Ad Widget .

ಇಡ್ಕಿದು: ಗಾಂಜಾ ಸೇವಿಸಿ ಮಹಿಳೆಯರಿಗೆ ಕಿರುಕುಳ| ಯುವಕರನ್ನು ಪೊಲೀಸರಿಗೆ ಹಿಡಿದು ಕೊಟ್ಟ ಗ್ರಾಮಸ್ಥರು

ಸಮಗ್ರ ನ್ಯೂಸ್: ನಿರ್ಜನ ಪ್ರದೇಶದಲ್ಲಿ ಗಾಂಜಾ ಮತ್ತು ಮಾದಕ ವಸ್ತುವನ್ನು ಸೇವಿಸಿ ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದ ಯುವಕರ ತಂಡವನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಇಡ್ಕಿದು ಗ್ರಾಮದ ಮುಂಡ್ರಬೈಲು ಎಂಬಲ್ಲಿ ನಡೆದಿದೆ.

Ad Widget . Ad Widget .

ಆರೋಪಿಗಳನ್ನು ಕಂಬಳಬೆಟ್ಟು ನೂಜಿ ನಿವಾಸಿಗಳಾದ ಸಾಹಿಲ್‌, ಮತ್ತಿಬ್ಬರು ಎನ್ನಲಾಗಿದೆ. ಈ ಯುವಕರು ನಶೆಯಲ್ಲಿ ದಾರಿಯಲ್ಲಿ ಹೋಗುತ್ತಿದ್ದ ಮಹಿಳೆಯರಿಗೆ ಮತ್ತು ಹೆಣ್ಣು ಮಕ್ಕಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಿರುಕುಳ ನೀಡುತ್ತಿದ್ದರು ಎಂಬ ಮಾಹಿತಿ ಗ್ರಾಮಸ್ಥರರಿಗೆ ತಿಳಿಸಿದ್ದರು. ಮಾಹಿತಿ ತಿಳಿದ ಗ್ರಾಮಸ್ಥರು ಕಾದು ಕುಳಿತಿದ್ದರು.

Ad Widget . Ad Widget .

ಅದೇ ಸಮಯಕ್ಕೆ ಬಂದ ಯುವಕರು ಇನ್ನೇನು ತಮ್ಮ ಕೆಲಸ ಮಾಡಬೇಕೆನ್ನುವಷ್ಟರಲ್ಲಿ ಅವರನ್ನು ಹಿಡಿದು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ವಿಟ್ಲ ಪೊಲೀಸರು ಮೂವರು ಯುವಕರನ್ನು ವಶಕ್ಕೆ ಪಡದು ಆರೋಪಿಗಳಿಂದ 1ಬೈಕ್‌ ಹಾಗೂ 1ಸ್ಕೂಟರ್‌ನ್ನು ವಶಕ್ಕೆ ಪಡೆಯಲಾಗಿದೆ.

ಈ ಮೊದಲು 3ಜನರಲ್ಲೊಬ್ಬ ನೆಲ್ಲಿಗುಡ್ಡೆ ಎಂಬಲ್ಲಿ ಯುವತಿಯನ್ನು ಹಿಂಬಾಲಿಸಿಕೊಂಡು ಬಂದ ವಿಚಾರದಲ್ಲಿ ಸ್ಥಳೀಯರಿಂದ ಗೂಸಾ ತಿಂದಿದ್ದ ಎಂಬ ಮಾಹಿತಿ ತಿಳಿದುಬಂದಿದೆ.

ಸಣ್ಣ ವಯಸ್ಸಿನಲ್ಲೇ ಮಾದಕ ವ್ಯಸನಕ್ಕೆ ಒಳಗಾಗಿ ಮಹಿಳೆಯರಿಗೆ ಕಿರುಕುಳ ನೀಡುವ ಇಂತಹ ಸಮಾಜ ದ್ರೋಹಿಗಳನ್ನು ಇನ್ನಾದರೂ ಪೊಲೀಸರು ಜಾಡಿಸಿ ಬುದ್ದಿ ಕಲಿಸಬೇಕೆಂಬುವುದು ಗ್ರಾಮಸ್ಥರ ಆಶಯ.

Leave a Comment

Your email address will not be published. Required fields are marked *