Ad Widget .

ಮತ್ತೆ ಕಿರುತೆರೆಗೆ ಅಪ್ಪಳಿಸಲಿದೆ ‘ಬಿಗ್ ಬಾಸ್-10’| ವಾರಪೂರ್ತಿ ಮನರಂಜನೆಗೆ ರೆಡಿಯಾಗಿ…

ಸಮಗ್ರ ನ್ಯೂಸ್: ಕಿರುತೆರೆ ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿರುವ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್-10 ಆರಂಭಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಬಿಗ್ ಬಾಸ್ ಕನ್ನಡ ಸೀಸನ್ 10 ಅಕ್ಟೋಬರ್ 8, 2023 ರಿಂದ ಪ್ರಸಾರವಾಗಲಿದೆ. ಮುಂಬರುವ ಸೀಸನ್ ತನ್ನ 10 ನೇ ವಾರ್ಷಿಕೋತ್ಸವವನ್ನು ಆಚರಿಸಲು ‘ಹ್ಯಾಪಿ ಬಿಗ್ ಬಾಸ್’ ಎಂಬ ಥೀಮ್ ಅನ್ನು ಹೊಂದಿರುತ್ತದೆ.

Ad Widget . Ad Widget .

ಭಾರಿ ಡ್ರಾಮಾ ಮತ್ತು ವಿವಾದಗಳಿಗೆ ಹೆಸರುವಾಸಿಯಾದ ಈ ಕಾರ್ಯಕ್ರಮವು ಕರ್ನಾಟಕದ ಅತ್ಯಂತ ಜನಪ್ರಿಯ ರಿಯಾಲಿಟಿ ಟಿವಿ ಸರಣಿಗಳಲ್ಲಿ ಒಂದಾಗಿದೆ. ಅಕ್ಟೋಬರ್ 8 ರಿಂದ ಬಿಗ್ ಬಾಸ್ ಕನ್ನಡ 10 ಆರಂಭವಾಗಲಿದ್ದು, ಕಾರ್ಯಕ್ರಮದ ಪ್ರೋಮೋ ವನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ.

Ad Widget . Ad Widget .

ಈ ಬಾರಿ ಹೊಸ ಸೀಸನ್ನಲ್ಲಿ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್, ‘ಗೀತಾ’ ಸೀರಿಯಲ್ ಖ್ಯಾತಿಯ ಭವ್ಯಾ ಗೌಡ, ‘ಲಕ್ಷಣ’ ಧಾರಾವಾಹಿ ನಟಿ ಸುಕೃತಾ ನಾಗ್, ಜೊತೆಜೊತೆಯಲಿ ಧಾರವಾಹಿ ಖ್ಯಾತಿಯ ಮೇಘಾ ಶೆಟ್ಟಿ, ಡಾ. ಬ್ರೋ ಅವರ ಹೆಸರುಗಳು ಕೂಡ ಪ್ರಮುಖವಾಗಿ ಕೇಳಿಬಂದಿವೆ.

ನಾಗಿಣಿ 2 ಖ್ಯಾತಿಯ ನಟಿ ನಮ್ರತಾ ಗೌಡ , ಹುಚ್ಚ ಚಿತ್ರದ ನಾಯಕಿ ರೇಖಾ , ವರ್ಷ ಕಾವೇರಿ, ಅಗ್ನಿಸಾಕ್ಷಿ ರಾಜೇಶ್, ಸೋಶಿಯಲ್ ಮೀಡಿಯಾ ಸ್ಟಾರ್ ಭೂಮಿಕಾ ಬಸವರಾಜ್, ಸೇರಿದಂತೆ ಹಲವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡ್ತಿದ್ದಾರೆ ಎನ್ನಲಾಗಿದೆ. ಯಾರೆಲ್ಲಾ ಬಿಗ್ ಬಾಸ್ ಮನೆಗೆ ಕಾಲಿಡ್ತಿದ್ದಾರೆ ಎಂಬುದನ್ನು ಅಧಿಕೃತವಾಗಿ ತಿಳಿಯಬೇಕಾದರೆ ಅಕ್ಟೋಬರ್ 8 ರವರೆಗೂ ನೀವು ಕಾಯಲೇಬೇಕು.

Leave a Comment

Your email address will not be published. Required fields are marked *