ಬೆಂಗಳೂರು: ಸೆ.25 ಅರಮನೆ ಮೈದಾನದಲ್ಲಿ ವಿಶ್ವ ಕಾಫಿ ಸಮ್ಮೇಳನ

ಸಮಗ್ರ ನ್ಯೂಸ್: ಬೆಂಗಳೂರಿನಲ್ಲಿ ಸೆ. 25 ರಂದು (ಸೋಮವಾರ)ವಿಶ್ವ ಕಾಫಿ ಸಮ್ಮೇಳನ ಅರಮನೆ ಮೈದಾನದಲ್ಲಿ ನಡೆಯಲಿದೆ ಎಂದು ಮೂಡಿಗೆರೆ ತಾಲ್ಲೂಕು ಬೆಳೆಗಾರರ ಸಂಘದ ಅಧ್ಯಕ್ಷ ಬಾಲಕೃಷ್ಣ ಬಾಳೂರು ತಿಳಿಸಿದ್ದಾರೆ.

Ad Widget ... ..

ಪ್ರಥಮ ಬಾರಿಗೆ ವಿಶ್ವ ಕಾಫಿ ಸಮ್ಮೇಳನವು ಭಾರತದಲ್ಲಿ ಸಮಾವೇಶಗೊಳ್ಳುತ್ತಿರುವುದು ಸಂತಸದ ವಿಷಯವಾಗಿದೆ.ಅದರಲ್ಲೂ ಮುಖ್ಯವಾಗಿ ರಾಜ್ಯದಲ್ಲಿ ವಿಶ್ವ ಕಾಫಿ ಸಮ್ಮೇಳನ ನಡೆಯುತ್ತಿದೆ.ಈ ಸಮ್ಮೇಳನದಲ್ಲಿ 80ಕ್ಕೂ ಅಧಿಕ ದೇಶಗಳು ಭಾಗವಹಿಸಲಿವೆ.

Ad Widget

ಸಮ್ಮೇಳನದಲ್ಲಿ ವಿಶ್ವ ಕಾಫಿ ಉದ್ದಿಮೆಯ ಪ್ರಮುಖ ಉದ್ದಿಮೆದಾರರು, ರಪ್ತುದಾರರು ಭಾಗವಹಿಸುತ್ತಿದ್ದು ವಿಶ್ವ ಕಾಫಿಗೆ ಸಂಬಂಧಿಸಿದ ಪ್ರಮುಖ ನಿರ್ಣಯಗಳು, ಮುಂದಿನ ದಿನಗಳಲ್ಲಿ ಕಾಫಿ ಬೆಳೆ ಮತ್ತು ಉದ್ದಿಮೆಯ ಬಗ್ಗೆ ಸಮಗ್ರ ಮುನ್ನೋಟಕ್ಕೆ ಈ ಸಮ್ಮೇಳನ ಸಾಕ್ಷಿಯಾಗಲಿದೆ.ಆದಷ್ಟು ಬೆಳೆಗಾರರು ಈ ಸಮ್ಮೇಳನದಲ್ಲಿ ಹೆಚ್ಚು ಭಾಗವಹಿಸುವ ಮೂಲಕ ಇದರ ಸದುಪಯೋಗ ಪಡೆಯಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಈ ಬಗ್ಗೆ ಹೆಚ್ಚಿನ ಮಾಹಿತಿಗೆ 9448007091 ಸಂಖ್ಯೆಗೆ ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ.

Leave a Comment

Your email address will not be published. Required fields are marked *