದನ್ನು ಕಾದು ನೋಡಬೇಕಿದೆ.