Ad Widget .

ವಿಟ್ಲ: 52 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ|ಧಾರ್ಮಿಕ ಸಭೆಯಲ್ಲಿ ಯುವ ವಾಗ್ಮಿ ಹಾರಿಕಾ ಮಂಜುನಾಥ್ ಭಾಷಣ

ಸಮಗ್ರ ನ್ಯೂಸ್: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರೇರಣೆಯಿಂದ ಕಳೆದ 51 ವರ್ಷಗಳಿಂದ ವಿಜೃಂಭಣೆಯಿಂದ ಆಚರಿಸಿಕೊಂಡು ಬರಲಾಗುತ್ತಿರುವ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಧರ್ಮನಗರ ಕಂಬಳಬೆಟ್ಟು ಇಲ್ಲಿ ಈ ಬಾರಿ 52 ನೇ ವರ್ಷದ ಶ್ರೀ ಮಹಾಗಣೇಶೋತ್ಸವ ಬಹಳ ಅದ್ದೂರಿಯಾಗಿ ಜರಗುತ್ತಿದೆ.

Ad Widget . Ad Widget .

52ನೇ ವರ್ಷದ ಶ್ರೀ ಮಹಾ ಗಣೇಶೋತ್ಸವದ ಎರಡನೇ ದಿನದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಭಾರತ ಎನ್ನುವ ಕಲ್ಪನೆಯನ್ನು ಕಣ್ಣ ಮುಂದೆ ಇಟ್ಟುಕೊಂಡಿರುವ ಬೆಂಗಳೂರಿನ ಯುವವಾಗ್ಮಿ ಹಾರಿಕಾ ಮಂಜುನಾಥ್ ಭಾಗವಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಸನಾತನ ಧರ್ಮದ ಆಚಾರ ವಿಚಾರ ಮೂಲ, ಬಾಲ ಗಂಗಾಧರ ತಿಲಕ್ ಯಾಕಾಗಿ ಗಣೇಶೋತ್ಸವವನ್ನು ಆರಂಭಿಸಿದರು, ಇವೆಲ್ಲದುದರ ಬಗ್ಗೆ ಧಾರ್ಮಿಕ ಪ್ರವಚನ ಗೈದರು.

Ad Widget . Ad Widget .

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಸಮಿತಿ ಅಧ್ಯಕ್ಷ ರಾಘವ ಮಂಜಪ್ಪಾಲು ಉಪಸ್ಥಿರಿದ್ದರು. ಧನ್ವಿ ಅಮೃತವಚನ ಮತ್ತು ಚರಣ್ ಅಮೈ ವೈಯಕ್ತಿಕ ಗೀತೆ ಹಾಡಿದರು. ಕಾರ್ತಿಕ್ ಶೆಟ್ಟಿ ಮೂಡೈಮಾರ್ ಸ್ವಾಗತಿಸಿ, ಸುನೀತಾ ಧರ್ಮನಗರ ವಂದಿಸಿದರು. ನವೀನ್ ಮೂಡೈಮಾರ್ ಕಾರ್ಯಕ್ರಮವನ್ನು ನಿರೂಪಿಸಿದರು.

Leave a Comment

Your email address will not be published. Required fields are marked *