Ad Widget .

ಚೈತ್ರಾ ಕುಂದಾಪುರಗೆ ಸಿಸಿಬಿ‌ ಡ್ರಿಲ್| ಸತ್ಯ ಒಪ್ಪಿಕೊಂಡ ಡೀಲ್ ರಾಣಿ

ಸಮಗ್ರ ನ್ಯೂಸ್: ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಎಂಎಲ್‌ಎ ಟಿಕೆಟ್ ಕೊಡಿಸುವುದಾಗಿ ಹೇಳಿ ನಂಬಿಸಿ ಸುಮಾರು ಐದು ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪ್ರಮುಖ ಆರೋಪಿ ಆಗಿರುವ ಚೈತ್ರ ಕುಂದಾಪುರ ಸಿಸಿಬಿ ಅಧಿಕಾರಿಗಳ ಮುಂದೆ ಬಾಯಿಬಿಟ್ಟು ಮಾಡಿರೋ ತಪ್ಪನ್ನು ಒಪ್ಪಿಕೊಂಡಿದ್ದಾಳೆ.

Ad Widget . Ad Widget .

ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಅಧಿಕಾರಿಗಳು ವಿಚಾರಣೆ ವೇಳೆ ವ್ಯವಹಾರ ನಡೆಸಿದ್ದಕ್ಕೆ ವಿಡಿಯೋ, ಆಡಿಯೋ, ಮೊಬೈಲ್ ಕರೆಗಳು ಹಾಗೂ ವಂಚನೆ ಮಾಡಿದ್ದಾರೆ ಎನ್ನುವುದಕ್ಕೆ ಚಿನ್ನ, ಹಣ, ಬ್ಯಾಂಕ್, ಠೇವಣಿ, ಜಪ್ತಿ ಮಾಡಿದ್ದ ಕಾರು ಸೇರಿ ದಾಖಲೆಗಳನ್ನು ಮುಂದಿಟ್ಟು ಸಿಸಿಬಿ ಪ್ರಶ್ನೆ ಕೇಳಿದೆ.

Ad Widget . Ad Widget .

ಈ ವೇಳೆ ದಾಖಲೆ ಕಂಡು ಕಕ್ಕಾಬಿಕ್ಕಿ ಆದ ಚೈತ್ರ ಬೇರೆ ದಾರಿ ಕಾಣದೆ ಎಲ್ಲವನ್ನು ಬಾಯಿಬಿಟ್ಟಿದ್ದಾಳೆ. ತಾನು ಹಣ ಮಾಡುವ ದೇಶದಿಂದ ಕೃತ್ಯ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಅದಕ್ಕಾಗಿ ಪರಿಚಿತರೊಬ್ಬರ ಮೂಲಕ ಗೋವಿಂದ ಬಾಬು ಅವರನ್ನು ಮುನ್ನೆಲೆಗೆ ತರುತ್ತೇನೆ ಎಂದು ನಂಬಿಸಿ ಟಿಕೆಟ್ ನಮಗೆ ಬರುವಂತಹ ಸನ್ನಿವೇಶ ಸೃಷ್ಟಿಸುವುದಾಗಿ ಹೇಳಿದ್ದಾಳೆ. ನಂತರ ಟಿಕೆಟ್ ಸಿಕ್ಕರೆ ತಾನು ಸೇಫ್ ಅಂತ ಪ್ಲಾನ್ ಮಾಡಿದ್ದಳು ಎಂದು ಹೇಳಿದ್ದಾಳೆ.

ಒಂದು ವೇಳೆ ಪ್ಲಾನ್ ಮಿಸ್ಸಾಗಿ ಟಿಕೆಟ್ ಮಿಸ್ ಆದ್ರೂ ಕೂಡ ಏನು ಮಾಡಬೇಕು ಅನ್ನೋದನ್ನ ಕೂಡ ಚೈತ್ರ ಮತ್ತು ಒಂದು ವೇಳೆ ಟಿಕೆಟ್ ಮಿಸ್ ಆಗಿದ್ದರೆ.ಚೈತ್ರಾ ಮತ್ತು ಗ್ಯಾಂಗ್ ಎರಡನೇ ಪ್ಲಾನ್ ಮಾಡಿದ್ದರು. ನಾವು ಹಣ ಇಟ್ಟುಕೊಂಡಿಲ್ಲ ವಿಶ್ವನಾಥ ಜಿಗೆ ಕೊಟ್ಟಿದ್ದಾಗಿ ಗೋವಿಂದ ಬಾಬುಗೆ ಹೇಳಿದ್ದಾರೆ.ನಾವು ನೆಪ ಮಾತ್ರಕ್ಕೆ ಸಹಾಯ ಮಾಡಿದ್ದೇವೆ ಹಣ ತೆಗೆದುಕೊಂಡು ಹೋಗಿ ನೀಡಿದ್ದೇವೆ ಅಷ್ಟೇ ಎಂದು ನಂಬಿಸುವುದು ಎರಡನೇ ಪ್ಲಾನ್ ಆಗಿತ್ತು.

ಒಂದು ವೇಳೆ ನಂಬದಿದ್ದರೆ ವಿಶ್ವನಾಥ್ ಜಿ ಮೃತಪಟ್ಟಿದ್ದಾರೆ. ನಮಗೆ ಗೊತ್ತೇ ಇಲ್ಲ ಎಂದು ಗೋವಿಂದ ಬಾಬು ಬಳಿ ಹೇಳುವುದಾಗಿ ಪ್ಲಾನ್ ಮಾಡಿದ್ದರು. ಅದರಂತೆ ಗೋವಿಂದ ಬಾಬುಗೆ ಹೇಳಿದ ಚೈತ್ರ ಅಂಡ್ ಗ್ಯಾಂಗ್ ನಂತರ ಮೂರುವರೆ ಕೋಟಿ ಚೈತ್ರ ಕೈ ಸೇರಿತ್ತು ಎನ್ನಲಾಗಿದೆ.ಈ ಎಲ್ಲಾ ವಿಚಾರವನ್ನು ಸಿಸಿಬಿ ಮುಂದೆ ಚೈತ್ರ ಬಾಯಿ ಬಿಟ್ಟಿದ್ದಾಳೆ ಎನ್ನಲಾಗಿದೆ.

Leave a Comment

Your email address will not be published. Required fields are marked *