Ad Widget .

ಕೊಟ್ಟಿಗೆಹಾರ:ರಸ್ತೆಯಲ್ಲೇ ಕರುವನ್ನು ಹಾಕಿದ ಬೀಡಾಡಿ ಹಸು

ಸಮಗ್ರ ನ್ಯೂಸ್: ಬಣಕಲ್ ನ ಕೊಟ್ಟಿಗೆಹಾರದಲ್ಲಿ ಹಲವು ಸಮಯದಿಂದ ಬೀಡಾಡಿ ದನಗಳು ರಸ್ತೆಯಲ್ಲಿ ಸಂಚರಿಸಿ ವಾಹನ ಸವಾರರಿಗೆ ತೊಂದರೆ ನೀಡುತ್ತಿವೆ.ರಾತ್ರಿಯಂತೂ ಈ ಬೀಡಾಡಿ ದನಗಳು ರಸ್ತೆಯಲ್ಲಿ ಇದ್ದರೂ ಕಾಣದೇ ಅನೇಕ ಅಪಘಾತಗಳು ಸಂಭವಿಸಿವೆ.

Ad Widget . Ad Widget .

ಆದರೂ ಬೀಡಾಡಿ ದನಗಳ ಸಂಚಾರಕ್ಕೆ ಕಡಿವಾಣ ಬಿದ್ದಿಲ್ಲ. ರಾತ್ರಿ ಹಲವು ದನಗಳು ಬಸ್ ನಿಲ್ದಾಣ, ಅಂಗಡಿ ಮುಂಗಟ್ಟುಗಳ ಮುಂದೆ ಆಶ್ರಯಿಸಿ ಸಗಣಿ ಗಂಜಲ ಹಾಕಿ ಪರಿಸರ ಕಲುಷಿತಗೊಳಿಸುತ್ತವೆ.ರಸ್ತೆಯಲ್ಲಿ ದನಗಳ ಹಿಂಡು ಕಂಡು ಬರುತ್ತಿದೆ.ಈ ಬಗ್ಗೆ ಗ್ರಾಮ ಪಂಚಾಯಿತಿಗಳು ದ್ವನಿವರ್ಧಕ ಮೂಲಕ ದನಗಳ ಮಾಲೀಕರು ದನಗಳ ನಿಗಾವಹಿಸಿ ಎಂದರೂ ಮಾಲೀಕರು ಗಮನ ಹರಿಸುತ್ತಿಲ್ಲ.

Ad Widget . Ad Widget .

ಇದರಿಂದ ಬೀಡಾಡಿ ದನಗಳ ಸಮಸ್ಯೆ ಗ್ರಾಮ ಪಂಚಾಯಿತಿ ತಲೆನೋವಾಗಿ ಹೋಗಿದೆ. ಶನಿವಾರ ಬಣಕಲ್ ಪೇಟೆಯಲ್ಲಿ ಬೀಡಾಡಿ ಹಸುವೊಂದು ತನ್ನ ಕಂದಮ್ಮನಿಗೆ ಜನ್ಮ ನೀಡಿದೆ.ಕರು ಕೂಡ ರಸ್ತೆಯಲ್ಲಿಯೇ ತಾಯಿಯನ್ನು ಹಿಂಬಾಲಿಸುವ ದೃಶ್ಯ ಕಂಡು ಬಂತು.ಕರುವನ್ನು ಸಮಾಜ ಸೇವಕ ಆರೀಫ್ ಹಿಡಿದು ಅದರ ಪೋಟೋ ತೆಗೆದು ಸಾಮಾಜಿಕ ತಾಣದಲ್ಲಿ ವೈರಲ್ ಮಾಡಿ ದನದ ಮಾಲೀಕರು ಹಸು ಮತ್ತು ಕರುವನ್ನು ತೆಗೆದುಕೊಂಡು ಹೋಗಿ ಎಂದು ಸಂದೇಶ ಹಾಕಿರುವುದು ವೈರಲ್ ಆಗಿದೆ.

Leave a Comment

Your email address will not be published. Required fields are marked *