ಸಮಗ್ರ ನ್ಯೂಸ್: ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಏಳನೇ ತರಗತಿ ವಿದ್ಯಾರ್ಥಿ ಮೋನಿಷ್ ಟಿ. ಅವರ ಹೆಸರು ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಪುಟದಲ್ಲಿ ದಾಖಲು.
ಪೂರ್ಣ ಉಷ್ಟ್ರಸನಾದಲ್ಲಿ ಇಪ್ಪತೈದು ನಿಮಿಷ ಹದಿನೇಳು ಸೆಕುಂಡುಗಳ ಕಾಲ ಒಂದೇ ಸ್ಥಿತಿಯಲ್ಲಿ ಇರುವುದರ ಮೂಲಕ ತನ್ನ ಹೆಸರನ್ನು ದಾಖಲೆ ಬರೆಸಿಕೊಂಡಿದ್ದಾರೆ. ಮೋನಿಷ್ ಟಿ. ಅವರು ವಿಶ್ವನಾಥ ತಂಟೆಪ್ಪಾಡಿ ಮತ್ತು ದಯಾಮಣಿ ದಂಪತಿಗಳ ಪುತ್ರ.
ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಇವರು ಇಂಡಿಯಾ ಬುಕ್ ಆಫ್ ರೆಕಾರ್ಡ್, ಮತ್ತು ನೊಬೆಲ್ ಬುಕ್ ಆಫ್ ರೆಕಾರ್ಡ್ ನಲ್ಲಿ ಹೆಸರು ಬರೆಸಿಕೊಂಡಿದ್ದರು. ಇವರು ಯೋಗಗುರು ಸಂತೋಷ್ ಮುಂಡಕಜೆ ಮತ್ತು ಪ್ರಗತಿ ವಿದ್ಯಾಸಂಸ್ಥೆಯ ಯೋಗ ಶಿಕ್ಷಕಿ ಶಶಿಕಲಾ ಅವರಿಂದ ಯೋಗಾಭ್ಯಾಸವನ್ನು ಮಾಡುತ್ತಿದ್ದಾರೆ.