Ad Widget .

ಚೈತ್ರಾ ಕುಂದಾಪುರ ಹಾಗೂ ಭಜರಂಗದಳಕ್ಕೆ ಸಂಬಂಧವಿಲ್ಲ – ಶರಣ್ ಪಂಪ್ವೆಲ್

ಸಮಗ್ರ ನ್ಯೂಸ್: ‘ಬಿಜೆಪಿ ಟಿಕೆಟ್‌ ಕೊಡಿಸುವ ನೆಪದಲ್ಲಿ ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಗೆ ವಂಚಿಸಿದ ಪ್ರಕರಣದ ಆರೋಪಿ ಚೈತ್ರಾ ಕುಂದಾಪುರಗೂ ಬಜರಂಗದಳಕ್ಕೂ ಸಂಬಂಧವಿಲ್ಲ. ಆಕೆ ನಮ್ಮ ಸಂಘಟನೆಯ ಸದಸ್ಯೆ ಅಲ್ಲ’ ಎಂದು ವಿಎಚ್‌ಪಿ ಪ್ರಾಂತ ಸಹಕಾರ್ಯದರ್ಶಿ ಶರಣ್‌ ಪಂಪ್‌ವೆಲ್‌ ಹೇಳಿದರು.

Ad Widget . Ad Widget .

ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ಆಕೆ ಉತ್ತಮ ಭಾಷಣ ಮಾಡುತ್ತಿದ್ದರು. ಆ ಕಾರಣಕ್ಕೆ ಬಜರಂಗ ದಳದ ಕಾರ್ಯಕ್ರಮಗಳಿಗೆ ಆಹ್ವಾನಿಸಿದ್ದು ನಿಜ. ಅವರು ತಪ್ಪು ಮಾಡಿದ್ದರೆ ಅದಕ್ಕೆ ಶಿಕ್ಷೆ ಆಗಲಿ. ನಮ್ಮ ಸಂಘಟನೆ ಇಂತಹ ಅಕ್ರಮಗಳಿಗೆ ಆಸ್ಪದ ನೀಡುವುದಿಲ್ಲ. ಇಂತಹ ಪ್ರಕರಣಗಳು ಮರುಕಳಿಸಬಾರದು. ಈ ಪ‍್ರಕರಣದಲ್ಲಿ ಯಾರೇ ತಪ್ಪು ಮಾಡಿದ್ದರೂ ಅವರನ್ನು ಶಿಕ್ಷೆಗೆ ಒಳಪಡಿಸಬೇಕು’ ಎಂದರು.

Ad Widget . Ad Widget .

‘ಈ ವಂಚನೆ ಪ್ರಕರಣದ ಬಗ್ಗೆ ಗುರುಪುರ ವಜ್ರದೇಹಿ ಮಠದ ಸ್ವಾಮೀಜಿ ಎರಡು ತಿಂಗಳ ಹಿಂದೆ ನನ್ನ ಗಮನಕ್ಕೆ ತಂದಿದ್ದು ನಿಜ. ನೀವು ತಪ್ಪು ಮಾಡಿಲ್ಲವಾದರೆ ತಲೆಕೆಡಿಸಿಕೊಳ್ಳಬೇಡಿ ಎಂದು ಧೈರ್ಯ ಹೇಳಿದ್ದೆ’ ಎಂದರು.

Leave a Comment

Your email address will not be published. Required fields are marked *