ಸಮಗ್ರ ನ್ಯೂಸ್: ಅಂಗನವಾಡಿ ಕಟ್ಟಡ ಕಟ್ಟಲು ಜಾಗ ಹಸ್ತಾಂತರಿಸಲು ಮೀನಾ ಮೇಷ ಎಣಿಸುತ್ತಿರುವ ತಾಲೂಕು ಆಡಳಿತದ ವಿರುದ್ಧ ಬಾಳೂರು ಗ್ರಾಮ ಪಂಚಾಯತ್ ಅಧ್ಯಕ್ಷರು ಸದಸ್ಯರು ಹಾಗೂ ಗ್ರಾಮಸ್ಥರಿಂದ ಬಾಳೂರಿನಲ್ಲಿ ಅನಿರ್ದಿಷ್ಟ ಅವಧಿ ಮುಷ್ಕರ.
ಮೂಡಿಗೆರೆ ತಾಲೂಕು ಬಾಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ದರ್ಬಾರಪೇಟೆಯಲ್ಲಿ ಅಂಗನವಾಡಿ ಕಟ್ಟಡ ಕಟ್ಟಲು ಗ್ರಾಮ ಪಂಚಾಯಿತಿಯಿಂದ ಹಣ ಮಂಜೂರು ಆಗಿದ್ದು ಕಟ್ಟಡ ನಿರ್ಮಾಣಕ್ಕೆ ಜಾಗ ಸಹ ಗುರುತಿಸಲಾಗಿದೆ. ಆ ಜಾಗಕ್ಕೆ ಖಾಸಗಿ ವ್ಯಕ್ತಿ ಒಬ್ಬರು ಬೇಲಿ ನಿರ್ಮಾಣ ಮಾಡಿದ್ದರಿಂದ ಅಂಗನವಾಡಿ ಕಟ್ಟಡ ನಿರ್ಮಾಣ ಸಾಧ್ಯವಾಗುತ್ತಿಲ್ಲವೆಂದು ಆರೋಪಿಸಿ ಬಾಳೂರು ಗ್ರಾಮ ಪಂಚಾಯತ್ ಅಧ್ಯಕ್ಷರು ಸದಸ್ಯರು ಗ್ರಾಮಸ್ಥರು ಸೆ. 22ರಂದು ಅನಿರ್ದಿಷ್ಟ ಅವಧಿ ಮೌನ ಪ್ರತಿಭಟನೆ ಆರಂಭಿಸಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಬಾಳೂರು ಗ್ರಾಮ ಪಂಚಾಯತ್ ಅಧ್ಯಕ್ಷ ಮಂಜುನಾಥ್ ಮೂಡಿಗೆರೆ ತಾಲೂಕು ದಂಡಾಧಿಕಾರಿಗಳು ಅಂಗನವಾಡಿಗೆ ಜಾಗ ಬಿಡಿಸಿ ಕೊಡುವವರೆಗೂ ಅನಿರ್ದಿಷ್ಟ ಅವಧಿ ಮೌನ ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದ್ದಾರೆ.